22.9 C
ಬೆಂಗಳೂರು
October 10, 2026
kranthikidi.com
ತಾಜಾಸುದ್ದಿರಾಜ್ಯ

ನನಗೆ ನೀರು ಬೇಕು ನಾನು ಮಾತನಾಡುವುದಿಲ್ಲ; ಬಾಯಿಗೆ ಪ್ಲಾಸ್ಟರ್ ಹಾಕಿದ ವಾಟಾಳ್ ನಾಗರಾಜ್

ಬೆಂಗಳೂರು : ವಾಟಾಳ್ ನಾಗರಾಜ್ ಅವರನ್ನು ಪೊಲೀಸರ ವಶಕ್ಕೆ ಪಡೆದುಕೊಂಡಿದ್ದಾರೆ. ವಾಟಾಳ್ ಕಾವೇರಿಗಾಗಿ ಬಂದ್‌ಗೆ ಕರೆಕೊಟ್ಟಿದ್ದ್ರು. ಮನೆಯಿಂದ ಹೊರ ಬರ್ತಿದ್ದಂತೆ ವಶಕ್ಕೆ ಪಡೆದ ಪೊಲೀಸರು. ಡಾಲರ್ಸ್ ಕಾಲೋನಿ ನಿವಾಸದಲ್ಲಿ ವಾಟಾಳ್ ವಶಕ್ಕೆ ಪಡೆದ್ರು. ಕರ್ನಾಟಕ ಬಂದ್ ಗೆ ಕರೆ ನೀಡಿದ್ದ ವಾಟಾಳ್ ವಶಕ್ಕೆ ಪಡೆದು, ನನಿಗೆ ನೀರು ಬೇಕು ನಾನು ಮಾತಾಡುವುದಿಲ್ಲ ಎಂದು ಬಾಯಿಗೆ ಪ್ಲಾಸ್ಟರ್ ಹಾಕಿದ ವಾಟಾಳ್ ನಾಗರಾಜ್ ಎನ್ನಲಾಗಿದೆ.

ಮುಂಜಾನೆ ಕರ್ನಾಟಕ ಬಂದ್ ವಿಚಾರವಾಗಿ ಹೋರಾಟಗಾರರನ್ನು ಬಂಧಿಸಿ ಸಿ ಆರ್‌ ಪಿ ಎಫ್ ಪೆರೇಡ್ ಗ್ರೌಂಡಿಗೆ ಕಳಿಸಿದ್ದಾರೆ, ಗಿರೀಶ್ ಗೌಡ್ರು ಮುನ್ನಾವರ್ ಸತೀಶ್ ರಾಜಶೇಖರ್ ಸುರೇಶ್ ಕನ್ನಡ ಪರ ಹೋರಾಟಗಾರರನ್ನು ಬಂಧಿಸಿದ್ದಾರೆ.

ಕಾವೇರಿ ಜಲ ವಿವಾದ ಸಂಬಂಧ ಇಂದು (ಆಗಸ್ಟ್​ 13) ಕರ್ನಾಟಕ ಬಂದ್​​ಗೆ ಕರೆ ನೀಡಿರುವ ನಡುವೆಯೂ ರಾಜಧಾನಿ ಬೆಂಗಳೂರಿನಲ್ಲಿ ಜನ ಜೀವನ, ವಾಹನಗಳ ಸಂಚಾರ ಎಂದಿನಂತೆ ಆರಂಭವಾಗಿದೆ. ಹೀಗಿದ್ದರೂ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರ ಸೂಚನೆ ಮೇರೆಗೆ ನಗರದಿಂದ ತಮಿಳುನಾಡಿಗೆ ಸಂಚರಿಸುವ ಬಸ್​​ಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಹೀಗಾಗಿ ಸ್ಯಾಟ್​ಲೈಟ್​ ಬಸ್ ನಿಲ್ದಾಣದಿಂದ ತಮಿಳುನಾಡಿನ ಪ್ರಮುಖ ನಗರಗಳಾದ ಊಟಿ, ತಿರುವಣ್ಣಾಮಲೈ, ತಲ್ಲಕುರ್ಚಿ, ಸೇಲಂ, ವೇಲೂರು, ಕಲ್ಪಕಂ,‌ ಕಾಂಜಿವರಂ, ವಂದಾವಾಸಿ, ತಿರುವಳ್ಳೂರು, ಉಳುಂದೂರು ಪೇಟೆ, ತಿರುಪ್ಪತ್ತೂರು, ಕಡಲೂರು, ತಿರುತ್ತಣಿ, ತಿಟ್ಟಕುಡಿ, ತಿರುಕ್ಕೋವಿಲೂರು, ಚಿದಂಬರಂ, ವಿರುತ್ತಾಚಲಂ ಸೇರಿ ಹಲವು ಊರುಗಳಿಗೆ ತೆರಳಬೇಕಿದ್ದ ಬಸ್​​ಗಖ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

ಉಳಿದಂತೆ ರಾಜ್ಯದ ವಿವಿಧೆಡೆ ಸಂಚರಿಸುವ ಬಸ್​ಗಳ ಸಹಜ ಸ್ಥಿತಿಯಲ್ಲಿ ಆರಂಭವಾಗಿದ್ದು, ಮೈಸೂರು, ಟಿ.ನರಸೀಪುರ, ಹುಣಸೂರು, ರಾಮನಗರ, ಚನ್ನಪಟ್ಟಣ, ಮಂಡ್ಯ, ಶ್ರೀರಂಗಪಟ್ಟಣ, ಮದ್ದೂರು, ಮಡಿಕೇರಿ, ಕುಶಾಲ ನಗರ, ಮಂಗಳೂರು ಸೇರಿ ಹಲವು ಕಡೆಗೆ KSRTC ಬಸ್​ಗಳು ಸಂಚಾರ ಆರಂಭಿಸಿವೆ. ಇದನ್ನೂ ಓದಿ : ತಮಿಳುನಾಡು ಬಸ್‌ಗಳಿಗೆ ತಾತ್ಕಾಲಿಕ ತಡೆ ತೆರವು; ಎಂದಿನಂತೆ ಸಂಚಾರ..!

Related posts

80ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ; ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ

kknewskannada1987@gmail.com

ಪೋಕ್ಸೊ ಪ್ರಕರಣ; ವಚನಾನಂದ ಸ್ವಾಮೀಜಿ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆ..!

Kalpana Editor

ಉಕ್ರೇನ್‌ನಲ್ಲಿರುವ ಭಾರತೀಯ ಬಿಲಿಯನೇರ್‌ ಕಾರ್ಖಾನೆ ಮೇಲೆ ರಷ್ಯಾ ದಾಳಿ..!

kknewskannada1987@gmail.com