22.1 C
ಬೆಂಗಳೂರು
September 21, 2026
kranthikidi.com
ತಾಜಾಸುದ್ದಿರಾಜ್ಯ

ಬನ್ನೇರು​‌ಘಟ್ಟ ಪಿಂಕ್ ಲೈನ್ ಸಂಚಾರ ಆಗಸ್ಟ್ 15ಕ್ಕೂ ಅನುಮಾನ..!

ಬೆಂಗಳೂರು : ಬೆಂಗಳೂರಿನ ಸಾರಿಗೆ ವ್ಯವಸ್ಥೆಗೆ ಬಿಡುಗಡೆ ನೀಡಬೇಕಿದ್ದ ‘ನಮ್ಮ ಮೆಟ್ರೋ’ ಯೋಜನೆಯ ಕಾಮಗಾರಿಗಳು ನಿಗದಿತ ಸಮಯಕ್ಕೆ ಪೂರ್ಣಗೊಳ್ಳದೆ ಪದೆ ಪದೆ ವಿಳಂಬವಾಗುತ್ತಿರುವುದು ರಾಜಧಾನಿಯ ಜನರಿಗೆ ಮತ್ತಷ್ಟು ನಿರಾಸೆ ಮೂಡಿಸಿದೆ. ಪ್ರಮುಖವಾಗಿ ಬನ್ನೇರುಘಟ್ಟ ರಸ್ತೆಯನ್ನು ಸಂಪರ್ಕಿಸುವ ಮೆಟ್ರೋ ‘ಪಿಂಕ್ ಲೈನ್’ ಯೋಜನೆಯ ಮೊದಲ ಹಂತದ ಸಂಚಾರವನ್ನು ಆಗಸ್ಟ್ 15ರ ವೇಳೆಗೆ ಆರಂಭಿಸಲು ಬಿಎಂಆರ್‌ಸಿಎಲ್ ಯೋಜನೆ ರೂಪಿಸಿತ್ತು.

ಆದರೆ, ಪ್ರಸ್ತುತ ಕಾಮಗಾರಿಯ ವೇಗವನ್ನು ನೋಡಿದರೆ ಈ ಗಡುವನ್ನು ಸಹ ಮೆಟ್ರೋ ತಲುಪುವುದು ಅನುಮಾನ ಎನ್ನಲಾಗಿದೆ. ಪಿಂಕ್ ಲೈನ್ ಯೋಜನೆಯ ಅಡಿಯಲ್ಲಿ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿಲೋಮೀಟರ್‌ ಮೇಲ್ಸೇತುವೆ ಮಾರ್ಗವನ್ನು ಸ್ವಾತಂತ್ರ್ಯ ದಿನಾಚರಣೆಯ ಕೊಡುಗೆಯಾಗಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲು ನಿರ್ಧರಿಸಲಾಗಿತ್ತು. ಪ್ರಸ್ತುತ ಸಿವಿಲ್ ಕಾಮಗಾರಿಗಳು ಅಂತಿಮ ಹಂತದಲ್ಲಿದ್ದರೂ, ರೈಲು ಸೆಟ್‌ಗಳ ಪೂರೈಕೆ ಹಾಗೂ ಸಿಗ್ನಲಿಂಗ್ ಮತ್ತು ಸುರಕ್ಷತಾ ಪರೀಕ್ಷೆಗಳು ಇನ್ನೂ ಬಾಕಿ ಇವೆ.

