July 11, 2026
kranthikidi.com
ತಾಜಾಸುದ್ದಿದೇಶ

ದೇಶದಲ್ಲಿ ಟೆಲಿಗ್ರಾಂ ನಿಷೇಧ; ನೀಟ್‌ ಮರು ಪರೀಕ್ಷೆಗೂ ಮುನ್ನ ಕೇಂದ್ರ ಆದೇಶ..!

ನವದೆಹಲಿ : ನೀಟ್‌ ಮರುಪರೀಕ್ಷೆಗೆ ಮುಂಚಿತವಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಕೇಂದ್ರ ಸರ್ಕಾರ ಜೂನ್‌ 22 ರ ವರೆಗೆ ದೇಶದಲ್ಲಿ ಟೆಲಿಗ್ರಾಂ ಅಪ್ಲಿಕೇಷನ್‌ ಅನ್ನು ನಿಷೇಧಿಸಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಶಿಫಾರಸಿನ ಮೇರೆಗೆ ʻಮಾಹಿತಿ ತಂತ್ರಜ್ಞಾನ ಕಾಯ್ದೆ-2020 ರ ಸೆಕ್ಷನ್ 69Aʼ ಅಡಿಯಲ್ಲಿ ಟೆಲಿಗ್ರಾಂ ಗೆ ತಾತ್ಕಾಲಿಕ ನಿರ್ಬಂಧ ಹೇರಿದೆ.

ಇದರೊಂದಿಗೆ ಜೂನ್ 30 ರ ವರೆಗೆ ಟೆಲಿಗ್ರಾಂನ Message Editing ವೈಶಿಷ್ಟ್ಯವನ್ನು ಸ್ಥಗಿತಗೊಳಿಸಲು ಸೂಚನೆ ನೀಡಿದೆ. ಈಗಾಗಲೇ ಪೋಸ್ಟ್ ಮಾಡಿದ ಸಂದೇಶಗಳನ್ನ ನಂತರ ಎಡಿಟ್‌ ಮಾಡಿ ಪ್ರಶ್ನೆಪತ್ರಿಕೆ ಸೋರಿಕೆಯ ನಕಲಿ ಸಾಕ್ಷ್ಯ ಸೃಷ್ಟಿಸುವುದನ್ನ ತಡೆಯುವ ಕ್ರಮದ ಭಾಗ ಇದಾಗಿದೆ.

ಹಿಂದಿನ ವಾರಗಳಲ್ಲಿ ʻPaper Leaked NEETʼ, ʻRe-NEET 2026ʼ, ʻPrivate Mafiaʼ, ʻREE NEET MAFIAAʼ ಹೆಸರಿನ ಚಾನೆಲ್‌ಗಳು ಟೆಲಿಗ್ರಾಂ ನಲ್ಲಿ ಬಹಿರಂಗವಾಗಿ ಕಾಣಿಸಿಕೊಂಡಿದ್ದರ ಬಗ್ಗೆ ಎನ್‌ಟಿಎ ಮತ್ತು ಶಿಕ್ಷಣ ಸಚಿವಾಲಯ ಮನವರಿಕೆ ಮಾಡಿದ್ದರಿಂದ ಕೇಂದ್ರ ಸರ್ಕಾರ ಈ ನಿರ್ದೇಶನ ಜಾರಿಗೊಳಿಸಿದೆ.

ವಿದ್ಯಾರ್ಥಿಗಳಿಗೆ ಸೂಚನೆ – ಕಳೆದ ಬಾರಿ ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ 20 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಯಿತು. ಆದ್ದರಿಂದ ಈಬಾರಿ ಸಮಗ್ರತೆ ಮತ್ತು ಪಾರದರ್ಶಕತೆ ಕಾಯ್ದುಕೊಳ್ಳಲು ಎನ್‌ಟಿಎ ಮುಂದಾಗಿದೆ.

ಜೂನ್‌ 21 ರಂದು ನಡೆಯಲಿರುವ UG-NEET 2026 ಮರು ಪರೀಕ್ಷೆಗೆ ಸಂಬಂಧಿಸಿದಂತೆ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ವರದಿ ಮಾರುವಂತೆ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಎನ್‌ಡಿಎ ಸೂಚನೆ ನೀಡಿದೆ. ದೂರು ನೀಡುವ ಸಲುವಾಗಿಯೇ ಎನ್‌ಟಿಎ ವಿಶೇಷ ಪೋರ್ಷಲ್‌ ಅನ್ನು ಪ್ರಾರಂಭಿಸಿದೆ.

