29 C
ಬೆಂಗಳೂರು
September 20, 2026
kranthikidi.com
ತಾಜಾಸುದ್ದಿಸಿನಿಮಾ

ಬ್ರೇಕಪ್ ವದಂತಿಗೆ ಪ್ರತಿಕ್ರಿಯೆ ಕೊಟ್ಟ ನಟಿ ಅನುಪಮಾ ಪರಮೇಶ್ವರನ್

ಇನ್‌ಸ್ಟಾಗ್ರಾಂ ಖಾತೆ ಈಗ ಮನಸ್ಸಿನ ಕನ್ನಡಿ ಆಗುತ್ತಿದೆ. ಸಂಬಂಧ ಬೆಸೆದಿದ್ದು, ಅದೇ ಸಂಬಂಧ ಕಡಿದುಕೊಂಡಿರುವುದು ಕೂಡ ಇನ್‌ಸ್ಟಾಗ್ರಾಂ ಪೋಸ್ಟ್‌ಗಳ ಮೂಲಕವೇ ತಿಳಿದುಬರುತ್ತಿದೆ. ಇದೀಗ ನಟಿ ಅನುಪಮಾ ಪರಮೇಶ್ವರನ್ ವಿಚಾರದಲ್ಲೂ ಹಾಗೆಯೇ ಆಗಿದೆ. ಅವರು ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಹಾಕುತ್ತಿದ್ದ, ಪೋಸ್ಟ್‌ಗಳು ಮಾನಸಿಕ ಚೇತರಿಕೆ ಮತ್ತು ಆತ್ಮಶೋಧನೆಯ ಕುರಿತಾಗಿದ್ದವು. ಹೀಗಾಗಿ ಇತ್ತೀಚೆಗೆ ಕೇಳಿಬಂದಿದ್ದ ಅವರ ಪ್ರಿಯಕರನೊಂದಿಗಿನ ಬ್ರೇಕಪ್ ವಿಚಾರಕ್ಕೆ ಅದು ಹೊಂದಿಕೆಯಾಗುವಂತಿತ್ತು.

ಆದರೆ, ಇನ್‌ಸ್ಟಾಗ್ರಾಂ ಪೋಸ್ಟ್‌ಗೂ ವೈಯಕ್ತಿಕ ವಿಚಾರಕ್ಕೂ ಹೋಲಿಕೆ ಮಾಡುವುದನ್ನು ನಿಲ್ಲಿಸಿ ಎಂದು ಹೇಳುವ ಮೂಲಕ ವದಂತಿಗೆ ನಟಿ ಅನುಪಮಾ ತೆರೆ ಎಳೆದಿದ್ದಾರೆ. ನಟಿ ಅನುಪಮಾ ಪರಮೇಶ್ವರನ್ ಹಾಗೂ ‘ಬೈಸನ್ ಕಾಲಮಾದನ್’ ಚಿತ್ರದ ನಟ ಧ್ರುವ್ ವಿಕ್ರಮ್ ನಡುವೆ ಪ್ರೀತಿ ಇದೆ ಎನ್ನುವುದು ಕೂಡ ವದಂತಿಯಾಗಿಯೇ ಹರಿದಾಡುತ್ತಿದೆ. ಆದರೆ, ʼಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲʼ ಎನ್ನುವಂತೆ, ಈ ವಿಚಾರವೂ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇದೀಗ ವೈರಲ್ ಆಗಿರುವ ಬ್ರೇಕಪ್ ವದಂತಿಯ ಕುರಿತು ಅನುಪಮಾ ಪ್ರತಿಕ್ರಿಯೆ ನೀಡಿದ್ದಾರೆ.

ಮುಂಬರುವ ಚಿತ್ರ ‘ಕ್ರೇಜಿ ಕಲ್ಯಾಣಂ’ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅನುಪಮಾ, ಈ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದರು. ʼಇದು ನನ್ನ ಸೋಷಿಯಲ್ ಮೀಡಿಯಾ ಖಾತೆ. ಏನು ಪೋಸ್ಟ್ ಮಾಡಬೇಕು ಎಂಬುದನ್ನು ನಾನೇ ನಿರ್ಧರಿಸುತ್ತೇನೆ. ನಾನು ನನ್ನ ಹತಾಶೆಯನ್ನು ಹೊರಹಾಕುತ್ತಿರಲಿಲ್ಲ. ಬದಲಾಗಿ, ಒಬ್ಬ ಮಹಿಳೆ ತನ್ನ ಜೀವನದ ಹಂತಗಳಲ್ಲಿ ಬದಲಾಗುವ ಅಥವಾ ಪರಿವರ್ತನೆಗೊಳ್ಳುವ ಪ್ರಕ್ರಿಯೆಯ ಬಗ್ಗೆ ಮಾತನಾಡುತ್ತಿದ್ದೆ ಅಷ್ಟೇ. ಹಾಗೆ ಮಾಡಿದ ಬಗ್ಗೆ ನನಗೆ ಹೆಮ್ಮೆ ಇದೆ. ನನ್ನ ಬಗ್ಗೆ ನಿಮಗೇನು ಗೊತ್ತು? ನನ್ನ ಜೀವನದ ಬಗ್ಗೆ ನಿಮಗೇನು ಗೊತ್ತು? ಹಾಗಾಗಿ, ಪರವಾಗಿಲ್ಲ. ಇದು ನನ್ನ ಇನ್‌ಸ್ಟಾಗ್ರಾಂ. ನನಗೆ ಇಷ್ಟವಾದುದನ್ನೆಲ್ಲ ಪೋಸ್ಟ್ ಮಾಡುತ್ತೇನೆʼ ಎಂದು ಉತ್ತರಿಸುವ ಮೂಲಕ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ. ಇದನ್ನೂ ಓದಿ : ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಖಂಡಿಸಿ; ಇಂದು ಕೆಂಪೇಗೌಡ ಬಸ್ ನಿಲ್ದಾಣದ ಬಳಿ ಕಪ್ಪು ಬಾವುಟ ಪ್ರದರ್ಶನ..!

Related posts

CJI ಸೂರ್ಯಕಾಂತ್ ಟೀಕೆ ಬಳಿಕ BCI ಯೂಟರ್ನ್; ವಿದ್ಯಾರ್ಥಿಗಳ ದಾಖಲಾತಿ ನಿರ್ಬಂಧ ವಾಪಸ್..!

kknewskannada1987@gmail.com

KPSCಯಲ್ಲಿ ಮತ್ತೊಂದು ಬ್ರಹ್ಮಾಂಡ ಅಕ್ರಮ; ಪಶುವೈದ್ಯಾಧಿಕಾರಿ ಹುದ್ದೆ ಸೇಲ್..!

Kalpana Editor

ಕರ್ನಾಟಕದ 4 ರಾಜ್ಯಸಭೆ, 7 ಪರಿಷತ್ ಸ್ಥಾನಗಳ ಚುನಾವಣೆಗೆ ಇಂದಿನಿಂದ ನಾಮಪತ್ರ ಸಲ್ಲಿಕೆ..!

Kalpana Editor