kranthikidi.com
ತಾಜಾಸುದ್ದಿರಾಜ್ಯ

ಸರ್ವಪಕ್ಷ ಸಭೆಯಲ್ಲಿ ತೀರ್ಮಾನ ಆಗೋವರೆಗೆ ತಮಿಳುನಾಡಿಗೆ ನೀರು ಬಿಡಲ್ಲ – ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು : ಸರ್ವಪಕ್ಷ ಸಭೆಯಲ್ಲಿ ತೀರ್ಮಾನ ಆಗೋವರೆಗೂ ತಮಿಳುನಾಡಿಗೆ ನೀರು ಬಿಡಲ್ಲ ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ಖಡಕ್ಕಾಗಿ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮಿಳುನಾಡಿಗೆ 15 ದಿನಗಳ ಕಾಲ 3,500 ಕ್ಯೂಸೆಕ್‌ ನೀರು ಹರಿಸಬೇಕೆಂಬ CWMA ಆದೇಶ ಕುರಿತು ಪ್ರತಿಕ್ರಿಯಿಸಿದರು. ಸದ್ಯಕ್ಕೆ ಕುಡಿಯೋ ನೀರಿಗೆ ಸಮಸ್ಯೆಯಿಲ್ಲ, ಆದ್ರೆ ರೈತರಿಗೆ ಬೆಳೆ ಬೆಳೆಯೋಕೆ ನೀರು ಕೊಡಲು ಆಗಲ್ಲ ಎಂದಿದ್ದಾರೆ.

CWMA ನೀರು ಬಿಡೋಕೆ ಹೇಳಿದೆ. ಕಳೆದ 30 ವರ್ಷಗಳಿಂದ ವಾದ ಮಾಡಿದ್ದವರೇ ಈಗಲೂ ವಾದ ಮಾಡಿದ್ದಾರೆ. ಇನ್ನೂ ಭಾನುವಾರ ಮುಖ್ಯಮಂತ್ರಿಗಳು ಸರ್ವಪಕ್ಷ ಸಭೆ ಕರೆದಿದ್ದಾರೆ. ವಿಪಕ್ಷಗಳ ಸಲಹೆ ಪಡೆದು ಮುಂದಿನ ತೀರ್ಮಾನ ಮಾಡ್ತೀವಿ. ಸಭೆ ಆಗೋವರೆಗೂ ನೀರು ಬಿಡಲ್ಲ ಎಂದು ಖಡಕ್ಕಾಗಿ ಹೇಳಿದ್ದಾರೆ.

ಬಿಜೆಪಿ ಪ್ರತಿಭಟನೆ ಕುರಿತು ಮಾತನಾಡಿ, ಬಿಜೆಪಿ ಪ್ರತಿಭಟನೆ ಮಾಡೋ ಅವಶ್ಯಕತೆ ಇರಲಿಲ್ಲ. ನಾವು ರೈತರ ಹಿತಾಸಕ್ತಿ ಗಮನ ಇಟ್ಟುಕೊಂಡು ಮೇಲ್ಮನವಿ ಹೋಗಿದ್ದು, ಸರ್ವಪಕ್ಷಗಳ ಸಭೆ ಕರೆದಿದ್ದೇವೆ. ನೆಲ, ಜಲ, ಭಾಷೆ ಬಂದಾಗ ಒಟ್ಟಾಗಿ ಹೋಗಬೇಕು. ನಾವು ಬಿಜೆಪಿಗೆ ಹಿಂದೆ ಸಹಕಾರ ಮಾಡಿದ್ವಿ. ಮುಂದೆ ಏನ್ ಮಾಡಬೇಕು ಅಂತ ವಿಪಕ್ಷಗಳ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡ್ತೀವಿ. ವರ್ಷಕ್ಕೆ 40 TMC ನೀರು ಕುಡಿಯೋಕೆ ಬೇಕು.

ಮಳೆ ಬಂದರೆ ಸಮಸ್ಯೆ ಇರೊಲ್ಲ. ಕಳೆದ ವರ್ಷ ಮಳೆ ಬಂದಿತ್ತು ಏನೂ ಸಮಸ್ಯೆ ಆಗಿಲ್ಲ. ಈ ವರ್ಷ ಮಳೆ ಕಡಿಮೆ ಇದೆ. ಸ್ವಲ್ಪ ಮಳೆ ಬಂದಿದ್ದು ನಮಗೆ ಅನುಕೂಲ ಆಗಿತ್ತು. ಮೆಟ್ಟೂರು ಡ್ಯಾಂನಲ್ಲಿ ನೀರು ಇದೆ. ಅವರಿಗೆ ಕುಡಿಯೋ ನೀರಿಗೆ ಸಮಸ್ಯೆ ಇಲ್ಲ. ರಾಜ್ಯಕ್ಕೆ ವಿಜಯ್ ಬರ್ತಾರೆ. ಈ ವಿಚಾರ ವೂ ಚರ್ಚೆ ಆಗುತ್ತದೆ ಎಂದು ತಿಳಿಸಿದ್ದಾರೆ. ಮೇಕೆದಾಟು ಅಣೆಕಟ್ಟು ವಿಚಾರಕ್ಕೆ ಪ್ರತಿಕ್ರಿಯಿಸಿ, ಮೇಕೆದಾಟು DPR ವಾಪಸ್ ಕಳಿಸಿದ್ದಾರೆ. ಅಲೋಕೇಶನ್ ಆಗಿರೋದಕ್ಕೆ ನೀವು DPR ಕೊಡಿ ಅಂದಿದ್ದಾರೆ. ಒಂದು ವಾರದಲ್ಲಿ ಇದನ್ನ ಸರಿ ಮಾಡಿ ಕಳಿಸ್ತೀವಿ ಎಂದಿದ್ದಾರೆ. ಇದನ್ನೂ ಓದಿ : ಕಾವೇರಿ ನೀರು ಬಿಡುಗಡೆ ಆದೇಶ ಖಂಡಿಸಿ, ಫ್ರೀಡಂ ಪಾರ್ಕ್‌ನಲ್ಲಿ ಸಂಘಟನೆಗಳಿಂದ ಪ್ರತಿಭಟನೆ..!

Related posts

ಶೃಂಗೇರಿಯಲ್ಲೂ ಭೂಕುಸಿತದ ಆತಂಕ; ಬಿರುಕುಗೊಂಡ ಬೃಹತ್ ತಡೆಗೋಡೆ..!

Kalpana Editor

ಬಾಲಿವುಡ್‌ ಮಂದಿಯ ಮುಖವಾಡ ಬಿಚ್ಚಿಟ್ಟ ಖ್ಯಾತ ನಟಿ ರಕುಲ್ ಪ್ರೀತ್ ಸಿಂಗ್

Kalpana Editor

ನೀಟ್ ಪೇಪರ್ ಲೀಕ್; ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಖಚಿತ – ಪ್ರಧಾನಿ ಮೋದಿ

Kalpana Editor