August 27, 2026
kranthikidi.com
ತಾಜಾಸುದ್ದಿಸಿನಿಮಾ

ಹೊಸ ಸಿನಿಮಾಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್

ನಟ ಪವನ್ ಕಲ್ಯಾಣ್ ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಆದ ಬಳಿಕ ಅವರ ನಟನೆಯ ಮೂರು ಸಿನಿಮಾಗಳು ಬಿಡುಗಡೆ ಆಗಿವೆ. ‘ಹರಿಹರ ವೀರ ಮಲ್ಲು’, ‘ಓಜಿ’ ಮತ್ತು ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಗಳು ಪವನ್ ಕಲ್ಯಾಣ್ ಅವರು ಡಿಸಿಎಂ ಆದ ಬಳಿಕ ಬಿಡುಗಡೆ ಆಗಿವೆ.

ಆದರೆ ಈ ಮೂರೂ ಸಿನಿಮಾಗಳು ಪವನ್ ಕಲ್ಯಾಣ್ ಅವರು ಡಿಸಿಎಂ ಆಗುವ ಮುಂಚೆ ಒಪ್ಪಿಕೊಂಡ ಸಿನಿಮಾಗಳಾಗಿದ್ದವು. ಸಿನಿಮಾ ಶೂಟಿಂಗ್ ಬದಿಗಿಟ್ಟು ಚುನಾವಣಾ ಪ್ರಚಾರಕ್ಕೆ ಧುಮುಕಿದ್ದರು ಪವನ್ ಕಲ್ಯಾಣ್. ಮೂರು ಸಿನಿಮಾಗಳು ಬಿಡುಗಡೆ ಆದ ಬಳಿಕ ಬೇರೆ ಹೊಸ ಸಿನಿಮಾ ಒಪ್ಪಿಕೊಳ್ಳುವುದಿಲ್ಲ ಎಂದಿದ್ದರು. ಆದರೆ ಇದೀಗ ತಾವೇ ಹಾಕಿಕೊಂಡ ನಿಯಮವನ್ನು ತಾವೇ ಮುರಿದಿದ್ದಾರೆ.

ಪವನ್ ಕಲ್ಯಾಣ್ ಅವರು ಇದೀಗ ಹೊಸ ಸಿನಿಮಾನಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಕಳೆದ ವರ್ಷ ಬಿಡುಗಡೆ ಆಗಿದ್ದ ಅವರ ನಟನೆಯ ‘ಓಜಿ’ ಸಿನಿಮಾದ ಎರಡನೇ ಭಾಗದಲ್ಲಿ ನಟಿಸಲು ಪವನ್ ಕಲ್ಯಾಣ್ ಒಪ್ಪಿಗೆ ಸೂಚಿಸಿದ್ದಾರೆ. ಮಾತ್ರವಲ್ಲದೆ ‘ಓಜಿ 2’ ಸಿನಿಮಾವನ್ನು ಖುದ್ದು ಪವನ್ ಕಲ್ಯಾಣ್ ಅವರೇ ನಿರ್ಮಾಣ ಸಹ ಮಾಡಲಿದ್ದಾರೆ. ಕಳೆದ ವರ್ಷ ಬಿಡುಗಡೆ ಆಗಿದ್ದ ‘ಓಜಿ’ ಸಿನಿಮಾವನ್ನು ಡಿವಿವಿ ಎಂಟರ್ಟೈನ್​​ಮೆಂಟ್ ನಿರ್ಮಾಣ ಮಾಡಿತ್ತು, ಈಗ ‘ಓಜಿ 2’ ಸಿನಿಮಾವನ್ನು ಖುದ್ದು ಪವನ್ ಕಲ್ಯಾಣ್ ನಿರ್ಮಿಸುತ್ತಿದ್ದಾರೆ.

‘ಓಜಿ’ ಸಿನಿಮಾನಲ್ಲಿ ನಾಯಕನಿಗೆ ಜಪಾನಿನ ಸಂಪರ್ಕ ಇರುವ ಬಗ್ಗೆ ಸಣ್ಣ ಹಿಂಟ್ ಕೊಡಲಾಗಿತ್ತು. ಈಗ ‘ಓಜಿ 2’ ಸಿನಿಮಾನಲ್ಲಿ ನಾಯಕನ ಹಿನ್ನೆಲೆಯದ್ದೇ ಮುಖ್ಯ ಕತೆ ಆಗಿರಲಿದೆ. ಅದರಲ್ಲೂ ವಿಶೇಷವಾಗಿ ನಾಯಕನಿಗೂ ಜಪಾನಿಗೂ ಇರುವ ನಂಟನ್ನು ಬಿಚ್ಚಿಡುವ ಕತೆಯನ್ನು ಈ ಸಿನಿಮಾ ಒಳಗೊಂಡಿರಲಿದೆ.

