22.1 C
ಬೆಂಗಳೂರು
September 21, 2026
kranthikidi.com
ತಾಜಾಸುದ್ದಿರಾಜಕೀಯರಾಜ್ಯ

ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಎಸ್‌ಆರ್ ಶ್ರೀನಿವಾಸ್ ಬೇಸರ – ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಘೋಷಣೆ..!

ತುಮಕೂರು : ಸಿಎಂ ಡಿಕೆ ಶಿವಕುಮಾರ್ ಸಂಪುಟದಲ್ಲಿ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆ ಗುಬ್ಬಿ ಶಾಸಕ ಎಸ್‌ಆರ್ ಶ್ರೀನಿವಾಸ್ ಬೇಸರ ವ್ಯಕ್ತಪಡಿಸಿದ್ದು, ಕೆಎಸ್‌ಆರ್‌ಟಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದ್ದಾರೆ. ತುಮಕೂರಿನಲ್ಲಿ ಈ ಕುರಿತು ಮಾತನಾಡಿದ ಅವರು, ಜನ ನನಗೆ ಸಚಿವ ಸ್ಥಾನ ಕೊಡಬೇಕು ಎಂದು ಹೇಳುತ್ತಾರೆ.

ಆದರೆ ಯಾರು ಹೇಳಬೆಕಿತ್ತೋ ಅವರು ಹೇಳಿಲ್ಲ. ರಾಜಕೀಯದಲ್ಲಿ ನಮ್ಮಂಥ ಸಾಮಾನ್ಯ ರೈತರ ಮಗ ಮೇಲೆ ಬರೋದು ಕಷ್ಟ. ಯಾರದಾದರೂ ತಲೆ ಹೊಡೆದು ಹಣ ಸಂಪಾದನೆ ಮಾಡಿರಬೇಕು ಅಂಥವರು ಮೇಲಕ್ಕೆ ಬರುತ್ತಾರೆ. ಜಗಳ ಮಾಡಿ ತೆಗೆದುಕೊಳ್ಳಲು ಅದೇನು ನಮ್ಮ ಅಪ್ಪನ ಆಸ್ತಿ ಅಲ್ಲ. ನಮಗೆ ಯೋಗ್ಯತೆ ಇಲ್ಲ ಅಂತಾ ಅರ್ಥ. ನಮಗೆ ಗಾಡ್ ಫಾದರ್ ಇರಲಿಲ್ಲ, ಹಾಗಾಗಿ ಸಚಿವ ಸ್ಥಾನ ತಪ್ಪಿದೆ ಎಂದು ಬೇಸರದ ನುಡಿಗಳನ್ನಾಡಿದ್ದಾರೆ.

ರಾಜಕೀಯದ ಹೊಸ ಪಾಠ ಈಗ ಅರ್ಥ ಆಗುತ್ತಿದೆ. ಗುರುತಿಸುತ್ತಾರೆ ಎಂದು ಅಂದುಕೊಂಡಿದ್ದೆ. ಈಗ ಎಲ್ಲವೂ ಮೀರಿ ಹೋಗಿದೆ. ಪ್ರಾಮಾಣಿಕತೆಗೆ ಬೆಲೆ ಎಷ್ಟಿದೆ ಅನ್ನೋದು ಈಗ ಜಿಜ್ಞಾಸೆಗೆ ಒಳಪಡಿಸಿದ್ದೇನೆ. ರಾಜಕೀಯ ಡಬಲ್ ಗೇಮ್, ಮೋಸದಿಂದ ಕೂಡಿದೆ. ಅವಕಾಶ ಸಿಗತ್ತೆ ಅಂದುಕೊಂಡಿದ್ದೆ. ಈಗ ಅವಕಾಶ ವಂಚಿತನಾಗಿದ್ದೇನೆ. ನಮ್ಮ ಜಿಲ್ಲೆಗೆ ಇನ್ನೊಂದು ಸ್ಥಾನ ಕೊಡಬಹುದಿತ್ತು.

ಬಡವನ ಕೋಪ ದವಡೆಗೆ ಮೂಲ. ಇನ್ನೂ ಒಂದೂವರೆ ವರ್ಷ ಸಮಯ ಇದೆ. ಕಾರ್ಯಕರ್ತರು ಏನು ತೀರ್ಮಾನ ಮಾಡುತ್ತಾರೋ ನೋಡೋಣ. ನಾನೂ ನಿಗಮ ಮಂಡಳಿಗೆ ರಾಜೀನಾಮೆ ಕೊಡುತ್ತೇನೆ. ಕೆಎಸ್‌ಆರ್‌ಟಿಸಿ ನಷ್ಟದಲ್ಲಿ ಇದೆ. ಏನೂ ಸಾಧನೆ ಮಾಡಲು ಆಗಲ್ಲ. ಹಾಗಾಗಿ ನಾನು ನಾಳೆ ಹೋಗಿ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ : ಅಮೆರಿಕಾ ಅಮೆರಿಕಾ 2 ಸಿನಿಮಾಕ್ಕೆ ಮನೋಮೂರ್ತಿ ಮ್ಯೂಸಿಕ್..!

Related posts

ಹಾಲೇತರ ಪನೀರ್ ನಿಷೇಧ; ನಿಯಮ ಉಲ್ಲಂಘಿಸಿದರೆ ಜೈಲು..!

kknewskannada1987@gmail.com

ಮುಂಬೈಯಲ್ಲಿ ಭಾರೀ ಮಹಾ ಮಳೆಗೆ ಕೊಚ್ಚಿ ಹೋದ ಸಾವಿರಕ್ಕೂ ಹೆಚ್ಚು ಸಿಲಿಂಡರ್‌ಗಳು..!

Kalpana Editor

ಆರಾಮವಾಗಿ ನಿದ್ರಿಸಲು ರಾತ್ರಿ ಸಮಯದಲ್ಲಿ ಈ ಅಭ್ಯಾಸಗಳನ್ನು ಪಾಲಿಸಿ..!

Kalpana Editor