August 27, 2026
kranthikidi.com
ತಾಜಾಸುದ್ದಿರಾಜ್ಯ

ರಾಜ್ಯ ಬಿಜೆಪಿ ಗೊಂದಲಗಳಿಗೆ 2 ತಿಂಗಳಲ್ಲಿ ತೆರೆ; ಶಾಸಕಸುರೇಶ್ ಗೌಡ

ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿನ ಗೊಂದಲಗಳು 2 ತಿಂಗಳಲ್ಲಿ ಎಲ್ಲವೂ ಸರಿಯಾಗಲಿದೆ. ಹೈಕಮಾಂಡ್ ಕಠಿಣ ನಿರ್ಧಾರಗಳನ್ನ ಮಾಡಲಿದೆ ಅಂತ ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಸುರೇಶ್ ಗೌಡ ತಿಳಿಸಿದರು.

ಸದಾನಂದಗೌಡ ಆಡಿಯೋ ವಿಚಾರ ಮತ್ತು ಪಕ್ಷದಲ್ಲಿನ ಗೊಂದಲಗಳ ವಿಚಾರಕಕ್ಕೆ ಅವರು ಪ್ರತಿಕ್ರಿಯೆ ನೀಡಿದರು. ಆಡಿಯೋ ಬಗ್ಗೆ ಸದಾನಂದಗೌಡರೇ ನನ್ನದಲ್ಲ ಅಂತ ಹೇಳಿದ್ದಾರೆ. ಅವರು ಹೇಳಿದ ಮೇಲೆ ನಾನೇನು ಮಾತಾಡೋದು ಎಂದರು.

ಪಕ್ಷದ ಗೊಂದಲಗಳ ಪರಿಹಾರಕ್ಕೆ ಅಡ್ಡ ಮತದಾನವೇ ಬಿಜೆಪಿಗೆ ಟರ್ನಿಂಗ್ ಪಾಯಿಂಟ್. ಇಲ್ಲಿಂದ ಎಲ್ಲವೂ ಸರಿಯಾಗುತ್ತೆ. ಹೈಕಮಾಂಡ್ ಎಲ್ಲವನ್ನೂ ಸರಿ ಮಾಡುತ್ತದೆ. 2 ತಿಂಗಳಲ್ಲಿ ಎಲ್ಲವೂ ಸರಿ ಆಗುತ್ತದೆ ಎಂದರು.

ಕೆಂದ್ರದಲ್ಲಿ ಕಾಂಗ್ರೆಸ್‌ – ಡಿಕೆಶಿ ಹಗಲುಗನಸು; ಮುಂದೆಯೂ ನಾನೇ ಸಿಎಂ, ಕೇಂದ್ರದಲ್ಲಿ ಕಾಂಗ್ರೆಸ್ ಬರುತ್ತದೆ ಎಂದು ಡಿಕೆಶಿ ಹಗಲುಗನಸು ಕಾಣುತ್ತಿದ್ದಾರೆ. ಜನರೇ ಅವರಿಗೆ ಪಾಠ ಕಲಿಸ್ತಾರೆ. ಅವರ ಕನಸು ಕನಸಾಗಿಯೇ ಉಳಿಯುತ್ತದೆ ಎಂದರು.

2 ತಿಂಗಳಲ್ಲಿ ಪಕ್ಷಕ್ಕೆ ಮಹತ್ವದ ಬದಲಾವಣೆಗಳು ಆಗುತ್ತದೆ. ಘೋರ ನಿರ್ಧಾರಗಳನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ. ಪಕ್ಷದಲ್ಲಿ ಎಲ್ಲವೂ ಸರಿ ಆಗಿ 2028 ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ 175 ಸ್ಥಾನ ಗೆಲ್ಲಲಿದೆ ಎಂದು ಭವಿಷ್ಯ ನುಡಿದರು. ಇದನ್ನೂಓದಿ : ಪ್ಯಾರಾಮೆಡಿಕಲ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ – ನಾಲ್ವರು ಬಂಧನ..!

Related posts

ಸೆ.6ರಿಂದ ಹಿಂದಿ ಬಿಗ್ ಬಾಸ್ ಶುರು; ಮೊದಲ ಪ್ರೋಮೋ ಔಟ್..!

kknewskannada1987@gmail.com

CJI ಸೂರ್ಯಕಾಂತ್ ಟೀಕೆ ಬಳಿಕ BCI ಯೂಟರ್ನ್; ವಿದ್ಯಾರ್ಥಿಗಳ ದಾಖಲಾತಿ ನಿರ್ಬಂಧ ವಾಪಸ್..!

kknewskannada1987@gmail.com

ಅಸ್ಸಾಂನಲ್ಲಿ ಭೀಕರ ಪ್ರವಾಹ; ಜನರಿಗೆ ಸಂಕಷ್ಟ, ರೈಲು ಸಂಚಾರ ಸ್ಥಗಿತ…!

Kalpana Editor