ಯಾವುದೇ ಕಾರಣಕ್ಕೂ ಈ ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗೋದಿಲ್ಲ. ಪರೀಕ್ಷೆಗೂ ಮುನ್ನ ಪ್ರಶ್ನೆಪತ್ರಿಕೆ ವೀಕ್ಷಣೆಗೆ ಯಾರಿಗೂ ಅವಕಾಶ ಇಲ್ಲ. ಆದ್ದರಿಂದ ನಕಲಿ ವೆಬ್‌ಸೈಟ್‌ಗಳು ಮತ್ತು ಎನ್‌ಟಿಎ ಅಧಿಕಾರಿ ಎಂದು ಹೇಳಿಕೊಂಡು ಬಂದರೆ ಅದನ್ನು ತಕ್ಷಣವೇ ತಿಳಿಸಿ, ನಾವು ನಿಮ್ಮ ಬೆಂಬಲಕ್ಕೆ ಇರುತ್ತೇವೆ ಎಂದು ಎನ್‌ಡಿಎ ಎಚ್ಚರಿಸಿದೆ.

ಏನು ವರದಿ ಮಾಡಬೇಕು? – NEET (UG) 2026 ಪ್ರಶ್ನೆ ಪತ್ರಿಕೆ ಅಥವಾ ಕೀ ಉತ್ತರ ಪ್ರವೇಶ ಪಡೆಯಲು ಅನಧಿಕೃತ ವೆಬ್‌ಸೈಟ್‌ಗಳು, ಸೋಷಿಯಲ್‌ ಮೀಡಿಯಾ ಖಾತೆಗಳು ಅಥವಾ ಮೆಸೇಜ್‌ ಕಳುಹಿಸುವ ಚಾನಲ್‌ಗಳ ಬಗ್ಗೆ ವರದಿಮಾಡಬೇಕು

ಪ್ರಶ್ನೆಪತ್ರಿಕೆ ಸೋರಿಕೆ, ಹಣ ಕೊಟ್ರೆ ಫಲಿತಾಂಶ ಬರುವುದಾಗಿ ಆಫರ್‌ ನೀಡುವ ವ್ಯಕ್ತಿಗಳು ಅಥವಾ ಗುಂಪುಗಳು, ಎನ್‌ಟಿಎ ಅಧಿಕಾರಿಗಳು, ಪರೀಕ್ಷಾ ಕಾರ್ಯನಿರ್ವಾಹಕರು ಅಥವಾ ನಕಲಿ ಸರ್ಕಾರಿ ಪ್ರತಿನಿಧಿಗಳು ಮತ್ತು ದಾರಿ ತಪ್ಪಿಸಲು ಉದ್ದೇಶಿಸಿರುವ ಯಾವುದೇ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಬೇಕು.

ಎಲ್ಲಿ ವರದಿ ಮಾಡಬೇಕು? – NTA ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಆರಂಭಿಸಲಾದ ನೂತನ ಪೋರ್ಟಲ್‌ನಲ್ಲೇ ವರದಿ ಮಾಡಬೇಕು. ಇದನ್ನೂ ಓದಿ : “ಮಜಾಭಾರತ” ರಿಯಾಲಿಟಿ ಶೋ ಕಲಾವಿದ ಅನುಮಾನಾಸ್ಪದ ಸಾವು..!

Related posts

ನೀಟ್‌-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ – ಎನ್‌ಟಿಎಗೆ ಸುಪ್ರೀಂಕೋರ್ಟ್ ತರಾಟೆ..!

Kalpana Editor

ಎಸ್​ಐಆರ್​ ಪ್ರಕ್ರಿಯೆಯಲ್ಲಿ ಅಕ್ರಮ ಆರೋಪ; ಮತ್ತೊಂದು ವಿಡಿಯೋ ರಿಲೀಸ್​​ – ಹೆಚ್‌ಡಿ ಕುಮಾರಸ್ವಾಮಿ

Kalpana Editor

ವೈರಲ್‌ ಆಗಿರೋದು ಎಐ ಆಡಿಯೋ, ಯಾವ ತನಿಖೆ ಬೇಕಾದ್ರೂ ಆಗಲಿ – ಜಮೀರ್‌ ಸವಾಲು..!

Kalpana Editor