ಬೆಂಗಳೂರು : ಗೃಹಲಕ್ಷ್ಮಿ ಗ್ಯಾರಂಟಿ ಹೊಸ ಅರ್ಜಿಗೆ 4 ಪ್ರಶ್ನೆಗಳು ಸೇರ್ಪಡೆಯಾಗಿದ್ದು, ಸರ್ಕಾರಿ ನೌಕರರ ಕುಟುಂಬವನ್ನು ಯೋಜನೆಯಿಂದ ಹೊರಗಿಡುವ ಸಾಧ್ಯತೆ ಇದೆ. ಗೃಹಲಕ್ಷ್ಮಿ ಯೋಜನೆಯ ಅರ್ಜಿಗೆ ಹೊಸ ನಾಲ್ಕು ಪ್ರಶ್ನೆಗಳನ್ನು ಸೇರಿಸಲಾಗಿದೆ.
ಹೊಸ ನಾಲ್ಕು ಪ್ರಶ್ನೆಗಳ ಸೇರ್ಪಡೆ ಮಾಡೋದಕ್ಕೆ ಸರ್ಕಾರ ಒಪ್ಪಿಗೆ ಕೊಟ್ಟಿದ್ದು, ಅರ್ಜಿ ಸಲ್ಲಿಕೆ ಮಾಡುವಾಗ 12 ಪ್ರಶ್ನೆಗಳಿಗೆ ಫಲಾನುಭವಿಗಳು ಉತ್ತರಿಸಬೇಕಿದೆ. ಹೊಸ ನಾಲ್ಕು ಪ್ರಶ್ನೆಗಳ ಮಾಹಿತಿ ಲಭ್ಯ ಆಗಿದೆ. ಗೃಹಲಕ್ಷ್ಮಿ ಯೋಜನೆಗೆ ಹೊಸ ಅರ್ಜಿ ಸಲ್ಲಿಕೆ ಕಡ್ಡಾಯ ಆಗಿದೆ. ಹೊಸ ಅರ್ಜಿ ರಚನೆ ಮಾಡುವಂತೆ ಮುಖ್ಯಮಂತ್ರಿಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸೂಚಿಸಿದ್ದಾರೆ.
ಹೀಗಾಗಿ, ಇಲಾಖೆ ಗೃಹಲಕ್ಷ್ಮೀ ಯೋಜನೆಗೆ ಹೊಸ ಅರ್ಜಿ ಸಲ್ಲಿಕೆ ಮಾಡಬೇಕು. ಬಯೋಮೆಟ್ರಿಕ್ ಜೊತೆಗೆ ಸುಮಾರು ಎಂಟರಿಂದ ಹತ್ತು ಪ್ರಶ್ನೆಗಳಿಗೆ ಉತ್ತರವನ್ನ ಫಲಾನುಭವಿಗಳು ಕೊಡಬೇಕಿದೆ. ಈ ಹಿಂದೆ ಆರು ಪ್ರಶ್ನೆಗಳನ್ನು ಕೇಳಲಾಗಿತ್ತು. ಈಗ 12 ಪ್ರಶ್ನೆಗಳಿಗೆ ಫಲಾನುಭವಿಗಳು ಉತ್ತರವನ್ನ ಕೊಡಬೇಕಿದೆ. ಗೃಹಲಕ್ಷ್ಮೀ ಅರ್ಜಿಗೆ ಹೊಸ ನಾಲ್ಕು ಪ್ರಶ್ನೆಗಳನ್ನ ಸೇರಿಸಲಾಗಿದೆ.
ಅರ್ಜಿಯಲ್ಲಿ ಹೊಸ ನಾಲ್ಕು ಪ್ರಶ್ನೆ ಸೇರಿಸಿರೋದಾಗಿ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಗೃಹಲಕ್ಷ್ಮೀ ಫಲಾನುಭವಿಗಳ ಕುಟುಂಬದಲ್ಲಿ ಸರ್ಕಾರಿ ನೌಕರರ ಪತ್ತೆಗೆ ಸರ್ಕಾರ ಮುಂದಾಗಿದೆ. ಹೊಸ ಅರ್ಜಿಯಲ್ಲಿ ಕುಟುಂಬದಲ್ಲಿ ಸರ್ಕಾರಿ ನೌಕರರಿದ್ದಾರಾ ಅಂತಾ ಪ್ರಶ್ನೆ ಸೇರಿಸಲಾಗಿದೆ. ಸರ್ಕಾರಿ ನೌಕರರಿದ್ದರೆ ಕುಟುಂಬ ಅರ್ಜಿ ಸಲ್ಲಿಕೆಗೆ ಅರ್ಹರಲ್ವಾ ಎಂಬ ಪ್ರಶ್ನೆ ಮೂಡಿದೆ.

