July 22, 2026
kranthikidi.com
ತಾಜಾಸುದ್ದಿರಾಜಕೀಯರಾಜ್ಯ

ತಾರಕಕ್ಕೇರಿದ ಬಿಡದಿ ಭೂಯುದ್ಧ – ಬಿಜೆಪಿ ಬಿಟ್ಟು ಜೆಡಿಎಸ್ ಪ್ರತ್ಯೇಕ ಪಾದಯಾತ್ರೆ..!

ಬೆಂಗಳೂರು : ಬಿಡದಿ ಟೌನ್‌ಶಿಪ್ ವಿರೋಧಿಸಿ ಬಿಜೆಪಿಗೂ ಮೊದಲೇ ಜೆಡಿಎಸ್ ಪಾದಯಾತ್ರೆ ದಿನಾಂಕ ಘೋಷಣೆ ಮಾಡಿದೆ. ‌ಜುಲೈ 30, 31 ಮತ್ತು ಆಗಸ್ಟ್ 1 ರಂದು ಸುಮಾರು 38 ಕಿಲೋಮೀಟರ್‌ಗಳ 3 ದಿನಗಳ ಪಾದಯಾತ್ರೆಯನ್ನ ಜೆಡಿಎಸ್ ಘೋಷಣೆ ಮಾಡಿದೆ.

ಕೋರ್ ಕಮಿಟಿ ಅಧ್ಯಕ್ಷ ಕೃಷ್ಣಾರೆಡ್ಡಿ, ಜೆಡಿಎಸ್ ಶಾಸಕಾಂಗ ನಾಯಕ ಸುರೇಶ್ ಬಾಬು ಸುದ್ದಿಗೋಷ್ಠಿ ನಡೆಸಿ ಪಾದಯಾತ್ರೆ ದಿನಾಂಕ ಮತ್ತು ಪಾದಯಾತ್ರೆ ಪೋಸ್ಟರ್ ಬಿಡುಗಡೆ ಮಾಡಿದರು. ಜುಲೈ 30 ರಂದು ಭೈರಮಂಗಲದಿಂದ ಪಾದಯಾತ್ರೆ ಪ್ರಾರಂಭ ಆಗಿ ಆಗಸ್ಟ್ 1 ರಂದು ಫ್ರೀಡಂನಲ್ಲಿ ಪಾದಯಾತ್ರೆ ಅಗತ್ಯವಾಗಲಿದೆ. ಪಾದಯಾತ್ರೆ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯಲಿದೆ. ಪಾದಯಾತ್ರೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ.

ಜುಲೈ 31 ರಂದು‌ ಮಾಜಿ ಪ್ರಧಾನಿ ದೇವೇಗೌಡ ಪಾದಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಆಗಸ್ಟ್ 1 ರಂದು ಫ್ರೀಡಂ ಪಾರ್ಕ್‌ಗೆ ಪಾದಯಾತ್ರೆ ಬಂದು ಬೃಹತ್ ಸಮಾವೇಶದ ಮೂಲಕ ಬಿಡದಿ ಟೌನ್‌ಶಿಪ್ ಯೋಜನೆ ರದ್ದು ಮಾಡುವಂತೆ ಜೆಡಿಎಸ್ ಆಗ್ರಹ ಮಾಡಲಿದೆ ಅಂತ ಕೋರ್ ಕಮಿಟಿ ಅಧ್ಯಕ್ಷ ಕೃಷ್ಣಾರೆಡ್ಡಿ ತಿಳಿಸಿದರು. ಸರ್ಕಾರ ಯೋಜನೆ ರದ್ದು ಮಾಡೋವರೆಗೂ ಜೆಡಿಎಸ್ ಹೋರಾಟ ಮಾಡಲಿದೆ. ಪಾದಯಾತ್ರೆ ಬಳಿಕ ವಿಧಾನಸೌಧ ಚಲೋ ಕೂಡಾ ಮಾಡ್ತೀವಿ. ಬಿಜೆಪಿಗೂ ಮೊದಲೇ ನಾವು ಪಾದಯಾತ್ರೆ ನಿರ್ಧಾರ ಮಾಡಿದ್ವಿ. ಅದರಂತೆ ಇಂದು ಘೋಷಣೆ ಮಾಡಿದ್ದೇವೆ ಅಂತ ಕೃಷ್ಣಾರೆಡ್ಡಿ ಹೇಳಿದರು.

