27.3 C
ಬೆಂಗಳೂರು
October 12, 2026
kranthikidi.com
ತಾಜಾಸುದ್ದಿವಿದೇಶ

ಐಷಾರಾಮಿ ದಾಳಿ: 142 ಕೋಟಿ ನಗದು ಮತ್ತು ಶುದ್ಧ ಚಿನ್ನದ ಒಳ ಉಡುಪು ಜಪ್ತಿ..!

ಇರಾಕ್‌ : ಇರಾಕ್‌ ಸಂಸದೆ ಹಿಂದ ಅಲ್‌ ಅಬ್ಬಾಸಿ ಎನ್ನುವವರ ಮನೆಯಲ್ಲಿ ಅಧಿಕಾರಿಗಳು ಶೋಧ ನಡೆಸಿದ ಸಮಯದಲ್ಲಿ 27 ಕೆ.ಜಿ. ಶುದ್ಧ ಚಿನ್ನ ಪತ್ತೆಯಾಗಿದ್ದು, ಚಿನ್ನ ಒಳ ಉಡುಪು ಸಹ ಪತ್ತೆಯಾಗಿದೆ ಎನ್ನುವ ಫೋಟೊ, ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಸಾರ್ವಜನಿಕರ ನಿಧಿಯನ್ನು ದುರುಪಯೋಗ ಪಡಿಸಿಕೊಂಡಿರುವುದರ ಆರೋಪದ ಮೇಲೆ ಸಂಸದರ ಮನೆಯಲ್ಲಿ ಶೋಧ ಕಾರ್ಯವನ್ನು ನಡೆಸಲಾಗಿದೆ.

ದುಬಾರಿ ವಸ್ತುಗಳು ಹಾಗೂ ಕೋಟಿಗಟ್ಟಲೇ ಹಣ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 47 ಜನರನ್ನು ಬಂಧಿಸಲಾಗಿದೆ ಎನ್ನುವ ಸುದ್ದಿ ಹರಿದಾಡಿದೆ. ಶೋಧದಲ್ಲಿ ಕೋಟಿಗಟ್ಟಲೇ ಹಣ, ಚಿನ್ನಾಭರಣಗಳು, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ‘ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಯಾವುದೇ ರಾಜಿ ಇಲ್ಲ’. ಎಂದು ಪ್ರಧಾನಿ ಅಲಿ ಅಲ್-ಜೈದಿ ಹೇಳಿದ್ದಾರೆ ಎನ್ನುವ ಸುದ್ದಿಯೂ ಹರಿದಾಡುತ್ತಿದೆ. ಲೇಟೆಸ್ಟ್ಲಿ ಫ್ಯಾಕ್ಟ್‌ ಚೆಕ್‌ ಪ್ರಕಾರ, ಇರಾಕ್‌ನಲ್ಲಿ ಇಂಥಹದ್ದೊಂದು ದಾಳಿ ನಡೆದೇ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಕೃತಕ ಬುದ್ಧಿಮತ್ತೆ ಆಧರಿಸಿದ ವಿಡಿಯೊ ಮತ್ತು ಫೋಟೊಗಳಾಗಿವೆ. ಆದರೆ ಈ ಬಗ್ಗೆ ಇರಾಕ್ ಸರ್ಕಾರದ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಯಾವುದೇ ಮಾಹಿತಿ ಲಭ್ಯವಿಲ್ಲ.

ಈ ಹಿಂದೆ ಮಾಜಿ ಪ್ರಧಾನಿ ಮೊಹಮ್ಮದ್ ಶಿಯಾ ಅಲ್ ಸುಡಾನಿ ಜೊತೆಯಲ್ಲಿ ಕೆಲಸ ಮಾಡಿದ್ದ ಆಲಿಯಾ ನಾಸಿಫ್, ಸ್ಟೇಲ್‌ ಆಫ್‌ ಲಾ ಕೋಲಿಷನ್‌ ಪಕ್ಷವನ್ನು ಪ್ರತಿನಿಧಿಸುತ್ತಿದ್ದಾರೆ. ಇವರು ಈ ಹಿಂದೆ ಭ್ರಷ್ಟಾಚಾರದ ವಿರುದ್ಧ ಮಾತನಾಡಿ ಖ್ಯಾತಿ ಗಳಿಸಿದ್ದರು. ಈಗ ಖುದ್ದು ಅಪಾರ ಪ್ರಮಾಣದ ಭ್ರಷ್ಟಾಚಾರದಲ್ಲಿ ಭಾಗಿಯಾಗಿ ಲಾಕ್‌ ಆಗಿದ್ದಾರೆ.

