August 25, 2026
kranthikidi.com
ತಾಜಾಸುದ್ದಿದೇಶಸಿನಿಮಾ

ಪಾನ್ ಮಸಾಲಾ ಜಾಹೀರಾತು; ಶಾರುಖ್, ದೇವಗನ್, ಶ್ರಾಫ್‌ಗೆ ಎಫ್‌ಡಿಎ ನೋಟಿಸ್..!

ಮಹಾರಾಷ್ಟ್ರ : ಮಹಾರಾಷ್ಟ್ರದಲ್ಲಿ ನಿಷೇಧಿತ ಉತ್ಪನ್ನವಾಗಿರುವ ಪಾನ್ ಮಸಾಲಾವನ್ನು ಜಾಹೀರಾತಿನ ಮೂಲಕ ಪರೋಕ್ಷವಾಗಿ ಪ್ರಚಾರ ಮಾಡಿದ ಆರೋಪದ ಮೇಲೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ. ಈ ಮೂವರು ನಟರು 2024 ರಲ್ಲಿ ಪಾನ್ ಮಸಾಲಾ ಕಂಪನಿಯಾದ ವಿಮಲ್‌ ಎಲೈಚಿ ಉತ್ಪನ್ನದ ಪ್ರಚಾರಕ್ಕಾಗಿ ಒಟ್ಟಿಗೆ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು.

ಮಹಾರಾಷ್ಟ್ರದ ಆಹಾರ ಸುರಕ್ಷತಾ ಮುಖ್ಯಸ್ಥ ತುಕಾರಾಂ ಮುಂಡೆ ಅವರು ಆಗಸ್ಟ್ 11 ರಂದು ಈ ನೋಟಿಸ್ ನೀಡಿದ್ದು, ತಕ್ಷಣವೇ ಈ ಜಾಹೀರಾತು ಅಭಿಯಾನದಲ್ಲಿ ಭಾಗವಹಿಸುವುದನ್ನು ನಿಲ್ಲಿಸಬೇಕು ಹಾಗೂ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಿಂದ ಈ ಜಾಹೀರಾತಿಗೆ ಸಂಬಂಧಿಸಿದ ಎಲ್ಲಾ ಪ್ರಚಾರದ ವಿಷಯಗಳನ್ನು ತೆಗೆದುಹಾಕಬೇಕು ಎಂದು ನಟರಿಗೆ ನಿರ್ದೇಶನ ನೀಡಿದ್ದಾರೆ.

ಈ ಜಾಹೀರಾತನ್ನು ಪರಿಶೀಲಿಸಿದಾಗ, ಮಹಾರಾಷ್ಟ್ರ ರಾಜ್ಯದಲ್ಲಿ ಉತ್ಪಾದನೆ, ಸಂಗ್ರಹಣೆ, ಸಾಗಣೆ, ವಿತರಣೆ ಮತ್ತು ಮಾರಾಟವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿರುವ ‘ವಿಮಲ್ ಪಾನ್ ಮಸಾಲಾ’ ಬ್ರ್ಯಾಂಡ್‌ಗೆ ಪೂರಕವಾಗಿ ಈ ಜಾಹೀರಾತು ಪ್ರಚಾರ ನೀಡುತ್ತಿರುವಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಒಂಬತ್ತು ಪುಟಗಳ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

ಜಾಹೀರಾತಿನಲ್ಲಿ ‘ವಿಮಲ್ ಎಲೈಚಿ’ ಎಂಬ ಪದವನ್ನು ಬಳಸಲಾಗಿರುವುದು ಗ್ರಾಹಕರನ್ನು ದಾರಿತಪ್ಪಿಸುವ ಮತ್ತು ನಿಷೇಧಿತ ಉತ್ಪನ್ನದ ಬ್ರ್ಯಾಂಡ್ ಹೆಸರನ್ನು ಪರೋಕ್ಷವಾಗಿ ಪ್ರಚಾರ ಮಾಡುವ ಸಾಧ್ಯತೆಯಿದೆ ಎಂದು ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತಾ ನಿಯಮಗಳನ್ನು ಉಲ್ಲೇಖಿಸಿ ಎಫ್‌ಡಿಎ ತಿಳಿಸಿದೆ.

