ಹಾನಗಲ್ ತಾಲೂಕಿನ ನರೇಗಲ್ ಗ್ರಾಮದಲ್ಲಿನಡೆದ ಘಟನೆಯ ತನಿಖೆಗೆ ಎಸ್ ಐಟಿ ರಚನೆ ಮಾಡಬೇಕು, ಹಾವೇರಿ ಎಸ್ಪಿ ಮೇಲೆ ಕ್ರಮ ಕೈಗೊಂಡು, ಹಾನಗಲ್ ಸಿಪಿಐ ಮತ್ತು ಎಸ್ ಐ ಅವರನ್ನು ಅಮಾನತು ಮಾಡುವಂತೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸತ್ತು ಹೋಗಿದೆ. ನಿರಂತರವಾಗಿ ಕೋಮು ಗಲಭೆ ಆಗುತ್ತಿವೆ. ಇದು ಮೊದಲನೇಯದಲ್ಲ, ಒಂದು ವರ್ಷದಲ್ಲಿ 7ನೇದ್ದೋ, 8ನೇದ್ದೋ. ನರೇಗಲ್ ದಲ್ಲಿ ಸುಮಾರು ಮೂರು ದಶಕಗಳಿಂದ ಹಲವಾರು ಸಂದರ್ಭಗಳಲ್ಲಿ ಕೋಮು ಶಾಂತಿ ಕದಡಿರುವುದನ್ನು ನಾವು ನೋಡಿದ್ದೇವೆ. ಅದಕ್ಕೆ ಶಾಶ್ವತ ಪರಿಹಾರವಾಗಿ ಕೂಡ ಕೆಲವು ಕ್ರಮಗಳನ್ನ ನಮ್ಮ ಸರ್ಕಾರ ಇದ್ದಾಗ, ಉದಾಸಿ ಅವರು ಇದ್ದಾಗ ಮಾಡಿದ್ದೇವು. ಮಸೀದಿಗೆ ಹೆಚ್ಚಿನ ಜಾಗವನ್ನ ಕೊಟ್ಟು ಅವರಿಗೆ ಹೋಗಿ ಬರೋದಕ್ಕೆ ಬೇರೆ ಬಾಗಿಲನ್ನು ಮಾಡಿ ವ್ಯವಸ್ಥೆ ಮಾಡಿ, ಅವತ್ತಿನ ಡಿಸಿ ಅವರು ಪ್ರೊಸೀಡಿಂಗ್ ಮಾಡಿ, ಮುಖ್ಯ ರಸ್ತೆಯನ್ನು ಎಲ್ಲರೂ ಉಪಯೋಗಿಸಬೇಕೆಂದು ತೀರ್ಮಾನ ಆಗಿದೆ.
ಇದನ್ನು ಯಾವ ಪೊಲೀಸರು ಪಾಲಿಸಿತ್ತಿಲ್ಲ. ಅದು ನೋಡೋಕು ತಯಾರಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವವರೇ ಇವತ್ತು ಕಾನೂನು ಸುವ್ಯವಸ್ಥೆ ಹದಗೆಡಲುಕೆ ಕಾರಣ. ಉದಾಹರಣೆಗೆ, ಈ ಘಟನೆಯ ಪೂರ್ವಭಾವಿಯಾಗಿ ಏನು ಕ್ರಮ ತೆಗೆದುಕೊಂಡಿಲ್ಲ. ನರೇಗಲ್, ಬೊಮ್ಮನಹಳ್ಳಿ, ಬಂಕಾಪುರ ಇವೆಲ್ಲವೂ ಕೂಡ ಸೂಕ್ಷ್ಮ ಪ್ರದೇಶಗಳಿವೆ. ಎಲ್ಲೂ ಕ್ರಮ ತೆಗೆದುಕೊಂಡಿಲ್ಲ ಜಿಲ್ಲೆಯಲ್ಲಿ 112 ಕಳಿಸಿದ್ದಾರಂತೆ, 112 ದಲ್ಲಿ ಇಬ್ಬರು ಪೊಲಿಸರು ಇರುತ್ತಾರೆ. ಇಂತಹ ಸೂಕ್ಷ್ಮ ಪ್ರದೇಶದಲ್ಲಿ ನಿಯಂತ್ರಣ ಮಾಡಲು ಸಾಧ್ಯನಾ? ಇದು ಪೊಲಿಸರ ಸಂಪೂರ್ಣ ನಿರ್ಲಕ್ಷ್ಯ, ಇಲ್ಲಿಯ ಸಿಪಿಐ, ಇಲ್ಲಿಯ ಎಸ್ಐದು. ಆ ಮೇಲೆ ಪೊಲಿಸ್ ವರಿಷ್ಠಾಧಿಕಾರಿಯ ನಿರ್ಲಕ್ಷ್ಯ. ಇದು ವೈಯಕ್ತಿಕ ಅಂದರು.
