27.8 C
ಬೆಂಗಳೂರು
October 11, 2026
kranthikidi.com
ತಾಜಾಸುದ್ದಿವಿದೇಶ

ಫುಡ್ ಟ್ರಕ್‌ನಲ್ಲಿ ಅಡಗುವ ಮುನ್ನ ನಿಮ್ಮ ಭದ್ರತೆ ನೋಡಿಕೊಳ್ಳಿ – ಟ್ರಂಪ್‌ಗೆ ಇರಾನ್ ತಿರುಗೇಟು..!

ಟೆಹರಾನ್‌ : ಹಾರ್ಮುಜ್ ಜಲಸಂಧಿ ಕುರಿತು ನಿರಂತರವಾಗಿ ಬೆದರಿಕೆ ಹಾಕುವ ಬದಲು ಅಮೆರಿಕದ ಅಧ್ಯಕ್ಷ ಟ್ರಂಪ್ ಮೊದಲು ತಮ್ಮ ಸ್ವಂತ ಭದ್ರತೆಯ ಬಗ್ಗೆ ಗಮನಹರಿಸಲಿ ಎಂದು ಇರಾನ್‌ನ ಹಿರಿಯ ಸಂಸದರೊಬ್ಬರು ವ್ಯಂಗ್ಯವಾಡಿದ್ದಾರೆ. ನ್ಯಾಟೋ ಶೃಂಗಸಭೆಯ ಬಳಿಕ ಟರ್ಕಿಯಿಂದ ನಿರ್ಗಮಿಸುವ ವೇಳೆ ಟ್ರಂಪ್ ಅವರನ್ನು ಏರ್‌ಪೋರ್ಟ್ ಕ್ಯಾಟರಿಂಗ್ ಟ್ರಕ್ ಬಳಸಿ ರಹಸ್ಯವಾಗಿ ಏರ್‌ಫೋರ್ಸ್ ಒನ್‌ನಿಂದ ಸಣ್ಣ ಮಿಲಿಟರಿ ವಿಮಾನಕ್ಕೆ ಸ್ಥಳಾಂತರಿಸಲಾಗಿತ್ತು ಎಂಬ ವರದಿಗಳ ಬೆನ್ನಲ್ಲೇ ಇರಾನ್‌ ಕಡೆಯಿಂದ ಈ ಹೇಳಿಕೆ ಬಂದಿದೆ.

ಇರಾನ್ ಸಂಸತ್ತಿನ ರಾಷ್ಟ್ರೀಯ ಭದ್ರತಾ ಆಯೋಗದ ಮುಖ್ಯಸ್ಥ ಇಬ್ರಾಹಿಂ ಅಜೀಜಿ ಈ ಕುರಿತು ಎಕ್ಸ್ ಖಾತೆಯಲ್ಲಿ ಟೀಕಿಸಿದ್ದಾರೆ. ಅಮೆರಿಕ ಅಧ್ಯಕ್ಷರು ಆಹಾರ ಸರಬರಾಜು ಟ್ರಕ್‌ನಲ್ಲಿ ಅಡಗಿಕೊಳ್ಳುವ ಪರಿಸ್ಥಿತಿ ಬರುವ ಮುನ್ನ, ಹಾರ್ಮುಜ್ ಜಲಸಂಧಿಯ ಬಗ್ಗೆ ಅಂತ್ಯವಿಲ್ಲದ ಜಂಬ ಕೊಚ್ಚಿಕೊಳ್ಳುವುದನ್ನು ಬಿಟ್ಟು ತಮ್ಮ ಭದ್ರತೆಯ ಬಗ್ಗೆ ಚಿಂತಿಸುವುದು ಒಳಿತು ಎಂದು ಅಜೀಜಿ ಹೇಳಿದ್ದಾರೆ. ನ್ಯೂಯಾರ್ಕ್‌ನಲ್ಲಿ ನಡೆದ ರಾಜಕೀಯ ರ‍್ಯಾಲಿಯೊಂದರಲ್ಲಿ ಮಾತನಾಡಿದ್ದ ಟ್ರಂಪ್, “ಶೀಘ್ರದಲ್ಲೇ ನಾನು ಹಾರ್ಮುಜ್ ಜಲಸಂಧಿಯನ್ನು ಅಮೆರಿಕದ ಭೂಪ್ರದೇಶ ಎಂದು ಘೋಷಿಸಲಿದ್ದೇನೆ, ಇದು ಸತ್ಯ,” ಎಂದು ಹೇಳಿಕೆ ನೀಡಿದ್ದರು.

