20.9 C
ಬೆಂಗಳೂರು
September 21, 2026
kranthikidi.com
ತಾಜಾಸುದ್ದಿರಾಜಕೀಯರಾಜ್ಯ

ʻಕಾವೇರಿ ಕಿಚ್ಚುʼ – ತಮಿಳುನಾಡು ಸಿಎಂ ವಿಜಯ್‌ ಭೇಟಿ ಮುಂದೂಡಿಕೆಗೆ ಸಿಎಂ ಡಿಕೆಶಿ ಮನವಿ

ಬೆಂಗಳೂರು : ಆ.13 ರಂದು ʻಕರ್ನಾಟಕ ಬಂದ್‌ʼ ಘೋಷಣೆಯಾದ ಬೆನ್ನಲ್ಲೇ ತಮಿಳುನಾಡು ಸಿಎಂ ವಿಜಯ್‌ ಅವರ ಭೇಟಿ ಮುಂದೂಡಿಕೆಗೆ ಸಿಎಂ ಡಿಕೆ ಶಿವಕುಮಾರ್‌ ಮನವಿ ಮಾಡಿದ್ದಾರೆ. ಇಂದು ಸುದ್ದಿಗೋಷ್ಠಿ ನಡಿಸಿ ಮಾತನಾಡಿದ ಅವರು, ಇಂತಹ ವಾತಾವರಣರಲ್ಲಿ ವಿಜಯ್ ಅವರನ್ನ ಕರೆಸೋದು ಸೂಕ್ತ ಅಲ್ಲ, ನಾನು ಅವರನ್ನ ಕರೆಸೋದು, ಯಾರೋ ಕೂಗೋದು, ಮುತ್ತಿಗೆ ಹಾಕೋದು ಸರಿಯಲ್ಲ. ಕೆಲವರು ಅವರ ಭೇಟಿ ವಿಚಾರದಲ್ಲಿ ನಡೆದುಕೊಳ್ಳುತ್ತಿರುವುದು ಸರಿ‌ ಇಲ್ಲ, ನನಗೇಕೋ ಸಮಾಧಾನ ತರಿಸುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ವಿಜಯ್‌ ಅವರು ತಾವೇ ಬರ್ತೀವಿ ಅಂತೇಳಿದ್ರು. ಈ ಹಿಂದೆ ಸ್ಟಾಲಿನ್‌ ಅವರೊಂದಿಗೆ ಚರ್ಚೆ ಮಾಡೋದಾಗಿ ಹೇಳಿದ್ದೆ, ಅವರು ಅನುಮತಿ ಕೊಡಲಿಲ್ಲ, ಈಗ ವಿಜಯ್ ಬರ್ತೀನಿ ಅಂದಿದ್ರು. ಸೌಹಾರ್ದಯುತವಾಗಿ ಮಾತನಾಡಲು ಬರ್ತಿದ್ರು. ಆದ್ರೆ ಪರಿಸ್ಥಿತಿ ಸರಿಯಿಲ್ಲ. ಹಾಗಾಗಿ ನಾನು ತಮಿಳುನಾಡು ಸಿಎಂಗೆ‌ ಮನವಿ ಮಾಡ್ತಿದ್ದೀನಿ ಎಂದರು.

ಆಗಸ್ಟ್ 3 ರಂದು ತಮಿಳುನಾಡು ಸಿಎಂ ವಿಜಯ್ ಬರೋದು ಬೇಡ ಅಂತೇಳಿ ಮಾಡ್ತೀವಿ ಎಂದು ತಿಳಿಸಿದ್ದಾರೆ. ಸಿಡಬ್ಲ್ಯೂಎಂಎ 4.5 ಟಿಎಂಸಿ ನೀರು ಬಿಡೋದಕ್ಕೆ ಹೇಳಿದೆ. ಭಾನುವಾರ ಸರ್ವಪಕ್ಷಗಳ ಸಭೆ ಕರೆದಿದ್ದೇನೆ. ಸಭೆಯಲ್ಲಿ ಚರ್ಚೆ ಮಾಡಿದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ : ಸರ್ವಪಕ್ಷ ಸಭೆಯಲ್ಲಿ ತೀರ್ಮಾನ ಆಗೋವರೆಗೆ ತಮಿಳುನಾಡಿಗೆ ನೀರು ಬಿಡಲ್ಲ – ಸಚಿವ ರಾಮಲಿಂಗಾರೆಡ್ಡಿ

Related posts

ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಅಸಮಾಧಾನ; ಕೋಲಾರ–ಚಿಕ್ಕಬಳ್ಳಾಪುರ ಶಾಸಕರ ಸಭೆ..!

kknewskannada1987@gmail.com

ಪಂದ್ಯದ ವೇಳೆಯೇ ಸಿಡಿಲು ಬಡಿದು, ಫುಟ್‌ಬಾಲ್ ಆಟಗಾರ ಸಾವು..!

kknewskannada1987@gmail.com

ಉಡುಪಿ ಜಿಲ್ಲೆಯ ಅಂಬಲಪಾಡಿ ದೇವಸ್ಥಾನದಲ್ಲಿ ವಿಶೇಷ ಪುಷ್ಪಾಲಂಕಾರ..!

Kalpana Editor