‘ಓಜಿ’ ಸಿನಿಮಾ ನಿರ್ದೇಶಿಸಿದ್ದ ಸುಜಿತ್ ಅವರೇ ಈಗ ‘ಓಜಿ 2’ ಸಿನಿಮಾ ನಿರ್ದೇಶಿಸಲಿದ್ದಾರೆ. ಸುಜೀತ್ ಹಾಗೂ ಪವನ್ ಕಲ್ಯಾಣ್ ಈಗಾಗಲೇ ಭೇಟಿಯಾಗಿ ಕತೆಯ ಬಗ್ಗೆ ಸಾಕಷ್ಟು ಚರ್ಚೆ ಮಾಡಿದ್ದಾರೆ. ಸುಜಿತ್, ‘ಓಜಿ 2’ ಸಿನಿಮಾದ ಸೀನ್​​ಗಳ ಸ್ಟೋರಿ ಬೋರ್ಡ್ ಮಾಡಿಕೊಂಡಿದ್ದು, ಆ ಸ್ಟೋರಿ ಬೋರ್ಡ್ ಅನ್ನು ಪುಸ್ತಕ ರೂಪದಲ್ಲಿ ಪವನ್ ಕಲ್ಯಾಣ್​​ಗೆ ನೀಡಿದ್ದಾರೆ. ಸುಜೀತ್ ಅವರ ತಯಾರಿ ನೋಡಿ ಖುಷಿ ಆಗಿರುವ ಪವನ್ ಕಲ್ಯಾಣ್, ಸಿನಿಮಾನಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಶೀಘ್ರವೇ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ.

ಡಿಸಿಎಂ ಆಗಿದ್ದಾಗಲೇ ಪವನ್ ಕಲ್ಯಾಣ್ ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮ್ಮ ಬಿಡುವಿಲ್ಲದ ಆಡಳಿತ ಮತ್ತು ರಾಜಕಾರಣದ ಕೆಲಸದ ನಡುವೆ ಬಿಡುವು ಮಾಡಿಕೊಂಡು ಚಿತ್ರೀಕರಣಗಳನ್ನು ಪವನ್ ಕಲ್ಯಾಣ್ ಮುಗಿಸಿದ್ದಾರೆ. ಪವನ್ ಅವರಿಗೆ ಸಹಾಯ ಆಗಲೆಂದು ಅವರ ಕ್ಷೇತ್ರದ ಹತ್ತಿರದಲ್ಲೇ ಸಿನಿಮಾ ಸೆಟ್​​ಗಳನ್ನು ಹಾಕಲಾಗಿತ್ತು. ಈಗ ‘ಓಜಿ 2’ ಸಿನಿಮಾಕ್ಕೂ ಇದೇ ಮಾದರಿಯನ್ನು ಅನುಸರಿಸುವ ಸಾಧ್ಯತೆ ಇದೆ. ಇದನ್ನೂ ಓದಿ : ಬೀದರ್ ಪೊಲೀಸರಿಂದ ಕೋಟಿ ಮೌಲ್ಯದ ಮಾದಕ ವಸ್ತು ನಾಶ..!

Related posts

ತಪ್ಪು ತಿಳುವಳಿಕೆಯಿಂದ ವಿಡಿಯೋ ಮಾಡಿದ್ದೇವೆ; ಕ್ಷಮೆ ಕೇಳಿದ ನಿವೇದಿತಾ ಗೌಡ

Kalpana Editor

ಕರ್ನಾಟಕ ಸರ್ಕಾರ ತಮಿಳುನಾಡಿಗೆ ನೀರು ಬಿಡಬಾರದು; ಜೆಡಿಎಸ್ ಆಗ್ರಹ..!

Kalpana Editor

NH 66 ಚಿತ್ರದ ನಟ ಪ್ರಮೋದ್ ಶೆಟ್ಟಿ ಫಸ್ಟ್ ಲುಕ್ ರಿಲೀಸ್..!

kknewskannada1987@gmail.com