20.9 C
ಬೆಂಗಳೂರು
September 21, 2026
kranthikidi.com
ತಾಜಾಸುದ್ದಿದೇಶ

ಮೇಕೆದಾಟು ಯೋಜನೆ ವಿರುದ್ಧ ರಾಜ್ಯಸಭೆಯಲ್ಲಿ ಡಿಎಂಕೆ ನಿಲುವಳಿ ಮಂಡನೆ..!

ನವದೆಹಲಿ : ಕರ್ನಾಟಕದ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಡಿಎಂಕೆ ಪಕ್ಷವು ರಾಜ್ಯಸಭೆಯಲ್ಲಿ ನಿಲುವಳಿ ಸೂಚನೆಯನ್ನು ಸಲ್ಲಿಸಿದೆ. ಡಿಎಂಕೆ ಸಂಸದ ತಿರುಚಿ ಶಿವ, ನಿಯಮ 267ರ ಅಡಿಯಲ್ಲಿ ಈ ವಿಚಾರವಾಗಿ ತುರ್ತು ಚರ್ಚೆಗೆ ಪಟ್ಟು ಹಿಡಿದಿದ್ದಾರೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಉಲ್ಲಂಘನೆಯಾಗಿದೆ ಎಂದು ಆರೋಪಿಸಿರುವ ಡಿಎಂಕೆ, ಮೇಕೆದಾಟು ಯೋಜನೆ ತಡೆಯಲು ಮಧ್ಯಸ್ಥಿಕೆ ಮಂಡಳಿ ರಚಿಸುವಂತೆ ಆಗ್ರಹಿಸಿದೆ.

ತಮಿಳುನಾಡು ಹಲವು ಬಾರಿ ಮೇಕೆದಾಟು ಯೋಜನೆಗೆ ಅಡ್ಡಿಪಡಿಸುತ್ತಲೇ ಬಂದಿದೆ. ಈ ಹಿಂದೆ ಸುಪ್ರೀಂ ಕೋರ್ಟ್, ಮೇಕೆದಾಟು ವಿಚಾರವನ್ನು ಕೇಂದ್ರ ಜಲ ಆಯೋಗ ತೀರ್ಮಾನ ಮಾಡುತ್ತದೆ ಎಂದು ಸ್ಪಷ್ಟಪಡಿಸಿತ್ತು. ಕೇಂದ್ರ ಜಲಶಕ್ತಿ ಆಯೋಗ ಕೂಡ ಬೇರೆ ರಾಜ್ಯಗಳ ಒಪ್ಪಿಗೆ ಅಗತ್ಯವಿಲ್ಲ ಎಂದು ಈಗಾಗಲೇ ಕರ್ನಾಟಕಕ್ಕೆ ಹೇಳಿದೆ.

ಮೇಲಿನ ರಾಜ್ಯಗಳು ಅಣೆಕಟ್ಟನ್ನು ನಿರ್ಮಿಸಬಹುದು ಮತ್ತು ತಮಿಳುನಾಡಿಗೆ ಬರಬೇಕಾದ ನೀರಿನ ಪಾಲನ್ನು ಬಿಟ್ಟರೆ ಸಾಕು ಎಂದು ಸ್ಪಷ್ಟಪಡಿಸಿದೆ. ಈ ಸ್ಪಷ್ಟೀಕರಣದ ನಂತರವೂ ಡಿಎಂಕೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಇದೀಗ ರಾಜ್ಯಸಭೆಯಲ್ಲಿ ನಿಲುವಳಿ ಸೂಚನೆಯ ಮೂಲಕ ಚರ್ಚೆಗೆ ಒತ್ತಾಯಿಸಿದೆ. ಇದನ್ನೂ ಓದಿ : ಅಸಮಾಧಾನಿತ ಶಾಸಕರ ಕೋಪ ಶಮನಕ್ಕೆ ಮುಂದಾದ ಕಾಂಗ್ರೆಸ್..!

Related posts

ಸಿದ್ದರಾಮಯ್ಯ ಹಳೆಯ ಹುಲಿ, ಯಾವಾಗ ಯಾವ ಆಟ ಆಡ್ತಾರೋ ಗೊತ್ತಿಲ್ಲ; ಶೋಭಾ ಕರಂದ್ಲಾಜೆ

Kalpana Editor

ಮಂಡ್ಯ ಜಿಲ್ಲೆ ಶಾಸಕರೊಂದಿಗೆ ಡಿಕೆಶಿ ಮಿಡ್‌ನೈಟ್ ಮೀಟಿಂಗ್ – ಕೆರಳಿಸಿದ ಕುತೂಹಲ

Kalpana Editor

ಆರಾಮವಾಗಿ ನಿದ್ರಿಸಲು ರಾತ್ರಿ ಸಮಯದಲ್ಲಿ ಈ ಅಭ್ಯಾಸಗಳನ್ನು ಪಾಲಿಸಿ..!

Kalpana Editor