ನಾನು ಇವತ್ತು ಎಸ್ಪಿ ಅವರಿಗೆ ಕೇಳ್ತೀನಿ ಅದು ಹೆಂಗೆ ವೈಯಕ್ತಿಕ ಹೇಳಿ..? ಯಾವುದಾದರೂ ಅವರ ನಡುವೆ ಯಾವುದಾದರೂ ಹೊಲದ ವ್ಯಾಜ್ಯ ಇದೆಯಾ, ಇನ್ನೊಂದು ವ್ಯಾಜ್ಯ ಇದೆಯಾ? ಹೆಂಗೆ ನೀವು ವೈಯಕ್ತಿಕ ಅಂತ ಹೇಳಿದ್ದೀರಾ? ಅಂದರೆ ಇದನ್ನ ಬಹಳ ಹಗುರವಾಗಿ ತೆಗೆದುಕೊಂಡಿದ್ದೀರಿ, ಎರಡನೇಯದು ದಾರಿ ತಪ್ಪಿಸು ಪ್ರಯತ್ನ ಮಾಡುತ್ತೀರಿ, ಮೂರನೇಯದು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದ್ದೀರಿ. ಅದಕ್ಕೆ ಎಸ್ಪಿ ಮೇಲೆ ಕ್ರಮ ಕೈಗೊಳ್ಳಬೇಕು, ಹಾನಗಲ್ ಸಿಪಿಐ ಮತ್ತು ಎಸ್ಐ ಅವರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿದರು.
ಅಲ್ಲದೇ ಈ ಪ್ರಕರಣದ ಕುರಿತು ತನಿಖೆ ಮಾಡಲು ಒಂದು ಎಸ್‌ಐಟಿ ರಚನೆ ಮಾಡಬೇಕು. ಜಿಲ್ಲಾ ಪೊಲೀಸರಿಂದ ನ್ಯಾಯ ಸಿಗುವುದಿಲ್ಲ. ಇವರು ಏನು ಮಾಡುತ್ತಾರೆ ಅಂದರೆ ಏನಾದರು ಗಲಾಟೆ ಆದರೆ ಆ ಕಡೆ ಒಂದು 20 ಜನ, ಈ ಕಡೆ ಒಂದು 20 ಜನರ ಮೇಲೆ ಕೇಸ್ ಹಾಕಿ ಮುಗಿಸಿ ಬಿಡುತ್ತಾರೆ. ಇದೇ ಹಾನಗಲ್ ನಲ್ಲಿ ಈ ಟೆರರಿಸ್ಟ್ ಜೊತೆಗೆ ಸೇರಿರುವಂತವರನ್ನೆಲ್ಲ, ಕೇಸ್ ಬುಕ್ ಮಾಡಿ ಅವರನ್ನು ಬೇಲ್ ಮೇಲೆ ರಿಲೀಸ್ ಆದಾಗ ಓಪನ್ ಆಗಿ ಮೆರವಣಿಗೆ ಮಾಡಿದ್ದರು. ಗ್ಯಾಂಗ್ ರೇಪ್ ಪ್ರಕರಣದಲ್ಲಿ ಬಹಿರಂಗವಾಗಿ ಮೆರವಣಿಗೆ ಮಾಡಿದ್ದರು. ಹಾನಗಲ್‌ದಲ್ಲಿ ಏನು ಮಾಡಿದರೂ ಪೊಲೀಸರು ಅವರನ್ನು ಏನೂ ಮಾಡಕ್ಕಾಗಿಲ್ಲ. ಏನೋ ಒಂದು ದೊಡ್ಡ ಯುದ್ಧ ಗೆದ್ದು ಬಂದವರ ಹಾಗೆ ಗ್ಯಾಂಗ್ ರೇಪ್ ಮಾಡಿದವರು ಪೊಲೀಸರ ರಕ್ಷಣೆಯಲ್ಲಿ ಬಹಿರಂಗ ಮೆರವಣಿಗೆ ಮಾಡಿದರು ಎಂದು ಆರೋಪಿಸಿದ್ದರು.
