22.1 C
ಬೆಂಗಳೂರು
September 21, 2026
kranthikidi.com
ತಾಜಾಸುದ್ದಿರಾಜಕೀಯರಾಜ್ಯ

ಖಾಲಿ ಇರೋ ಮಹಿಳಾ ಸಚಿವ ಸ್ಥಾನ ಆದಷ್ಟು ಬೇಗ ಭರ್ತಿ – ಪ್ರಿಯಾಂಕ್ ಖರ್ಗೆ

ಬೆಂಗಳೂರು : ಖಾಲಿ ಇರುವ ಒಂದು ಮಹಿಳಾ ಸಚಿವ ಸ್ಥಾನವನ್ನು ಆದಷ್ಟು ಬೇಗ ತುಂಬೋದಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಹಿಳಾ ಕೋಟಾ ತುಂಬುವ ವಿಚಾರ ಆದಷ್ಟು ಬೇಗ ಸಂಪುಟ ಸೇರ್ಪಡೆ ಆಗುತ್ತದೆ. ಸೋಮವಾರ ಸ್ವಲ್ಪ ಸಿಎಂ ಮತ್ತು ಮಾಜಿ ಸಿಎಂ ಅವರು ನಿರ್ಧಾರ ಮಾಡೋದಾಗಿ ಹೇಳಿದ್ದಾರೆ ಎಂದರು.

ಮಹಿಳೆಯಲ್ಲಿ ಕಾಂಗ್ರೆಸ್‌ಗೆ ಮೀಸಲಾತಿ ಇಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮಹಿಳೆಯರನ್ನು ಲೋಕಸಭೆ ಸ್ಪೀಕರ್ ಮಾಡಿದ್ದು, ಅಧ್ಯಕ್ಷರು ಮಾಡಿದ್ದು, ಪ್ರಧಾನಿ, ರಾಷ್ಟ್ರಪತಿ ಮಾಡಿದ್ದು ಕಾಂಗ್ರೆಸ್. ಬಿಜೆಪಿ ಅವರ ಬಳಿ ಮಹಿಳೆ ಬಗ್ಗೆ ಕಲಿಯೋದು ಏನಿದೆ ಇವರೆಲ್ಲಾ ಮನುವಾದಿಗಳು. ಇವರಿಗೆ ಮಹಿಳೆಯರ ಬಗ್ಗೆ ಗೌರವ ಇದೆಯಾ ಎಂದು ಕಿಡಿಕಾರಿದರು.

ಗಾಯತ್ರಿ ಶಾಂತೇಗೌಡ ಹೆಸರು ಬಿಟ್ಟ ವಿಚಾರಕ್ಕೆ ಅದಕ್ಕೆ ಕಾರಣ ಏನು ಇಲ್ಲ. ಕಾಂಬಿನೇಷನ್‌ನಲ್ಲಿ ಏರುಪೇರು ಆಗಿರಬಹುದು. ಕ್ಯಾಬಿನೆಟ್ ಮಾಡೋದು ಸಿಎಂ ಅವರ ಪರಮಾಧಿಕಾರ ಮತ್ತು ಪಕ್ಷದ ನಿರ್ಧಾರ. ಈ ಬಗ್ಗೆ ಸಿಎಂ ಮತ್ತು ಪಕ್ಷ ನಿರ್ಧಾರ ಮಾಡುತ್ತಾರೆ ಎಂದು ಸ್ಪಷ್ಟಪಡಿಸಿದರು.

ಮಂಕಾಳು ವೈದ್ಯ ಹೆಸರು ಪಟ್ಟಿಯಿಂದ ಬಿಟ್ಟ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸೋಮವಾರ ಯಾರೋ ಎಐಸಿಸಿ ಆಫೀಸ್‌ನಲ್ಲಿ ಸಂಭಾವ್ಯ ಪಟ್ಟಿಗೆ ಸಹಿ ಹಾಕಿಸಿಕೊಂಡಿದ್ದಾರೆ. ನಿನ್ನೆ ಆಲ್ ಪಾರ್ಟಿ ಮೀಟಿಂಗ್ ಇತ್ತು. ಆ ಗಡಿಬಿಡಿಯಲ್ಲಿ ಪ್ರಿಂಟ್ ಮಾಡಿದ್ದಾರೆ. ಇವರು ಅದೇ ಅಂದುಕೊಂಡು ಸಹಿ ಮಾಡಿರಬಹುದು ಅಂತ ಕೇಳಿ ಪಟ್ಟಿದ್ದೇವೆ. ಅದನ್ನ ಸರಿ ಪಡಿಸಿದ್ದಾರೆ. ಅದು ಇಂಟರ್ನಲ್ ಕಮ್ಯೂನಿಕೇಷನ್ ಎಂದರು. ಇದನ್ನೂ ಓದಿ : ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಎಸ್‌ಆರ್ ಶ್ರೀನಿವಾಸ್ ಬೇಸರ – ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಘೋಷಣೆ..!

Related posts

ಮಣ್ಣಲ್ಲಿ ಮಣ್ಣಾದ ದೇವೇಗೌಡರ ಪತ್ನಿ ಚೆನ್ನಮ್ಮ – ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಅಂತ್ಯಕ್ರಿಯೆ..!

Kalpana Editor

ಬಿಎಸ್‌ವೈ ನಿವಾಸಕ್ಕೆ ಡಿಕೆಶಿ ಭೇಟಿ; ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನ..!

Kalpana Editor

ಫುಡ್ ಟ್ರಕ್‌ನಲ್ಲಿ ಅಡಗುವ ಮುನ್ನ ನಿಮ್ಮ ಭದ್ರತೆ ನೋಡಿಕೊಳ್ಳಿ – ಟ್ರಂಪ್‌ಗೆ ಇರಾನ್ ತಿರುಗೇಟು..!

kknewskannada1987@gmail.com