20.8 C
ಬೆಂಗಳೂರು
September 22, 2026
kranthikidi.com
ತಾಜಾಸುದ್ದಿಸಿನಿಮಾ

“ಕರುಪ್ಪು” ಸಿನೆಮಾದಲ್ಲಿ ತ್ರಿಷಾ ಜೊತೆ ನಟಿಸುವ ಆಫರ್ ಸಿಕ್ಕಿದ್ರೂ ದಳಪತಿ ನಿರಾಕರಿಸಿದ್ದೇಕೆ..?

ಸೂರ್ಯ ಹಾಗೂ ತ್ರಿಶಾ ನಟನೆಯ “ಕರುಪ್ಪು” ಸಿನಿಮಾ ಬಾಕ್ಸಾಫೀಸ್ ಹಿಟ್ ಆದ ಬೆನ್ನಲ್ಲೇ ನಿರ್ದೇಶಕ ಆರ್‌ಜೆ ಬಾಲಾಜಿ ಹೊಸ ವಿಚಾರವೊಂದನ್ನ ಬಿಚ್ಚಿಟ್ಟಿದ್ದಾರೆ. ಆರಂಭದಲ್ಲಿ `ಕರುಪ್ಪು’ ದಳಪತಿ ವಿಜಯ್‌ಗಾಗಿಯೇ ಮೀಸಲಾಗಿತ್ತು ಅನ್ನೋ ವಿಚಾರವನ್ನು ಇದೀಗ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ವಿಜಯ್ ಒಪ್ಪಿಕೊಂಡಿದ್ದರೆ ಕರುಪ್ಪು ಅವರ ಕೊನೆಯ ಚಿತ್ರವಾಗುತ್ತಿತ್ತು ಎಂದಿದ್ದಾರೆ ಆರ್‌ಜೆ ಬಾಲಾಜಿ.

ವಿಜಯ್ ರಾಜಕೀಯ ಪ್ರವೇಶದ ಕಾರಣಕ್ಕೆ ಬಣ್ಣದ ಜರ್ನಿಗೆ ಅವರೀಗ ಫುಲ್‌ಸ್ಟಾಪ್ ಇಟ್ಟಿದ್ದಾರೆ. ತಮಿಳುನಾಡು ಸಿಎಂ ಆಗಿರೋ ವಿಜಯ್ ಕುರಿತಾಗಿ ಇದೀಗ ರಹಸ್ಯ ವಿಚಾರವೊಂದನ್ನ ಕರುಪ್ಪು ನಿರ್ದೇಶಕ ಬಿಚ್ಚಿಟ್ಟಿದ್ದು ಇದೇ ಚಿತ್ರವನ್ನು ಅಸಲಿಯಾಗಿ ವಿಜಯ್‌ಗಾಗಿ ಮಾಡಿದ್ದ ಚಿತ್ರವಾಗಿತ್ತು. ಈ ಕುರಿತು ಎರಡ್ಮೂರು ಮೀಟಿಂಗ್ ಕೂಡ ವಿಜಯ್ ಜೊತೆ ನಡೆದಿತ್ತು. ಕೊನೆಯದಾಗಿ ಅವರು ಜನನಾಯಗನ್ ಕೊನೆಯ ಚಿತ್ರವನ್ನಾಗಿ ಆಯ್ಕೆಮಾಡಿಕೊಂಡಿದ್ದರು ಎಂದಿದ್ದಾರೆ.

ಇದೀಗ ಕರುಪ್ಪು ಬಾಕ್ಸಾಫೀಸ್‌ನಲ್ಲಿ 250 ಕೋಟಿ ಕಲೆಕ್ಷನ್ ಮೀರಿ ಮುನ್ನುಗ್ಗುತ್ತಿದೆ. ಸೂರ್ಯ ಮುಖದಲ್ಲಿ ಮಂದಹಾಸ ಮೂಡಿಸಿದೆ. ತ್ರಿಶಾ ತಾವೇ ಲಕ್ಕಿಲೇಡಿ ಎಂದು ಬೀಗುತ್ತಿದ್ದಾರೆ. ನಿರ್ದೇಶಕ ಆರ್‌ಜೆ ಬಾಲಾಜಿ ಸೂಪರ್ ಹಿಟ್ ಚಿತ್ರ ಕೊಟ್ಟ ಖುಷಿಯಲ್ಲಿ ತೇಲುತ್ತಿದ್ದಾರೆ. ಆದರೆ ಈ ಕಥೆ ನಿಜವಾಗಿ ಬರೆದಿದ್ದು ವಿಜಯ್‌ಗಾಗಿ ಅನ್ನೋ ವಿಚಾರ ಇದೀಗ ಬಯಲಾಗಿದೆ.

ಬಳಿಕ ನಿರ್ಮಾಪಕರ ಸೂಚನೆ ಮೇರೆಗೆ ಸೂರ್ಯ ಅವರಿಗೆ ಅದೇ ಸ್ಕಿçಪ್ಟ್ ಹೇಳಿದ ಬಳಿಕ ಇಷ್ಟಪಟ್ಟು ಒಪ್ಪಿಕೊಂಡ್ರು ಎಂದಿದ್ದಾರೆ ನಿರ್ದೇಶಕ. ವಿಜಯ್ ಕೊನೆಯ ಚಿತ್ರ ಯಾವುದಾಗಬೇಕು ಅನ್ನೋ ಪ್ರಯಾಣದಲ್ಲಿ ಅವರು ಬಹಳ ಅಳೆದು ತೂಗಿ ಜನನಾಯಗನ್ ಚಿತ್ರವನ್ನೇ ಆರಿಸಿಕೊಂಡಂತಿದೆ.

Related posts

ಗೃಹಲಕ್ಷ್ಮಿ ಹಣದ ದುರುಪಯೋಗ ತಡೆಗೆ ಬಯೋಮೆಟ್ರಿಕ್ ಜಾರಿ..!

Kalpana Editor

ಯುವತಿಯ ವೈದ್ಯಕೀಯ ವೆಚ್ಚ ಭರಿಸಲು ಮುಂದಾದ ರ‍್ಯಾಪಿಡೋ..!

kknewskannada1987@gmail.com

ಇಂದಿನಿಂದ 3 ದಿನ ಮಳೆ ಸಾಧ್ಯತೆ; ರಾಜ್ಯದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

Kalpana Editor