29 C
ಬೆಂಗಳೂರು
September 20, 2026
kranthikidi.com
ತಾಜಾಸುದ್ದಿಸಿನಿಮಾ

ವಿಜಯ್, ಸಂಗೀತಾ‌ ವಿಚ್ಛೇದನ ಅರ್ಜಿ ವಿಚಾರಣೆ; ಪತ್ನಿ ಜೊತೆ ರಾಜಿ ಮಾಡ್ಕೊಳ್ತಾರಾ ದಳಪತಿ

ಚೆನ್ನೈ : ತಮಿಳುನಾಡು ಸಿಎಂ ವಿಜಯ್ ಹಾಗೂ ಅವರ ಪತ್ನಿ ಸಂಗೀತಾ ಅವರು ಸಲ್ಲಿಸಿದ್ದ, ವಿಚ್ಛೇದನ ಅರ್ಜಿ ವಿಚಾರಣೆ ಚೆಂಗಲ್ಪಟ್ಟು, ಕೌಟುಂಬಿಕ ನ್ಯಾಯಾಲದಲ್ಲಿ ಇಂದು (ಜೂ.15) ನಡೆಯಲಿದೆ. ಪತ್ನಿ ಜೊತೆ ವಿಜಯ್ ರಾಜಿ ಮಾಡಿಕೊಳ್ತಾರಾ..? ಈ ಮೂಲಕ ವಿಜಯ್ ಸಂಗೀತಾ ದಂಪತಿ ಮತ್ತೆ ಒಂದಾಗ್ತಾರಾ..? ಎಂಬ ಚರ್ಚೆ ತಮಿಳುನಾಡಲ್ಲಿ ಜೋರಾಗಿದೆ. ಕೋರ್ಟ್‌ನಲ್ಲಿ ದಂಪತಿ ಪರಸ್ಪರ ಮುಖಾಮುಖಿ ಆಗಬೇಕಿದೆ.

ಫೆ.24 ರಂದು ವಿಜಯ್ ಪತ್ನಿ ಸಂಗೀತಾ ವಿಚ್ಛೇದನ ಕೋರಿ ತಮಿಳುನಾಡಿನ ಚಂಗಲ್ಪಟ್ಟು ಜಿಲ್ಲೆಯ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಕಳೆದ ಏ.20ಕ್ಕೆ ಅರ್ಜಿ ವಿಚಾರಣೆಗೆ ದಿನಾಂಕ ನಿಗದಿಯಾಗಿತ್ತು. ಆದರೆ ಇಬ್ಬರೂ ಹಾಜರಾಗಿರಲಿಲ್ಲ. ಎರಡೂ ಕಡೆಯ ವಕೀಲರು ವೀಡಿಯೊ ಕಾನ್ಫರೆನ್ಸ್‌ ಮೂಲಕ ವಿಚಾರಣೆ ನಡೆಸಲು ಅನುಮತಿ ಕೋರಿದ್ದರು. ಮನವಿಯನ್ನು ಪುರಸ್ಕರಿಸಿದ್ದ, ನ್ಯಾಯಾಲಯ ಇಂದು (ಜೂ.15) ವಿಚಾರಣೆ ನಡೆಸಲು ದಿನಾಂಕ ನಿಗದಿ ಪಡಿಸಿತ್ತು. ವಿಜಯ್ ಹಾಗೂ ಸಂಗೀತಾ ವೀಡಿಯೋ ಕಾನ್ಸರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗುವ ಸಂಭವಿದೆ.

ವಿಜಯ್ ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳ ಬಳಿಕ ವಿಚಾರಣೆ ನಡೆಯುವುದರಿಂದ ಇದು ಮಹತ್ವದ್ದಾಗಿದೆ. ಮುಖ್ಯಮಂತ್ರಿ ನ್ಯಾಯಾಲಯದ ಮುಂದೆ ಖುದ್ದಾಗಿ ಹಾಜರಾಗುತ್ತಾರೆಯೇ ಅಥವಾ ನ್ಯಾಯಾಲಯದ ಅನುಮೋದನೆಗೆ ಒಳಪಟ್ಟು ವರ್ಚುವಲ್ ವಿಧಾನಗಳ ಮೂಲಕ ಭಾಗವಹಿಸುತ್ತಾರೆಯೇ ಎಂಬ ಬಗ್ಗೆ ಊಹಾಪೋಹಗಳು ಹರಡಿವೆ. ಇದನ್ನೂ ಓದಿ : ಮಾನ ಹರಾಜು ಹಾಕಿದ ಬೆಂಗಳೂರು ಪೊಲೀಸರು; PSI ಸೇರಿ ಮೂವರ ಅರೆಸ್ಟ್‌…!

ವಿಜಯ್ ಹಾಗೂ ಸಂಗೀತಾ ಒಂದಾಗಲಿದ್ದಾರೆ ಎಂಬ ಚರ್ಚೆಯೂ ಶುರುವಾಗಿದೆ. ವಿಜಯ್ ತಾಯಿ ಶೋಭಾ ಚಂದ್ರಶೇಖರ್ ಮಧ್ಯಸ್ಥಿಕೆಯಲ್ಲಿ ವಿಜಯ್ ಸಂಗೀತಾ ಮನಸ್ಸು ಬದಲಿಸಿ ವಿಚ್ಛೇದನ ನಿರ್ಧಾರವನ್ನ ಬದಲಿಸಿಕೊಂಡಿದ್ದಾರೆ. ಹೀಗಾಗಿ ಇಂದು ನಡೆಯಲಿರುವ ವಿಚಾರಣೆ ಮಹತ್ವದ್ದಾಗಿದೆ.

Related posts

ಮೋದಿ ಸರ್ಕಾರ ಜನರು ಹಾಳಾಗಿ ಹೋಗ್ಲಿ ಅಂತಾ ಬೆಲೆ ಜಾಸ್ತಿ ಮಾಡಿದ್ದಾರೆ – ಯತೀಂದ್ರ

Kalpana Editor

ದ್ವೇಷ ಭಾಷಣ ಆರೋಪ; ಬಿಜೆಪಿ ಮಾಜಿ ಶಾಸಕ ವಿರುದ್ಧ ಎಫ್‌ಐಆರ್..!

Kalpana Editor

ಸೂಪರ್ ಎಲ್ ನೀನೋ ಪರಿಣಾಮ ಎದುರಿಸಲು ಸಜ್ಜಾಗಿ; ಡಿಸಿಎಂ ಡಾ. ಜಿ.ಪರಮೇಶ್ವರ

Kalpana Editor