22.1 C
ಬೆಂಗಳೂರು
September 21, 2026
kranthikidi.com
ಕ್ರೀಡೆತಾಜಾಸುದ್ದಿದೇಶ

ಇನ್ಮುಂದೆ ಮಾರ್ಚ್‌-ಮೇ ತಿಂಗಳಲ್ಲಿ ನಡೆಯಲ್ಲ ಐಪಿಎಲ್‌..!

ನವದೆಹಲಿ : ಇನ್ಮುಂದೆ ಐಪಿಎಲ್‌ ಆವೃತ್ತಿಗಳನ್ನು ಮಾರ್ಚ್‌-ಮೇ ತಿಂಗಳಲ್ಲಿ ನಡೆಸುವ ಬದಲು ಸೆಪ್ಟೆಂಬರ್‌-ಅಕ್ಟೋಬರ್‌ ತಿಂಗಳಲ್ಲಿ ನಡೆಸುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸುತ್ತಿದೆ. ಈ ಕುರಿತು ಐಪಿಎಲ್‌ ಮುಖ್ಯಸ್ಥ ಅರುಣ್‌ ಧುಮಾಲ್‌ ಸಂದರ್ಶನವೊಂದರಲ್ಲಿ ಮಾತನಾಡಿ, ಐಪಿಎಲ್‌ ಆವೃತ್ತಿಯ ಸಮಯ ಬದಲಾವಣೆ ಬಗ್ಗೆ ನಾವು ಪ್ರಸಾರಕರ ಜೊತೆ ಚರ್ಚಿಸಬೇಕು.

ಸೆಪ್ಟೆಂಬರ್‌-ಅಕ್ಟೋಬರ್‌ ತಿಂಗಳು ದೀಪಾವಳಿಯ ಸಮಯವಾಗಿರುವುದರಿಂದ ಜಾಹೀರಾತುದಾರರು ಹಾಗೂ ವ್ಯವಹಾರ ದೃಷ್ಟಿಯಿಂದ ಅತ್ಯಂತ ಲಾಭದಾಯಕ ಹಾಗೂ ಸೂಕ್ತವಾದ ಸಮಯವಾಗಿದೆ. ಹೀಗಾಗಿ ಮಾರ್ಚ್‌-ಮೇ ತಿಂಗಳಿಗಿಂತ ಈ ಸಮಯ ಉತ್ತಮವಾಗಿರುತ್ತದೆ ಎನ್ನಲಾಗಿದೆ ಎಂದಿದ್ದಾರೆ.

ಮೇ ತಿಂಗಳಲ್ಲಿ ಬಿಸಿಲು ಜಾಸ್ತಿ ಇರುವುದರಿಂದ ಆಟಗಾರರ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಫೆಬ್ರವರಿ-ಏಪ್ರಿಲ್‌ ತಿಂಗಳನ್ನೂ ಪರಿಗಣಿಸಬಹುದು. ಆದರೆ ಈ ಸಮಯದಲ್ಲಿ ಐಪಿಎಲ್‌ ನಡೆಸುವುದರಿಂದ ಜಾಗತಿಕ ಮಟ್ಟದ ಎಲ್ಲಾ ಕ್ರಿಕೆಟ್‌ ಟೂರ್ನಿ, ಸರಣಿ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಈ ಬಗ್ಗೆ ಚರ್ಚೆ ನಡೆಸಬೇಕಾಗಿದೆ ಎಂದು ತಿಳಿಸಿದ್ದಾರೆ.

Related posts

ಬೆಳೆ ಸಾಲ ಸಂಪೂರ್ಣ ಮನ್ನಾ – ರೈತರಿಗೆ ಬಿಗ್‌ ಗಿಫ್ಟ್‌ ಕೊಟ್ಟ ಸಿಎಂ ವಿಜಯ್‌

Kalpana Editor

ಸಮಾವೇಶದಿಂದ ನೀಟ್‌ ಪರೀಕ್ಷೆಯ ವಿದ್ಯಾರ್ಥಿಗಳಿಗೆ ತೊಂದರೆ; ಬಿಜೆಪಿ ವಿರುದ್ಧ ಬಿಕೆಹೆಚ್‌ ವಾಗ್ದಾಳಿ..!

Kalpana Editor

ಹೋಟೆಲ್‌ಗಳ ಮೇಲೆ ಮುಂದುವರೆದ ಫುಡ್ ಸೇಫ್ಟಿ ರೇಡ್; ರೆಸ್ಟೋರೆಂಟ್‌ಗಳಿಗೆ ನೋಟಿಸ್..!

kknewskannada1987@gmail.com