ನಟರು ಮಾಡಿಕೊಂಡಿರುವ ಒಪ್ಪಂದದ ಪ್ರತಿಗಳು, ಪಾವತಿ ವಿವರಗಳು ಮತ್ತು ಜಾಗರೂಕತೆಯ ಪುರಾವೆಗಳನ್ನು ಸಲ್ಲಿಸುವಂತೆ ಮುಂಡೆ ಸೂಚಿಸಿದ್ದಾರೆ. ಗ್ರಾಹಕ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಇಂತಹ ದಾರಿತಪ್ಪಿಸುವ ಜಾಹೀರಾತುಗಳಿಗೆ 10 ಲಕ್ಷದಿಂದ 50 ಲಕ್ಷ ರೂ.ವರೆಗೆ ದಂಡ ವಿಧಿಸಬಹುದಾಗಿದ್ದು, ಪ್ರಚಾರ ರಾಯಭಾರಿಗಳನ್ನು ಮೂರು ವರ್ಷಗಳವರೆಗೆ ಯಾವುದೇ ಜಾಹೀರಾತಿನಲ್ಲಿ ಭಾಗವಹಿಸದಂತೆ ನಿಷೇಧಿಸುವ ಅವಕಾಶವಿದೆ.

ಈ ಹಿಂದೆ 2022 ರಲ್ಲಿ ಇದೇ ವಿಮಲ್‌ ಎಲೈಚಿ ಜಾಹೀರಾತಿನಲ್ಲಿ ಶಾರುಖ್ ಖಾನ್ ಮತ್ತು ಅಜಯ್ ದೇವಗನ್ ಜೊತೆ ಕಾಣಿಸಿಕೊಂಡಿದ್ದಕ್ಕಾಗಿ ನಟ ಅಕ್ಷಯ್ ಕುಮಾರ್ ತೀವ್ರ ಸಾರ್ವಜನಿಕ ಟೀಕೆಗೆ ಗುರಿಯಾಗಿದ್ದರು. ನಂತರ ಅವರು ಅಭಿಮಾನಿಗಳಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಿ, ತಾವು ತಂಬಾಕು ಉತ್ಪನ್ನಗಳನ್ನು ಪ್ರಚಾರ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿ ಒಪ್ಪಂದದಿಂದ ಹಿಂದೆ ಸರಿದಿದ್ದರು ಹಾಗೂ ಜಾಹೀರಾತಿನಿಂದ ಬಂದ ಹಣವನ್ನು ಸತ್ಕಾರ್ಯಕ್ಕೆ ನೀಡುವುದಾಗಿ ಘೋಷಿಸಿದ್ದರು. ಇದನ್ನೂ ಓದಿ : ಕಷ್ಟ ಆಗುತ್ತೆ ಅನ್ನೋರು ಸಿನಿಮಾ ನೋಡೋದು ಬೇಡ; ಸಿನಿಮಾ ದೃಶ್ಯಗಳ ಕುರಿತು ನಟ ಯಶ್‌ ಸಮರ್ಥನೆ..!

Related posts

ಕರ್ನಾಟಕದಲ್ಲಿ ಸರ್ಕಾರವು ಗುಟ್ಕಾ, ಪಾನ್ ಮಸಾಲಗಳ ನಿಷೇಧ..!

kknewskannada1987@gmail.com

ನಟ ಆಮೀರ್ ಖಾನ್‌ಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಕೊಲೆ ಬೆದರಿಕೆ..!

Kalpana Editor

ರಾಜ್ಯ ಬಿಜೆಪಿಯಲ್ಲಿ ಬದಲಾವಣೆ ತರಬೇಕು, ಯತ್ನಾಳ್‌ರನ್ನ ವಿಪಕ್ಷ ನಾಯಕನನ್ನಾಗಿ ಮಾಡಬೇಕು – ಕುಮಾರ್‌ ಬಂಗಾರಪ್ಪ

Kalpana Editor