August 26, 2026
kranthikidi.com
ತಾಜಾಸುದ್ದಿರಾಜ್ಯ

ಸರ್ಕಾರದಿಂದ ಗ್ಯಾರಂಟಿ ಶಾಕ್; ಪರಿಷ್ಕರಣೆಯಿಂದ ಬರೋಬ್ಬರಿ 100 ಕೋಟಿ ಉಳಿತಾಯ..!

ಬೆಂಗಳೂರು : ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳನ್ನ ಪರಿಷ್ಕರಣೆ ಮಾಡುತ್ತಿದ್ದು, ಫಲಾನುಭವಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಕೆ ಮಾಡುವುದು ಕಡ್ಡಾಯ ಎಂದು ಸೂಚಿಸಿದೆ. ಇದರಿಂದ 100 ಕೋಟಿ ಉಳಿತಾಯ ಮಾಡುವ ಪ್ಲ್ಯಾನ್‌ನಲ್ಲಿದೆ.

ಗೃಹಲಕ್ಷ್ಮಿ, ಗೃಹಜ್ಯೋತಿ ಫಲಾನುಭವಿಗಳಿಗೆ ಶಾಕ್‌ ಕೊಡಲು ಮುಂದಾದ ಸರ್ಕಾರ ಮೃತರ ಹೆಸರಿನಲ್ಲಿ ಹಣ ಸಂದಾಯ, ಜಿಎಸ್‌ಟಿ ಮತ್ತು ಐಟಿ ಪಾವತಿದಾರರ ಪರಿಷ್ಕರಣೆ ಮಾಡೋದಕ್ಕೂ ಮುಂದಾಗಿದೆ. ಗ್ಯಾರಂಟಿ ಯೋಜನೆಗಳಿಂದ 3 ರಿಂದ‌ 4 ಲಕ್ಷ ಫಲಾನುಭವಿಗಳನ್ನ ಕೈಬಿಡಲು ಸಿದ್ದತೆ ನಡೆದಿದೆ.

5 ಗ್ಯಾರಂಟಿ ಯೋಜನೆಗಳ ಪ್ರಗತಿ ಹೇಗಿದೆ? – ಪ್ರಸ್ತುತ 1.24 ಕೋಟಿ ಗೃಹಲಕ್ಷ್ಮಿ ಫಲಾನುಭವಿಗಳಿಗೆ 2,000 ರೂ.ಗಳಂತೆ ಪ್ರತಿ ತಿಂಗಳು 2,480 ಕೋಟಿ ರೂ. ಹಾಗೂ ಪ್ರತಿ ವರ್ಷ 29,760 ಕೋಟಿ ರೂ. ಪಾವತಿ.., ಈ ವರ್ಷ ಏಪ್ರಿಲ್ ಅಂತ್ಯಕ್ಕೆ 72,253 ಕೋಟಿ ರೂ.ಗಳನ್ನು ಪಾವತಿಸಲಾಗಿದೆ.

ಗೃಹಜ್ಯೋತಿ ಯೋಜನೆ ಯಡಿ 1.64 ಕೋಟಿ ಫಲಾನುಭವಿಗಳಿದ್ದು, 200 ಯೂನಿಟ್‌ ಒಳಗೆ ಉಚಿತ ವಿದ್ಯುತ್ ಪಡೆಯುತ್ತಿದ್ದು, ಏಪ್ರಿಲ್ ಅಂತ್ಯಕ್ಕೆ ಇದರ ಮೊತ್ತ 26,115 ಕೋಟಿ ರೂ. ತಲುಪಿದೆ. ಅನ್ನಭಾಗ್ಯ ಯೋಜನೆ ಅಡಿ ಈವರೆವಿಗೆ ಒಟ್ಟಾರೆ 18,897 ಕೋಟಿ ರೂ. ಪಾವತಿ ಮಾಡಲಾಗಿದೆ. ಶಕ್ತಿ ಯೋಜನೆಯಡಿ ಜೂನ್‌ 10 ಕ್ಕೆ ಮಹಿಳಾ ಪ್ರಯಾಣಿಕರು 757.62 ಉಚಿತ ಟಿಕೆಟ್ ಪಡೆದಿದ್ದು, ಇದರ ಮೌಲ್ಯ 19,890 ಕೋಟಿ ರೂ.ಗಳಾಗಿರುತ್ತದೆ.

ಯುವನಿಧಿ ಯೋಜನೆ ಯಡಿ 3,59,000 ರೂ. ನಿರುದ್ಯೋಗಿ ಪದವೀಧರರು/ಡಿಪ್ಲೋಮಾ ಪದವೀಧರರಿಗೆ ತಲಾ 3000 ರೂ. ಮತ್ತು 1,500 ರೂ. ಗಳಂತೆ ಈವರೆವಿಗೆ 1,115 ಕೋಟಿ ರೂ.ಗಳು ಪಾವತಿ ಮಾಡಲಾಗಿದೆ. ಐದು ಪಂಚ ಗ್ಯಾರಂಟಿ ಯೋಜನೆಗಳಿಗೆ ಈವರೆಗೆ ಕರ್ನಾಟಕ ಸರ್ಕಾರ ಒಟ್ಟು 1,38,270.21 ರೂ. ಪಾವತಿ ಮಾಡಿದೆ. ಇದನ್ನೂ ಓದಿ : ಪರಿಷತ್‌ ಚುನಾವಣೆ; ಬಿಡದಿಯ ವಂಡರ್‌ ಲಾ ರೆಸಾರ್ಟ್‌ನಲ್ಲಿ ಇಂದು ಸಿಎಲ್‌ಪಿ ಸಭೆ..!

Related posts

ಅರ್ಜಿ ವಾಪಸ್ ಪಡೆದ ಸಂಗೀತ; ಸಿಎಂ ವಿಜಯ್ ವಿಚ್ಛೇದನ ಪ್ರಕರಣ ಇತ್ಯರ್ಥ..!

kknewskannada1987@gmail.com

ರಾಜ್ಯದ ಪರಿಸ್ಥಿತಿ ಅವಲೋಕಿಸಿ, ಬರಗಾಲ ಪೀಡಿತ ಪ್ರದೇಶ ಘೋಷಣೆ – ಸಿಎಂ ಡಿಕೆಶಿ

Kalpana Editor

ಹನುಮನ ಅವತಾರ ಧರಿಸೋಕೂ ಮುನ್ನ ರಿಷಬ್ ಮನೆಯಲ್ಲಿ ʻಶ್ರೀರಾಮ ಭಜನೆʼ ಮಹಾ ಮೇಳ..!

Kalpana Editor