ಸರ್ಕಾರಿ ನೌಕರಿ ಪ್ರಶ್ನೆ ಕೇಳಿ ಜರಡಿ ಇಡಿಯಲು ಸರ್ಕಾರ ಮುಂದಾಗಿರುವ ಸಾಧ್ಯತೆಯಿದೆ. ಆಧಾರ್‌ಗೆ ಅಕೌಂಟ್ ಲಿಂಕ್ ಆಗಿಲ್ಲ ಅಂದರೆ ಯೋಜನೆ ಅರ್ಜಿ ಸಲ್ಲಿಕೆ ಆಗಲ್ವ? ಬ್ಯಾಂಕ್ ಅಕೌಂಟ್‌ಗೆ ಆಧಾರ್ ಲಿಂಕ್ ಆಗಿದೆಯಾ ಅಂತಾ ಅರ್ಜಿಯಲ್ಲಿ ಪ್ರಶ್ನೆ ಸೇರ್ಪಡೆ ಮಾಡಲಾಗಿದೆ. ಯಾವೆಲ್ಲ ಮಾನದಂಡಗಳನ್ನ ಆಧರಿಸಿ ಅರ್ಜಿ ಸಲ್ಲಿಕೆಗೆ ಅವಕಾಶ ಮಾಡಿಕೊಡುತ್ತೆ ಎಂಬುದು ಪ್ರಶ್ನೆ ಆಗಿದೆ. ಇದನ್ನೂ ಓದಿ : ಬಿಡದಿ ಭೂಸ್ವಾಧೀನ ವಿರೋಧಿಸಿ, ರಾಹುಲ್ ಗಾಂಧಿಗೆ ನೂರಾರು ರೈತರಿಂದ ಪತ್ರ ಚಳುವಳಿ..!
ಸೇರ್ಪಡೆ ಆಗಿರೋ ಪ್ರಶ್ನೆಗಳು ಯಾವುವು..?
- ನಿಮ್ಮ ಕುಟುಂಬದಲ್ಲಿ ಸರ್ಕಾರಿ ನೌಕರರು ಇದ್ದಾರಾ?
- ವೋಟ್ ಲಿಸ್ಟ್‌ನಲ್ಲಿ ನಿಮ್ಮ ಹೆಸರು ಇದೆಯಾ?
- ವೋಟರ್ ಐಡಿ ಇದೆಯಾ? ಇದ್ರೆ ತೋರಿಸಿ?
- ಆಧಾರ್‌ಗೆ ಅಕೌಂಟ್ ಲಿಂಕ್ ಆಗಿದೆಯಾ?
ಈ ಹಿಂದೆ ಅರ್ಜಿಯಲ್ಲಿ ಇದ್ದ ಹಳೆಯ ಪ್ರಶ್ನೆಗಳು ಯಾವ್ಯಾವು..?
- ಮನೆಯ ಯಜಮಾನಿ ಹೆಸರು ಮತ್ತು ವಿಳಾಸ ಏನು?
- ಮನೆಯ ಯಜಮಾನಿ ಆಧಾರ್ ಸಂಖ್ಯೆ ಏನು?
- ಮನೆಯ ಯಜಮಾನಿಯ ಬ್ಯಾಂಕ್ ಖಾತೆ ಯಾವುದು?
- ಪತಿಯ ಹೆಸರು ಏನು?
- ಪತಿಯ ಆಧಾರ್ ಸಂಖ್ಯೆ ಏನು?
- ಯಾವ ಜಾತಿ
- ಸಂಪರ್ಕಿಸಬೇಕಾದ ಮೊಬೈಲ್ ನಂಬರ್?
- ಐಟಿ ಮತ್ತು ಜಿಎಸ್‌ಟಿ ಪಾವತಿದಾರರ?