ತುಷ್ಟೀಕರಣದ ರಾಜಕೀಯ – ಮತ್ತೆ ನಿರಂತರವಾಗಿ ಸಣ್ಣ ಪುಟ್ಟ ಘಟನೆ ನಡೆಯಲು ಕುಮ್ಮಕ್ಕಿದೆ. ತುಷ್ಟೀಕರಣದ ರಾಜಕಾರಣದ ಪ್ರತಿಫಲವಾಗಿ ಯಾರು ಇತರ ಹಿಂಸೆಯಲ್ಲಿ ತೊಡಗುತ್ತಾರೆ ಅವರಿಗೆ ರಕ್ಷಣೆ ಇದೆ, ಯಾರು ಹಿಂಸೆಯಲ್ಲಿ ಬಲಿ ಆಗುತ್ತಾರೆ ಅವರ ಮೇಲೆ ಕೇಸ್ ಇದೆ. ಆದ್ದರಿಂದ ಇದು ಇನ್ನುಮುಂದೆ ನಡೆಯುವುದಿಲ್ಲ ಜನರ ತಾಳ್ಮೆ ಪರೀಕ್ಷೆ ಮಾಡಬಾರದು. ಯಾವ ಅಧಿಕಾರ, ಯಾವ ಸರ್ಕಾರ ಕೂಡ ಶಾಶ್ವತ ಅಲ್ಲ. ಜನರ ಆಶೀರ್ವಾದ ಬಹಳ ಮುಖ್ಯ. ಆಶೀರ್ವಾದ ಮಾಡಿರುವ ಜನರಿಗೇ ನೀವು ರಕ್ಷಣೆ ಕೊಡುವುದಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಮೊದಲ ಕರ್ತವ್ಯ. ಅದರಲ್ಲೂ ಇವರು ವಿಫಲವಾಗಿದ್ದಾರೆ.
ಅದಕ್ಕೆ ಈ ಬಗ್ಗೆ ನಾನು ಮುಖ್ಯಮಂತ್ರಿಗಳ ಗಮನಕ್ಕೂ ತರುತ್ತೇನೆ. ಮತ್ತು ಗೃಹ ಸಚಿವರ ಗಮನಕ್ಕೂ ತರುತ್ತೇನೆ, ಮತ್ತು ಡಿಜಿ ಅವರ ಗನಮಕ್ಕೂ ಕೂಡ ತರಿತ್ತೇನೆ. ಈಗಾಗಲೇ ಎಸ್‌ಪಿ ಅವರಿಗೆ ಮಾತಾದಿದ್ದೇನೆ. ಮೇಲಧಿಕಾರಿಗಳಿಗೆ ಮಾತಾಡಿ ಒಂದು ಎಸ್ ಐಟಿ ರಚನೆ ಆಗಬೇಕು, ಇಲ್ಲಿಯ ಸ್ಥಳೀಯ ಇಬ್ಬರು ಆಫೀಸರ್ಸ್ ಸಸ್ಪೆಂಡ್ ಆಗಬೇಕು. ಅಂದಾಗ ಮಾತ್ರ ನ್ಯಾಯ ಸಿಗುತ್ತದೆ ಎಂದು ಹೇಳಿದರು.