ಕಾಮಗಾರಿ ಸ್ಥಳಗಳಲ್ಲಿ ಅಗತ್ಯಕ್ಕಿಂತ ಶೇ 50ರಷ್ಟು ಕಡಿಮೆ ಕಾರ್ಮಿಕರಿರುವುದು ಮತ್ತು ಮೈಕ್ರೋ-ಲೆವೆಲ್ ಸಿವಿಲ್ ಕೆಲಸಗಳು ನಿಧಾನಗತಿಯಲ್ಲಿ ಸಾಗುತ್ತಿರುವುದು ಈ ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ. ಇದರಿಂದಾಗಿ ಬನ್ನೇರು​‌ಘಟ್ಟ ರಸ್ತೆಯ ನಿತ್ಯದ ಭಾರಿ ಸಂಚಾರ ದಟ್ಟಣೆಯಿಂದ ಮುಕ್ತಿ ಸಿಗಬಹುದು ಎಂದು ಕಾಯುತ್ತಿದ್ದ ಲಕ್ಷಾಂತರ ಉದ್ಯೋಗಿಗಳಿಗೆ ಮತ್ತು ಪ್ರಯಾಣಿಕರಿಗೆ ಮತ್ತೊಮ್ಮೆ ಕಾಯುವಿಕೆ ತಪ್ಪಿದ್ದಲ್ಲ.

ಬನ್ನೇರು​‌ಘಟ್ಟ ಮಾರ್ಗ ಮಾತ್ರವಲ್ಲದೆ, ಪಿಂಕ್ ಲೈನ್‌ನ ಡೈರಿ ಸರ್ಕಲ್‌ನಿಂದ ನಾಗವಾರವರೆಗಿನ 13.75 ಕಿ.ಮೀ. ಭೂಗತ ಮಾರ್ಗದ ಕಾಮಗಾರಿಯೂ ನಿಗದಿತ ಸಮಯಕ್ಕಿಂತ ಹಿಂದೆ ಬಿದ್ದಿದೆ. ಪಿಂಕ್ ಲೈನ್ (ಮೇಲ್ಸೇತುವೆ ಮಾರ್ಗ) ಆಗಸ್ಟ್ 15ರ ಬದಲಾಗಿ 2026ರ ಕೊನೆಯ ಹಂತಕ್ಕೆ ಮುಂದೂಡಿಕೆ ಸಾಧ್ಯತೆ ಇದೆ. ಪಿಂಕ್ ಲೈನ್ ಅಂಡರ್ ಗ್ರೌಂಡ್ ಮಾರ್ಗ ಮಾರ್ಚ್ 2027ರ ವೇಳೆಗೆ ಪೂರ್ಣಗೊಳ್ಳುವ ಅಂದಾಜು. ಬ್ಲೂ ಲೈನ್ (ಸಿಲ್ಕ್ ಬೋರ್ಡ್ – ಕೆಐಎಎಲ್ ವಿಮಾನ ನಿಲ್ದಾಣ) ಪ್ರಮುಖ ಇಂಟರ್‌ಚೇಂಜ್ ಸ್ಟೇಷನ್‌ಗಳ ಕಾಮಗಾರಿ ಬಾಕಿ ಇರುವುದರಿಂದ 2027ರ ಮಧ್ಯಭಾಗಕ್ಕೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಇದನ್ನೂ ಓದಿ : ಹಸಿರು ಮಾರ್ಗ; ಯಶವಂತಪುರ – ಮಾದಾವರ ನಡುವೆ ರೈಲು ಸಂಚಾರ ವ್ಯತ್ಯಯ..!

Related posts

ತ್ಯಾಗಕ್ಕೆ ಸುಮಲತಾಗೆ ಸಿಗುತ್ತಾ ಪ್ರತಿಫಲ; ಬಿಜೆಪಿ ಹೈಕಮಾಂಡ್ ನಡೆ ಕುತೂಹಲ..!

Kalpana Editor

“ಕರುಪ್ಪು” ಸಿನೆಮಾದಲ್ಲಿ ತ್ರಿಷಾ ಜೊತೆ ನಟಿಸುವ ಆಫರ್ ಸಿಕ್ಕಿದ್ರೂ ದಳಪತಿ ನಿರಾಕರಿಸಿದ್ದೇಕೆ..?

Kalpana Editor

ರೇಣುಕಾ ಸ್ವಾಮಿ ಕೊಲೆ ಪ್ರಕರಣ; ಹೆಡ್​​ಫೋನ್ ಧರಿಸಿ ಬಂದ ಪವಿತ್ರಾ ಗೌಡ, ಜಡ್ಜ್ ತರಾಟೆ..!

kknewskannada1987@gmail.com