July 11, 2026
kranthikidi.com
ತಾಜಾಸುದ್ದಿಸಿನಿಮಾ

ಹನುಮನ ಅವತಾರ ಧರಿಸೋಕೂ ಮುನ್ನ ರಿಷಬ್ ಮನೆಯಲ್ಲಿ ʻಶ್ರೀರಾಮ ಭಜನೆʼ ಮಹಾ ಮೇಳ..!

ಕಾಂತಾರ ಸರಣಿ ಚಿತ್ರಗಳ ಮೂಲಕ ಕರಾವಳಿ ಸಂಸ್ಕೃತಿಯನ್ನ ಜಗತ್ತಿಗೇ ಪರಿಚಯಿಸಿದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅಪಾರ ದೈವ ಭಕ್ತರು. ಸಾಂಸ್ಕೃತಿಕ ಪರಂಪರೆ, ದೈವ, ನಂಬಿಕೆಯ ಸಿನಿಮಾ ಮಾಡಲು ಪ್ರಾರಂಭಿಸುವಾಗ ರಿಷಬ್ ಕೆಲವು ರೀತಿ-ರಿವಾಜು ಪಾಲಿಸುವ ಪದ್ಧತಿ ಮಾಡ್ತಾರೆ. ಇದೀಗ ಹನುಮನ ಪಾತ್ರ ಮಾಡಲು ಹೊರಟಿರುವ ರಿಷಬ್, ಬಣ್ಣ ಹಚ್ಚೋಕೂ ಮುನ್ನ ಹುಟ್ಟೂರಿನ ಮೂಲ ನಿವಾಸದಲ್ಲಿ ಬೃಹತ್ `ಶ್ರೀರಾಮ ಭಜನೆ’ ಕಾರ್ಯಕ್ರಮ ನಡೆಸಿದ್ದಾರೆ.

ನಟ ನಿರ್ದೇಶಕ ರಿಷಬ್ ಶೆಟ್ಟಿ ಸದ್ಯ ಬಿಗ್ ಬಜೆಟ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ರಿಷಬ್ ಶೆಟ್ಟಿ ಮನಯೆಲ್ಲಿ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿದೆ. ಕಳೆದ ಏಪ್ರಿಲ್ ತಿಂಗಳಲ್ಲೇ ರಿಷಬ್ ಹುಟ್ಟೂರು ಕುಂದಾಪುರದ ಕೆರಾಡಿಯಲ್ಲಿ ಎರಡು ದಿನಗಳ ಕಾಲ ಅದ್ಧೂರಿಯಾಗಿ ದೇವರ ಕಾರ್ಯಕ್ರಮ ಮಾಡಿದ್ದರು. ಇದು ಒಂದರ್ಥದಲ್ಲಿ ಹರಕೆ ಸೇವೆಯೂ ಆಗಿದೆ. ಒಂದು ದಿನ ಶ್ರೀರಾಮ ಭಜನೆ ಕಾರ್ಯಕ್ರಮ, ಇನ್ನೊಂದು ದಿನ ಮಾವಿನಕಟ್ಟೆ ಬ್ರಹ್ಮಲಿಂಗೇಶ್ವರ ಮೇಳದಿಂದ ಯಕ್ಷಗಾನ ನಡೆಸಲಾಯಿತು.

ಅದ್ಧೂರಿಯಾಗಿ ಮೂಡಿಬಂದ ದೇವತಾ ಕಾರ್ಯದ ಚಿತ್ರಗಳನ್ನು ರಿಷಬ್ ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಸಾಂಪ್ರದಾಯಿಕ ಕಲೆಯನ್ನ ಅಪಾರ ಪ್ರೀತಿಸುವ ರಿಷಬ್ ಶೆಟ್ಟಿ ಮೂಲತಃ ಯಕ್ಷಗಾನ ಕಲಾವಿದರು. ಇದೀಗ 8 ವರ್ಷದ ರಿಷಬ್ ಪುತ್ರ ರಣ್ವಿತ್ ಕೂಡ ತಂದೆಯಂತೆ ಯಕ್ಷಗಾನ ರಂಗ ಪ್ರವೇಶ ಮಾಡಿದ್ದಾರೆ. ಪುಟ್ಟ ಪಾತ್ರವೊಂದಕ್ಕೆ ಅಭಿನಯಿಸಿ ಯಕ್ಷಗಾನ ವೇಶ ಧರಿಸಿ ಯಶಸ್ವಿ ರಂಗಪ್ರವೇಶ ಮಾಡಿದ್ದಾರೆ. ಪುಟಾಣಿ ರಣ್ವಿತ್ ತಂದೆ ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ಹಾಗೂ ಸಮಸ್ತ ಬಂಧುಗಳ ಮುಂದೆ ವೇದಿಕೆ ಏರಿ ಹೆತ್ತವರ ಕಣ್ಣಲ್ಲಿ ಖುಷಿ ಮೂಡಿಸಿದ್ದಾರೆ.

ಕಾಂತಾರ ಚಿತ್ರಕ್ಕಾಗಿ ರಿಷಬ್ ಶೆಟ್ಟಿ ಪಂಜುರ್ಲಿ, ಗುಳಿಗ ಪಾತ್ರ ಮಾಡೋಕೂ ಮೊದಲ ನೇಮ ಪಾಲಿಸಿದ್ದರು. ಹರಕೆ ತೀರಿಸಿದ್ದರು. ಸಂಪ್ರದಾಯ ಆಚರಣೆಯನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದರು. ಅದರ ಪ್ರಕಾರ ಈಗ ಹನುಮ ಪಾತ್ರಕ್ಕೆ ಬಣ್ಣ ಹಚ್ಚೋಕೂ ಮುನ್ನ ಹನುಮನ ಪ್ರಾಣ ಶ್ರೀರಾಮನ ಭಜನೆ ಹರಕೆ ಹೊತ್ತಿದ್ದರು. ಅದರಂತೆ ಬಣ್ಣ ಹಚ್ಚೋಕೂ ಮುನ್ನ ಹರಕೆ ತೀರಿಸಿದ್ದಾರೆ ಕಟ್ಟುನಿಟ್ಟಿನ ವ್ರತ ಮಾಡಿದ್ದಾರೆ ಎನ್ನುತ್ತಿವೆ. ಇದನ್ನೂ ಓದಿ :ಚಿಕ್ಕಬಳ್ಳಾಪುರದಲ್ಲಿ ಟಾರ್ಗೆಟ್ ರಾಜಕಾರಣ: 9 ಜನರ ಬಂಧನ ಖಂಡಿಸಿ ನಿಖಿಲ್ ಕಿಡಿ

Related posts

ಪೋಕ್ಸೊ ಪ್ರಕರಣ; ವಚನಾನಂದ ಸ್ವಾಮೀಜಿ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆ..!

Kalpana Editor

ಪಾಕ್‌ಗೆ ಬಿಸಿ ಮುಟ್ಟಿಸಲು ಮತ್ತೆ ರೆಡಿ; ಭಾರತಕ್ಕೆ ಬಂದಿಳಿದ ಮತ್ತೊಂದು ಸುದರ್ಶನ ಚಕ್ರ

Kalpana Editor

ದಾಳಿಯಿಂದ ತಪ್ಪಿಸಿಕೊಳ್ಳಲು ಪ್ಲ್ಯಾನ್‌ – ಟ್ರ್ಯಾಕಿಂಗ್‌ ಸಿಸ್ಟಂ ಆಫ್‌ ಮಾಡಿ ಭಾರತಕ್ಕೆ ಹಡಗುಗಳ ಪ್ರಯಾಣ

Kalpana Editor