ಹಾನಗಲ್ ಶಾಸಕರು ಈ ಪ್ರಕರಣವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದೀರಾ ಎಂದು ಆರೋಪಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಗ್ರಾಮದಲ್ಲಿ ಎರಡು ಕೋಮಿನ ನಡುವೆ ಜಗಳ ಇದ್ದಾಗ ಎಸ್ಪಿ ವೈಯಕ್ತಿಕ ಜಗಳ ಅಂತ ಹೆಂಗೆ ಹೇಳಿದರು? ಅವರು ತೋರಿಸಿಕೊಡಲಿ, ವೈಯಕ್ತಿಕ ಏನಾದರೂ ಇದ್ದರೆ, ಹಿನ್ನೆಲೆ ಇದ್ದರೆ ತಿಳಿಸಲಿ. ನಿಮ್ಮ ತಪ್ಪನ್ನು ಮುಚ್ಚಿ ಹಾಕಿಕೊಳ್ಳುವ ಸಲುವಾಗಿ, ನಿಮ್ಮ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳುವ ಸಲುವಾಗಿ, ತುಷ್ಟೀಕರಣದ ರಾಜಕಾರಣವನ್ನು ಸಮರ್ಥಿಸಿಕೊಳ್ಳುವ ಸಲುವಾಗಿ ಈ ತರಹ ಮಾತುಗಳು ಬರುತ್ತವೆ ಎಂದು ಹೇಳಿದರು.
ಇಬ್ಬರ ಮೇಲೂ ಕೇಸ್ – ಈ ಪ್ರಕರಣದಲ್ಲಿ ಹಿಂದುಗಳನ್ನೂ ಆರೋಪಿಗಳಾಗಿ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರು ಹೊಡೆತ ತಿಂದಿದ್ದಾರೆ ಅವರನ್ನು ಆರೋಪಿ ಮಾಡಿದ್ದಾರೆ, ಮತ್ತೆ ಯಾರು ಘಟನಾ ಸ್ಥಳದಲ್ಲಿ ಇಲ್ಲ ಅವರನ್ನ ಆರೋಪಿ ಮಾಡಿದ್ದಾರೆ. ಪೊಲೀಸರೇ ಇದಕ್ಕೆಲ್ಲ ಕಾರಣ. ಎರಡು ಕಡೆ ಕೇಸ್ ಮಾಡಿಬಿಟ್ಟರೆ ಮುಗಿದುಹೋಯಿತು. ಆದ್ದರಿಂದ ಈ ನೀತಿ ಸರಿಯಲ್ಲ. ಯಾರು ತಪ್ಪು ಮಾಡಿದ್ದಾರೆ ಅವರದು ತಪ್ಪು. ತಪ್ಪು ಮಾಡಿಲ್ಲದವರನ್ನು, ಹೊಡೆತ ತಿಂದವರನ್ನು ನೀವು ಆರೋಪಿಗಳನ್ನಾಗಿ ಮಾಡಿದರೆ..? ಆ ಕಡೆ 26 ಜನ, ಈ ಕಡೆ 26 ಜನ ಅದು ಯಾವಾಗ್ಲೂ ಅದೇ ರೀತಿ ಮಾಡುತ್ತಾರೆ.