ಟ್ರಂಪ್ ಹೇಳಿಕೆಗೆ ತಿರುಗೇಟು ನೀಡಿರುವ ಇರಾನ್ ಉಪ ವಿದೇಶಾಂಗ ಸಚಿವ ಕಾಜೆಮ್ ಗರಿಬಾಬಾದಿ, ಹಾರ್ಮುಜ್ ಜಲಸಂಧಿಯು ಇರಾನ್‌ಗೆ ಸೇರಿತ್ತು, ಈಗಲೂ ಇರಾನ್‌ಗೆ ಸೇರಿದೆ ಮತ್ತು ಮುಂದೆಯೂ ಇರಾನ್‌ನ ಭಾಗವಾಗಿಯೇ ಉಳಿಯಲಿದೆ. ಈ ಜಲಸಂಧಿಯನ್ನು ಮುಚ್ಚುವುದು ಅಥವಾ ತೆರೆಯುವುದು ಕೇವಲ ಇರಾನ್‌ನ ಆದೇಶದ ಮೇರೆಗೆ ಮಾತ್ರ ನಡೆಯುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಅಂಕಾರಾದಲ್ಲಿ ನಡೆದ ನ್ಯಾಟೋ ಶೃಂಗಸಭೆಯಿಂದ ನಿರ್ಗಮಿಸುವಾಗ ಟ್ರಂಪ್ ರಹಸ್ಯವಾಗಿ ಸಣ್ಣ ಮಿಲಿಟರಿ ವಿಮಾನದ ಮೂಲಕ ಪ್ರಯಾಣ ಬೆಳೆಸಿದ್ದರು. ಆದರೆ, ಪತ್ರಕರ್ತರು ಮತ್ತು ಶ್ವೇತಭವನದ ಕೆಲವು ಸಿಬ್ಬಂದಿಗೆ ಅವರು ಏರ್‌ಫೋರ್ಸ್ ಒನ್‌ನಲ್ಲೇ ಇದ್ದಾರೆ ಎಂದು ನಂಬಿಸಲಾಗಿತ್ತು. ಇದನ್ನೂ ಓದಿ : ಪಾನ್ ಮಸಾಲಾ ಜಾಹೀರಾತು; ಶಾರುಖ್, ದೇವಗನ್, ಶ್ರಾಫ್‌ಗೆ ಎಫ್‌ಡಿಎ ನೋಟಿಸ್..!

Related posts

ಮೆಜೆಸ್ಟಿಕ್, ಮಲ್ಲೇಶ್ವರಂ ಸೇರಿದಂತೆ ನಗರದ ಹಲವೆಡೆ ಧಾರಾಕಾರ ಮಳೆ

Kalpana Editor

ದೇಶದಲ್ಲಿ ಟೆಲಿಗ್ರಾಂ ನಿಷೇಧ; ನೀಟ್‌ ಮರು ಪರೀಕ್ಷೆಗೂ ಮುನ್ನ ಕೇಂದ್ರ ಆದೇಶ..!

Kalpana Editor

ಮೆಟ್ರೋ ಪ್ರಯಾಣಿಕರ ಜೊತೆ ಸಿಎಂ ಡಿ.ಕೆ ಶಿವಕುಮಾರ್ ಫೋಟೋ..!

Kalpana Editor