23.6 C
ಬೆಂಗಳೂರು
September 21, 2026
kranthikidi.com
ಕ್ರೀಡೆತಾಜಾಸುದ್ದಿವಿದೇಶ

ಇಂದಿನಿಂದ 23ನೇ ಆವೃತ್ತಿಯ FIFA ವಿಶ್ವಕಪ್ ಆರಂಭ..!

ಮೆಕ್ಸಿಕೋ : ಕ್ರೀಡಾಲೋಕದ ಅತ್ಯಂತ ರೋಮಾಂಚಕ ಹಾಗೂ ಪ್ರತಿಷ್ಠಿತ ಕ್ರೀಡಾಕೂಟ 2026ರ ಫಿಫಾ ವಿಶ್ವಕಪ್ ಇಂದಿನಿಂದ (ಜೂ.11) ಆರಂಭವಾಗಲಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಮೂರು ರಾಷ್ಟ್ರಗಳಾದ ಅಮೆರಿಕ, ಕೆನಡಾ ಮತ್ತು ಮೆಕ್ಸಿಕೋ ಜಂಟಿಯಾಗಿ ಈ ಜಾಗತಿಕ ಫುಟ್‌ಬಾಲ್ ಹಬ್ಬವನ್ನು ಆಯೋಜಿಸುತ್ತಿವೆ. ಮೆಕ್ಸಿಕೋ ಸಿಟಿಯ ಐತಿಹಾಸಿಕ ಅಜ್ಟೆಕಾ ಕ್ರೀಡಾಂಗಣದಲ್ಲಿ ಅದ್ಧೂರಿ ಉದ್ಘಾಟನಾ ಸಮಾರಂಭದೊಂದಿಗೆ ಇಂದಿನ ಪಂದ್ಯ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಮೆಕ್ಸಿಕೋ ತಂಡವು ಸೌತ್ ಆಫ್ರಿಕಾ ಎದುರು ಕಣಕ್ಕಿಳಿಯಲಿದೆ.

ಇದುವರೆಗೆ ಕೇವಲ 32 ತಂಡಗಳು ಮಾತ್ರ ಭಾಗವಹಿಸುತ್ತಿದ್ದ ವಿಶ್ವಕಪ್‌ನಲ್ಲಿ, ಈ ಬಾರಿ ದಾಖಲೆಯ 48 ರಾಷ್ಟ್ರಗಳು ಕಣಕ್ಕಿಳಿಯುತ್ತಿವೆ. ಹೀಗಾಗಿ ಪಂದ್ಯಗಳ ರೋಮಾಂಚನ ದುಪ್ಪಟ್ಟಾಗಲಿದೆ. ಒಟ್ಟು 39 ದಿನಗಳ ಕಾಲ ನಡೆಯಲಿರುವ ಈ ಟೂರ್ನಿಯಲ್ಲಿ ಕಪ್‌ಗಾಗಿ 104 ಪಂದ್ಯಗಳು ಜರುಗಲಿವೆ. ಜು.19ರಂದು ನ್ಯೂಜೆರ್ಸಿಯಲ್ಲಿ (New Jersey) ಹೈ-ವೋಲ್ಟೇಜ್ ಫೈನಲ್ ಪಂದ್ಯ ನಡೆಯಲಿದೆ. ಇದನ್ನೂ ಓದಿ : ಪ್ರಧಾನಮಂತ್ರಿಗಳಾಗಿ 4399 ದಿನ ನಿರಂತರ ಸೇವೆ; ಬಿ.ವೈ. ವಿಜಯೇಂದ್ರ ಮೆಚ್ಚುಗೆ..!

ತಂಡಗಳನ್ನು ತಲಾ ನಾಲ್ಕರಂತೆ 12 ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಹಾಗೂ ಮೂರನೇ ಸ್ಥಾನ ಪಡೆಯುವ 8 ಅತ್ಯುತ್ತಮ ತಂಡಗಳು ನಾಕೌಟ್ (ರೌಂಡ್ ಆಫ್ 32) ಹಂತಕ್ಕೆ ಲಗ್ಗೆ ಇಡಲಿವೆ. ಫುಟ್‌ಬಾಲ್ ಲೋಕದ ಶ್ರೇಷ್ಠ ಆಟಗಾರರಾದ ಲಿಯೋನೆಲ್ ಮೆಸ್ಸಿ (ಅರ್ಜೆಂಟೀನಾ) ಮತ್ತು ಕ್ರಿಸ್ಟಿಯಾನೊ ರೊನಾಲ್ಡೊ (ಪೋರ್ಚುಗಲ್) ಆಡಲಿರುವ ಕೊನೆಯ ವಿಶ್ವಕಪ್ ಇದಾಗಿರಲಿದೆ ಎನ್ನಲಾಗಿದೆ. ಡಿಫೆಂಡಿಂಗ್ ಚಾಂಪಿಯನ್ ಅರ್ಜೆಂಟೀನಾ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಹೋರಾಡಿದರೆ, ಬ್ರೆಜಿಲ್, ಫ್ರಾನ್ಸ್ ಮತ್ತು ಸ್ಪೇನ್ ತಂಡಗಳು ಪ್ರಬಲ ಪೈಪೋಟಿ ನೀಡಲು ಸಜ್ಜಾಗಿವೆ.

Related posts

ನರೇಗಲ್ ಘಟನೆ ತನಿಖೆಗೆ ಎಸ್ ಐಟಿ ರಚನೆಗೆ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹ..!

Kalpana Editor

ಇಂದು ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಉತ್ತರ ಕ್ರಿಯಾದಿ ಕಾರ್ಯ – ಜನರಿಗೆ ಅನ್ನಸಂತರ್ಪಣೆ ವ್ಯವಸ್ಥೆ..!

Kalpana Editor

ಇವತ್ತು ರಾತ್ರಿಯೇ ಸಚಿವ ಸಂಪುಟ ವಿಸ್ತರಣೆ ಫೈನಲ್‌ ಆಗಬಹುದು – ಸಿದ್ದರಾಮಯ್ಯ

Kalpana Editor