ಈ ಜಿಲ್ಲಾ ವರಿಷ್ಠಾಧಿಕಾರಿಗಳು ಬಂದ ಮೇಲೆ ಈ ರೀತಿ ಆಗುತ್ತಿದೆ. ಇದೇ ಸಂದರ್ಭದಲ್ಲಿ ರಟ್ಟಿಹಳ್ಳಿಯ ಘಟನೆ ಕುರಿತು ಕೇಳಿದ ಪ್ರಶ್ನೆಗೆ ರಟ್ಟಿಹಳ್ಳಿಯಲ್ಲೂ ಕೂಡ ಘಟನೆ ಆಗಿದೆ. ಹಿಂದೆ ಕಾಗಿನೆಲೆಯಲ್ಲಿ ಘಟನೆ ಆಗಿದೆ. ಇಡೀ ಜಿಲ್ಲೆಯಲ್ಲೇ ಘಟನೆ ಆಗಿದೆ. ಇಸ್ಪೀಟು, ಓಸಿ ರಕ್ಷಣೆ ಕೊಡುವುದಕ್ಕೆ ಪೊಲೀಸರು ಬಳಕೆಯಾಗಿದ್ದಾರೆ ಹೊರತಾಗಿ ಇಲ್ಲಿ ಕೋಮು ಸೌಹಾರ್ದತೆಯನ್ನು ಕಾಪಾಡುವುದಕ್ಕೆ ಪೊಲೀಸರು ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಕಾನೂನು ಹೋರಾಟ – ಬಿಜೆಪಿ ಇದನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇವೆ. ಇಲ್ಲಿಗೆ ಬಿಡುವುದಿಲ್ಲ. ಮೊದಲನೆಯದಾಗಿ ಗಾಯಾಳುಗಳಿಗೆ ಒಳ್ಳೆಯ ಚಿಕಿತ್ಸೆ ಕೊಟ್ಟು ಅವರಿಗೆಲ್ಲಾ ಸಹಕಾರ ಮಾಡಿ ಅವರು ಮನೆಗೆ ಬರುವಂತದ್ದು ಎರಡನೆಯದು, ಎಲ್ಲಿಯವರೆಗೂ ಈ ಅಧಿಕಾರಿಗಳ ಮೇಲೆ ಕ್ರಮ ಆಗುವುದಿಲ್ಲ ಅಲ್ಲಿಯವರೆಗೂ ನಮ್ಮ ಹೋರಾಟವನ್ನು ನಾವು ಪ್ರಾರಂಭ ಮಾಡುತ್ತೇವೆ.
ಹಾನಗಲ್‌ನಲ್ಲೂ ಮಾಡುತ್ತೇವೆ, ಹಾವೇರಿಯಲ್ಲೂ ಮಾಡುತ್ತೇವೆ, ಹಾವೇರಿಯಿಂದ ಹಾನಗಲ್‌ಗೂ ಮಾಡುತ್ತೇವೆ ಮತ್ತು ಎಲ್ಲೆಲ್ಲಿ ಆಗುತ್ತೆ ಅಲ್ಲಲ್ಲಿ ಉಗ್ರವಾದಂತಹ ಹೋರಾಟವನ್ನು ನಾವು ಖಂಡಿತವಾಗಿಯೂ ಮಾಡುತ್ತೇವೆ. ಅದರ ಜೊತೆಗೆ ಕಾನೂನು ಹೋರಾಟವನ್ನು ಕೂಡ ಮಾಡುತ್ತೇವೆ. ಜನರಿಗೆ ಕಾನೂನಿನ ರಕ್ಷಣೆಯನ್ನು ನಾನು ಕೊಡುತ್ತೇನೆ. ಅದಕ್ಕೆ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳಿದರು. ಇದನ್ನೂ ಓದಿ : ಎಸ್‌ಐಆರ್ ಅರ್ಜಿಗಳು ಬೀದಿಯಲ್ಲಿ ವಿತರಣೆ; ಬಾಂಗ್ಲಾ ನಿವಾಸಿಗಳನ್ನು ಮತದಾರರ ಪಟ್ಟಿಗೆ ಸೇರಿಸುವ ಷಡ್ಯಂತ್ರ ಮಾಡಿದ ಕಾಂಗ್ರೆಸ್ – ಆರ್.ಅಶೋಕ
