29.2 C
ಬೆಂಗಳೂರು
June 15, 2026
kranthikidi.com
ತಾಜಾಸುದ್ದಿಸಿನಿಮಾ

ಸ್ಥಾನಮಾನ ಹೆಚ್ಚಾದಂತೆ ವಿರೋಧಿಗಳೂ ಹೆಚ್ಚಾಗುತ್ತಾರೆ; ವಿವಾದದಲ್ಲಿ ರಣವೀರ್‌ಗೆ ಕಂಗನಾ ಬೆಂಬಲ..!

ಬಾಲಿವುಡ್ ನಟ ರಣವೀರ್ ಸಿಂಗ್ ಮತ್ತು ‘ಡಾನ್ 3’ ಸಿನಿಮಾ ವಿವಾದದ ಬಗ್ಗೆ ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಹೊಸ ಸಿನಿಮಾ ‘ಭಾರತ್ ಭಾಗ್ಯ ವಿಧಾತಾ’ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಕಂಗನಾ, ರಣವೀರ್ ಸಿಂಗ್ ವಿರುದ್ಧ ಫೆಡರೇಷನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ (ಎಫ್‌ಡಬ್ಲುಐಸಿಇ) ಕ್ರಮದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಅವರು, ನನ್ನನ್ನೇ ಎಲ್ಲರೂ ಬ್ಯಾನ್ ಮಾಡಿದ್ದಾರೆ. ಒಬ್ಬ ವ್ಯಕ್ತಿಯ ಸ್ಥಾನಮಾನ ಹೆಚ್ಚಾದಂತೆ ವಿರೋಧಿಗಳ ಸಂಖ್ಯೆಯೂ ಹೆಚ್ಚಾಗುತ್ತದೆ. ಜೀವನದಲ್ಲಿ ಮುಂದೆ ಸಾಗಿದಂತೆ ಹಲವು ಅಡೆತಡೆಗಳು ಎದುರಾಗುತ್ತವೆ. ಯಾವಾಗಲೂ ಎಲ್ಲವೂ ಸುಗಮವಾಗಿ ನಡೆಯುವುದಿಲ್ಲ. ನಾನು ಕೂಡ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದೇನೆ. ಆದರೆ ಇಂದು ಚೆನ್ನಾಗಿದ್ದೇನೆ. ಆದ್ದರಿಂದ ಇಂತಹ ವಿಚಾರಗಳಿಂದ ಹೆಚ್ಚು ವ್ಯತ್ಯಾಸ ಆಗುವುದಿಲ್ಲ. ಕೊನೆಗೆ ಎಲ್ಲವೂ ಸರಿಯಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ : ರಾಜ್ಯದ ನೂತನ ಡಿಸಿಎಂ ಆಗಿ ಜಿ. ಪರಮೇಶ್ವರ್‌ ಪ್ರಮಾಣವಚನ ಸ್ವೀಕಾರ..!

ಇತ್ತೀಚೆಗೆ ‘ಡಾನ್ 3’ ಸಿನಿಮಾದಿಂದ ರಣವೀರ್ ಸಿಂಗ್ ಹೊರಬಂದಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ಸಿನಿಮಾ ನಿರ್ಮಾಪಕರೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಅವರು ಚಿತ್ರದಿಂದ ಹಿಂದೆ ಸರಿದಿದ್ದಾರೆ. ಈ ಬೆಳವಣಿಗೆಯ ಬಳಿಕ ಎಫ್‌ಡಬ್ಲುಐಸಿಇ ರಣವೀರ್ ಸಿಂಗ್ ವಿರುದ್ಧ ಅಸಹಕಾರ ಸೂಚನೆ ನೀಡಿದೆ. ಈ ಕ್ರಮ ಬಾಲಿವುಡ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಆದರೆ ಈ ವಿವಾದದ ಬಗ್ಗೆ ರಣವೀರ್ ಸಿಂಗ್ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.

Related posts

ಬ್ರೇಕ್‌ಫಾಸ್ಟ್‌ ಮೀಟಿಂಗ್‌ – ಸಿದ್ದರಾಮಯ್ಯನವರನ್ನು ತಬ್ಬಿ ಕಾಲಿಗೆ ಬಿದ್ದ ಡಿಕೆ ಶಿವಕುಮಾರ್‌

Kalpana Editor

ತಮಿಳುನಾಡು ಸರ್ಕಾರದಿಂದಲೇ ಒಟಿಟಿ ಆರಂಭಿಸಲು ಸಿಎಂಗೆ ವಿಜಯ್ ಸೇತುಪತಿ ಮನವಿ

Kalpana Editor

ರಾಜಕೀಯ ಪ್ರವೇಶ, ನಿರ್ಧಾರ ಅಭಿಮಾನಿಗಳ ಕೈಯಲ್ಲಿದೆ; ರಾಘವ್ ಲಾರೆನ್ಸ್

Kalpana Editor