22.1 C
ಬೆಂಗಳೂರು
September 21, 2026
kranthikidi.com
ತಾಜಾಸುದ್ದಿಸಿನಿಮಾ

ಮಲೆನಾಡಲ್ಲಿ ಹೊಸ ಫಾರ್ಮ್‌ಹೌಸ್‌ ಖರೀದಿಸಿದ ನಟಿ ಸಪ್ತಮಿಗೌಡ

ಕಾಂತಾರ ಬೆಡಗಿ ನಟಿ ಸಪ್ತಮಿ ಗೌಡ ಅವರ ಬಹುಕಾಲದ ಕನಸು ನನಸಾಗಿಗಿದೆ. ʻಕಾಂತಾರʼ ಸಿನಿಮಾದಲ್ಲಿ ʻಲೀಲಾʼ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದ ನಟಿ ಸಪ್ತಮಿ ಗೌಡ ನಿಜ ಜೀವನದಲ್ಲೂ ಮಲೆನಾಡಿನ ಮಡಿಲಿಗೆ ಮರಳಿದ್ದಾರೆ.

ಮಲೆನಾಡಿನ ಪ್ರಕೃತಿ ಮಡಿಲಲ್ಲಿ ನಿರ್ಮಿತವಾದ ಕನಸಿನ ಗೂಡಿಗೆ `ಕಾಜಾಣ’ ಎಂದು ಹೆಸರಿಟ್ಟಿದ್ದು ವಿಶೇಷ. ʻಕಾಜಾಣʼ ಅನ್ನೋದು ಸಣ್ಣ ಗಾತ್ರದ ಪಕ್ಷಿಯಾಗಿದ್ದು, ಸಮೃದ್ಧಿ ಸೌಂದರ್ಯದ ಸಂಕೇತ ಎನ್ನಲಾಗುತ್ತೆ. ಕುಟುಂಬದೊಂದಿದೆ ಸಪ್ತಮಿ ಕನಸಿನ ಗೂಡಿನ ಪೂಜೆ ಮಾಡಿಸಿದ್ದಾರೆ.

ಪ್ರಕೃತಿ ಸೌಂದರ್ಯದ ತವರೂರಾದ ಮಲ್ನಾಡ್‌ ಪ್ರಾಂತ್ಯದಲ್ಲಿ ಸಪ್ತಮಿ ಗೌಡ ಕುಟುಂಬ ಹೊಸದೊಂದು ಸುಂದರ ಫಾರ್ಮ್‌ಹೌಸ್‌ ಖರೀದಿಸಿದ್ದು, ಇಡೀ ಕುಟುಂಬದ ಸಮ್ಮುಖದಲ್ಲಿ ಗೃಹಪ್ರವೇಶ ನೆರವೇರಿದೆ. ಈ ಸಂಭ್ರಮ ಕ್ಷಣಗಳ ಫೋಟೋಗಳನ್ನು ನಟಿ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಮಲೆನಾಡಿನ ತಂಪಾದ ವಾತಾವರಣ, ಸುತ್ತಲೂ ಕಂಗೊಳಿಸುವ ಹಸಿರಿನ ಮಧ್ಯೆ ಇರುವ ಈ ಫಾರ್ಮ್‌ಹೌಸ್‌ನಲ್ಲಿ ಸಪ್ರಮಿ ಗೌಡ ಕುಟುಂಬದವರು ವಿಘ್ನ ವಿನಾಶ ಪೂಜೆಯನ್ನ ಅತ್ಯಂತ ಶ್ರದ್ದಾ-ಭಕ್ತಿಯಿಂದ ನೆರವೇರಿಸಿದ್ದಾರೆ. ಈ ಸಂಭ್ರಮದ ಕ್ಷಣಕ್ಕೆ ಸಪ್ತಮಿ ಗೌಡ ಅವರ ಇಡೀ ಕುಟುಂಬ ಸಾಕ್ಷಿಯಾಗಿತ್ತು. ಸಪ್ತಮಿ ಗೌಡ ಅವರ ತಂದೆ ಎಸ್‌.ಕೆ ಉಮೇಶ್‌, ತಾಯಿ ಹಾಗೂ ಮುದ್ದನ ತಂಗಿ ಉತ್ತರೆ ಗೌಡ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಿದ್ದರು. ಇದನ್ನೂ ಓದಿ : ಫುಟ್‌ಪಾತ್ ತೆರವು ವೇಳೆ ಪುಂಡರ ಅಟ್ಟಹಾಸ – ಜಿಬಿಎ ಅಧಿಕಾರಿಗಳ ಮೇಲೆ ಭೀಕರ ಹಲ್ಲೆ, ಪೆಪ್ಪರ್ ಸ್ಪ್ರೇ..!

Related posts

ದಲಿತರ ಭೂಮಿ ಅಕ್ರಮ ಒತ್ತುವರಿ ಆರೋಪ; ಆರ್ಟ್ ಆಫ್ ಲೀವಿಂಗ್ ವಿರುದ್ಧ ತನಿಖೆಗೆ ಆದೇಶ…!

Kalpana Editor

ಪಿಯು ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ; ಸಚಿವ ಮಧು ಬಂಗಾರಪ್ಪ ಪ್ರಮುಖ ಘೋಷಣೆ..!

kknewskannada1987@gmail.com

ಇಂದೇ ಉದಯನಿಧಿ ಸ್ಟಾಲಿನ್‌ ಬಿಡುಗಡೆ ಮಾಡಿ; ಮದ್ರಾಸ್‌ ಹೈಕೋರ್ಟ್‌ ತೀರ್ಪು

kknewskannada1987@gmail.com