25.3 C
ಬೆಂಗಳೂರು
September 20, 2026
kranthikidi.com
ತಾಜಾಸುದ್ದಿರಾಜ್ಯ

ಅದ್ಧೂರಿ ಕರಗ ಮಹೋತ್ಸವ; ಚಾಮುಂಡೇಶ್ವರಿಗೆ ಮಡಿಲಕ್ಕಿ ಸೇವೆ ಸಲ್ಲಿಸಿದ, ಇಕ್ಬಾಲ್ ಹುಸೇನ್

ರಾಮನಗರ : ಜಿಲ್ಲೆಯ ಐತಿಹಾಸಿಕ ಚಾಮುಂಡೇಶ್ವರಿ ಕರಗ ಮಹೋತ್ಸವದ ಹಿನ್ನೆಲೆ, ಈ ಬಾರಿಯೂ ಅದ್ಧೂರಿಯಾಗಿ ಕರಗ ಮಹೋತ್ಸವವನ್ನು ಆಚರಿಸಲಾಗುತ್ತಿದ್ದು, ಕರಗ ಮಹೋತ್ಸವಕ್ಕೆ ಶಾಸಕ ಇಕ್ಬಾಲ್ ಹುಸೇನ್ ಚಾಲನೆ ನೀಡಿದ್ದಾರೆ. ಚಾಮುಂಡೇಶ್ವರಿಗೆ ಮಡಿಲಕ್ಕಿ ಸೇವೆ ಸಲ್ಲಿಸಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಅಲ್ಲದೇ ನಗರದ 16 ವಿವಿಧ ದೇವಾಲಯಗಳಿಗೂ ಮಡಿಲಕ್ಕಿ ನೀಡಿ ಅಲ್ಪಸಂಖ್ಯಾತ ಸಮುದಾಯದ ಶಾಸಕರಾಗಿದ್ದರೂ ಸಹ, ಸೌಹಾರ್ದತೆಯ ಸಂಕೇತವಾಗಿ ಮಡಿಲಕ್ಕಿ ಸೇವೆ ನಡೆಸುತ್ತ ಬಂದಿದ್ದಾರೆ. ಕರಗ ಮಹೋತ್ಸವದ ಅಂಗವಾಗಿ ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹತ್ತು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ನಟ ಕಿಚ್ಚ ಸುದೀಪ್, ನಟ ನಿನಾಸಂ ಸತೀಶ್, ಗಿಲ್ಲಿ ನಟ ಸೇರಿ ಹಲವು ಕಲಾವಿದರು ಕಾರ್ಯಕ್ರಮಕ್ಕೆ ಮೆರುಗು ನೀಡಲಿದ್ದಾರೆ.

ನಾಳೆ (ಮಂಗಳವಾರ) ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಸೇರಿ ಹಲವು ಶಾಸಕರು ಭಾಗವಹಿಸಲಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ 1,500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ : ಡಿವೋರ್ಸ್‌ ಬಳಿಕ ಖಿನ್ನತೆ; 5ನೇ ಮಹಡಿಯಿಂದ ಹಾರಿ ಮನೋವೈದ್ಯೆ ಆತ್ಮಹತ್ಯೆ..!

Related posts

ಆತ್ಮಹತ್ಯೆಗೆ ಶರಣಾದ 17 ವರ್ಷದ ಮಹಿಳಾ ಕ್ರಿಕೆಟ್‌ ಆಟಗಾರ್ತಿ..

Kalpana Editor

ನಟ ರವಿ-ಆರತಿ ವಿಚ್ಛೇದನ ಪ್ರಕರಣ; ಜೀವನಾಂಶ ಬೇಡಿಕೆಗೆ ನಿರಾಕರಣೆ..!

Kalpana Editor

ʻಕಾಕ್ರೋಚ್‌ʼ ಪ್ರತಿಭಟನೆ ಬಳಿಕ ಜೆನ್-ಝಿ ಉದ್ದೇಶಿಸಿ ಪ್ರಧಾನಿಯ ಮೊದಲ ಭಾಷಣ..!

kknewskannada1987@gmail.com