August 1, 2026
kranthikidi.com
ತಾಜಾಸುದ್ದಿದೇಶರಾಜಕೀಯರಾಜ್ಯ

ಕುತೂಹಲಕ್ಕೂ ಕಾಂಗ್ರೆಸ್‌ ಹೈಕಮಾಂಡ್‌ ಬ್ರೇಕ್‌; ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ಹೆಸರು ಖಚಿತ..!

ನವದೆಹಲಿ/ಬೆಂಗಳೂರು : ರಾಜ್ಯದ ನೂತನ ಮುಖ್ಯಮಂತ್ರಿ ಹುದ್ದೆಗೆ ಡಿಸಿಎಂ ಡಿಕೆ ಶಿವಕುಮಾರ್‌ ಅವರ ಹೆಸರು ಖಚಿತಗೊಂಡಿದ್ದ, ಹಿನ್ನೆಲೆಯಲ್ಲಿ ತೆರವಾಗುವ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾರು ಬರುತ್ತಾರೆ ಅನ್ನೋ ಕುತೂಹಲಕ್ಕೂ ಕಾಂಗ್ರೆಸ್‌ ಹೈಕಮಾಂಡ್‌ ಬ್ರೇಕ್‌ ಹಾಕಿದೆ.

ಶಾಸಕಾಂಗ ಪಕ್ಷದ ನಾಯಕನಾಗುತ್ತಿದ್ದಂತೆ, ಡಿಕೆ ಶಿವಕುಮಾರ್‌ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಅದರಿಂದ ತೆರವಾಗುವ ಸ್ಥಾನಕ್ಕೆ ಸಚಿವ ಸತೀಶ್‌ ಜಾರಕಿಹೊಳಿ ಅವರ ಹೆಸರು ಬಹುತೇಕ ಅಂತಿಮಗೊಂಡಿದೆ, ಎಂದು ಪಕ್ಷದ ಆಪ್ತ ಮೂಲಗಳು ತಿಳಿಸಿವೆ.

ಸತೀಶ್‌ ಜಾರಕಿಹೊಳಿ ಅವರೊಂದಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್‌ ಅವರು ಈಗಾಗಲೇ ಮಾತುಕತೆ ನಡೆಸಿದ್ದು, ಕೆಪಿಸಿಸಿ ಅಧ್ಯಕ್ಷರಾಗುವಂತೆ ಹೇಳಿದ್ದಾರೆ. ಆದ್ರೆ ‌ಸತೀಶ್‌ ಜಾರಕಿಹೊಳಿ ಅವರು, ಸಚಿವ ಸ್ಥಾನದ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೂ ಬೇಡಿಕೆಯಿಟ್ಟಿದ್ದಾರೆ.

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಮಾತುಕತೆ ನಡೆಸಿದಾಗಲೂ ಸತೀಶ್‌ ಜಾರಕಿಹೊಳಿ ಇದೇ ಪ್ರಸ್ತಾಪ ಇಟ್ಟಿದ್ದರು. ಆದ್ರೆ ಹೈಕಮಾಂಡ್‌ ಈ ಡಿಮ್ಯಾಂಡ್ ಒಪ್ಪುತ್ತಾ, ಎಂಬುದನ್ನು ಕಾದುನೋಡಬೇಕಿದೆ.

Related posts

ಪದೇ ಪದೇ ತುಟಿ ಒಡೆಯುವುದನ್ನು ತಡೆಯಲು ಈ ರೀತಿ ಮಾಡಿ..!

Kalpana Editor

ಜಿಲ್ಲೆಯಲ್ಲಿ ನಿರಂತರ ಮಳೆ; ಜಲಾವೃತ ಸೇತುವೆಯಿಂದ ಗ್ರಾಮಕ್ಕೆ ಸಂಪರ್ಕ ಕಡಿತ..!

Kalpana Editor

ಗಾಂಧಿ ಬಜಾರ್ ಹೈಟೆಕ್ ಪಾರ್ಕಿಂಗ್ ಲಾಟ್‌ ಕಾರು ಶೋರೂಂಗೆ ಬಾಡಿಗೆಗೆ..!

Kalpana Editor