ಸಂಸದೆಯ ಮನೆಯಲ್ಲಿ ಕೋಟಿ ಕೋಟಿ ಹಣ, ಚಿನ್ನಾಭರಣ ಪತ್ತೆಯಾಗಿದೆ. ಇರಾನ್‌ ಸಂಸದೆ ಶುದ್ಧ ಚಿನ್ನದಲ್ಲಿ ಒಳ ಉಡುಪು ಮಾಡಿಸಿಕೊಂಡಿದ್ದಾರೆ. ಮನೆಯಲ್ಲಿ ಬರೋಬ್ಬರಿ 146 ಕೋಟಿ ನಗದು ಪತ್ತೆಯಾಗಿದೆ. ಗೋಪುರದ ರೀತಿಯಲ್ಲಿ ಹಣ ಹೊಂದಿಸಿಟ್ಟುರುವುದು ಬೆಳಕಿಗೆ ಬಂದಿದೆ. ಸುಮಾರು 805 ಕೋಟಿಯಷ್ಟು ಆಸ್ತಿ ಪತ್ರಗಳು ಪತ್ತೆಯಾಗಿವೆ. ಕಳೆದ ತಿಂಗಳು ಬಂಧನಕ್ಕೊಳಪಟ್ಟ ಮಾಜಿ ಸಚಿವ ಅದ್ನಾನ್ ಅಲ್ ಜುಮೈಲಿ ಮಾಹಿತಿ ಮೇರೆಗೆ ದಾಳಿ ನಡೆದಿತ್ತು.

ಮನೆಯ ಕೆಳಗೆ ಹೂತ್ತಿಟ್ಟಿದ್ದ ಶತಕೋಟಿ ಇರಾಕಿ ದಿನಾರ್ ವಶಕ್ಕೆ ಪಡೆಯಲಾಗಿದೆ. ಕಳೆದ ವಾರ ಕೆಲವು ಖಾಸಗಿ ಮನೆಗಳ ಮೇಲೆ ದಾಳಿ ನಡೆದಿದೆ. ದಾಳಿಯಲ್ಲಿ ಸುಮಾರು ಸಾವಿರ ಕೋಟಿಯಷ್ಟು ಇರಾಕ್ ಕರೆನ್ಸಿಯನ್ನು ಹೂತಿಡಲಾಗಿತ್ತು.‌ ಅತಿದೊಡ್ಡ ಭ್ರಷ್ಟಾಚಾರ ವಿರೋಧಿ ಕಾರ್ಯಚರಣೆ ಭಾಗವಾಗಿ ಅಧಿಕಾರಿಗಳು ಕೋಟಿ ಕೋಟಿ ಹಣ ವಶಕ್ಕೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ : ಒಂದೇ ತಿಂಗಳಲ್ಲಿ ಗಣೇಶ್ ನಟನೆಯ 2 ಸಿನಿಮಾಗಳು ರಿಲೀಸ್..!

Related posts

ಅಯೋಧ್ಯೆ, ಬದರಿನಾಥ ಬಳಿಕ ಈಗ ವೈಷ್ಣೋದೇವಿಯಲ್ಲೂ ಅಕ್ರಮ..!

Kalpana Editor

ಸಿಎಂ ಆದ ದಿನಕ್ಕೆ ರೌಡಿಗಳ ವಿರುದ್ಧ ಸಮರ ಸಾರಿದ ಸಿಎಂ ಡಿಕೆ ಶಿವಕುಮಾರ್

Kalpana Editor

19 ರಾಜ್ಯಗಳಲ್ಲಿ ಭಾರೀ ಮಳೆಯ ಅಲರ್ಟ್‌ – ಗುಡುಗು ಸಿಡಿಲಿನ ಆರ್ಭಟವೂ ಜೋರು..!

Kalpana Editor