ಸುರೇಶ್ ಬಾಬು ಮಾತನಾಡಿ, ಜೆಡಿಎಸ್ ಮೊದಲ ದಿನದಂದಲೂ ಹೋರಾಟ ಮಾಡುತ್ತಿದೆ. ನಿನ್ನೆ ಬಿಜೆಪಿ ಪ್ರತಿಭಟನೆ ಮಾಡಿ ಪಾದಯಾತ್ರೆ ಘೋಷಣೆ ಮಾಡಿದರು. ಯಡಿಯೂರಪ್ಪ ರೈತರ ಪರ ನಾಯಕ. ಅವರು ನಿನ್ನೆ ಪಾದಯಾತ್ರೆ ಬಗ್ಗೆ ಮಾತಾಡಿದರು. ಮುಂದೆ ಎರಡು ಪಕ್ಷದ ನಾಯಕರು ಕೂತು ಮಾತಾಡಬಹುದು ಎಂದರು. ಈಗಲೂ ಬಜೆಪಿ ನಾಯಕರು ನಮ್ಮ ನಾಯಕರ ಜತೆ ಮಾತಾಡಿ ನಮ್ಮ ಜೊತೆ ಬರಲಿ. ಇನ್ನು 10 ದಿನ ಸಮಯ ಇದೆ. ಬಿಜೆಪಿ ಅವರು ನಮ್ಮ ನಾಯಕರ ಜತೆ ಮಾತಾಡಿ ಒಟ್ಟಾಗಿ ಹೋಗಬಹುದು ಅಂತ ಕೃಷ್ಣಾರೆಡ್ಡಿ ಬಿಜೆಪಿ ನಾಯಕರಿಗೆ ಸಲಹೆ ಕೊಟ್ಟರು.

ಜೆಡಿಎಸ್ ಪಾದಯಾತ್ರೆ ರೂಟ್ ಮ್ಯಾಪ್? – ಜುಲೈ 30, ಬೆಳಗ್ಗೆ-ಬೈರಮಂಗಲ ವೃತ್ತದಿಂದ ಬಿಡದಿ ವೃತ್ತ 8km, ಮಧ್ಯಾಹ-ಬಿಡದಿ ವೃತ್ತದಿಂದ ಕ್ರೈಸ್ಟ್ ವಿವಿ- 7 km, ಒಟ್ಟು 15 km.., ಜುಲೈ 31 – ಬೆಳಗ್ಗೆ- ಕ್ರೈಸ್ಟ್ ವಿವಿ ಗೇಟ್‌ನಿಂದ ಜೆಕೆ ಗ್ರ್ಯಾಂಡ್ ಅರೆನಾ (ನೈಸ್ ಜಂಕ್ಷನ್) 6km, ಮಧ್ಯಾಹ್ನ- ನೈಸ್ ಜಂಕ್ಷನ್‌ನಿಂದ ಆರ್.ಆರ್. ನಗರ ಕಮಾನು 10km, ಒಟ್ಟು – 16km.., ಆಗಸ್ಟ್ 1 – ಬೆಳಗ್ಗೆ- ಆರ್.ಆರ್. ಜಂಕ್ಷನ್‌ನಿಂದ ಫ್ರೀಡಂ ಪಾರ್ಕ್ 7 km, ಮಧ್ಯಾಹ್ನ ಫ್ರೀಡಂ ಪಾರ್ಕ್‌ನಲ್ಲಿ ಸಮಾವೇಶ.., ಇದನ್ನೂ ಓದಿ : ನನ್ನ ಅನುಮತಿ ಇಲ್ಲದೆ, ಚಿಕಿತ್ಸೆ ಬೇಡ ಎಂದ ಸೋನಂ ವಾಂಗ್ಚುಕ್ ಪತ್ನಿ

Related posts

ಸಾರಿಗೆ ಬಸ್ ನಿಲ್ದಾಣ ಬಳಿ ಕರಡಿ ಪ್ರತ್ಯಕ್ಷ – ಸಿಸಿಟಿವಿಯಲ್ಲಿ ದೃಶ್ಯ ಸೆರೆ..!

Kalpana Editor

ಕೇರಳದಿಂದ ಬಂಡೀಪುರ ತಗಾದೆ; ಸಂಚಾರ ನಿಷೇಧ ತೆರವಿಗೆ ಮಾತುಕತೆ – ಡಿಕೆಶಿ ಸಕರಾತ್ಮಕ ಸ್ಪಂದನೆ..!

Kalpana Editor

ರಾಯಬಾಗದಲ್ಲಿ ಭೀಕರ ರಸ್ತೆ ಅಪಘಾತ; ಮೂವರ ದುರ್ಮರಣ..!

Kalpana Editor