ಬಾಲಿವುಡ್ ನಟಿ ಹಾಗೂ ಬಿಜೆಪಿ ಕಂಗನಾ ರಣಾವತ್ Gen-Zಗಳ ವಿರುದ್ಧ ಮಾತನಾಡಿ ಯುವಜನತೆಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇತ್ತೀಚೆಗೆ ಜಂತರ್ ಮಂತರ್ ಸೇರಿದಂತೆ ಹಲವು ಕಡೆ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಮಾತನಾಡಿದ ಕಂಗನಾ, Gen-Z ಪ್ರತಿಭಟನಾಕಾರರ ವಿರುದ್ಧ ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ. ಅವರ ಹೇಳಿಕೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಪ್ರತಿಭಟನಾಕಾರರು ಬಳಸಿದ ಭಾಷೆ, ಪೋಸ್ಟರ್‌ಗಳು ಮತ್ತು ಸೋಷಿಯಲ್ ಮೀಡಿಯಾ ಪೋಸ್ಟ್‌ಗಳನ್ನು ಟೀಕಿಸಿದ ಕಂಗನಾ, ಇಷ್ಟು ಅಸಹ್ಯಕರ ದೃಶ್ಯಗಳನ್ನು ನಾನು ಎಂದಿಗೂ ನೋಡಿಲ್ಲ. ಈ ಪ್ರತಿಭಟನೆಗಳ ವಿಡಿಯೋಗಳು ನೋಡಿದರೆ ವಾಂತಿ ಬರುತ್ತದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ನೀವೇ ನಿಮ್ಮನ್ನು ಜಿರಳೆಗಳು ಎಂದು ಕರೆದುಕೊಳ್ಳುತ್ತಿದ್ದೀರಿ. ನಿಮ್ಮ ವರ್ತನೆಯೂ ಅದೇ ರೀತಿಯೇ ಇದೆ ಎಂದು ಟೀಕಿಸಿದ್ದಾರೆ. ನೀವು ಬಳಸುವ ಭಾಷೆ, ವರ್ತನೆ ಸರಿಯಿಲ್ಲ. ನಿಮ್ಮನ್ನ ಬೆಳಸಿದವರು ಯಾರು? ಇದನ್ನೆಲ್ಲ ನೋಡಿದ ಮೇಲೆ ನನಗೆ ಡಿಜಿಟಲ್ ಡೀಟಾಕ್ಸ್‌ನ ಅವಶ್ಯಕತೆ ಇದೆ ಎಂದು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.
ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕೆಲ ಹಿಂದೂ ಮಹಿಳೆಯರ ಬಗ್ಗೆ ಕೂಡ ಕಂಗನಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರನ್ನು ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾದವರ, ಅವರು ಗೃಹಿಣಿಯಾಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ Gen-Zಗಳಿಗೆ ʼಜನರೇಷನ್ ಗಟರ್ʼ ಎಂದು ಕಂಗನಾ ಕರೆದಿರುವುದು ಮತ್ತಷ್ಟು ವಿವಾದಕ್ಕೆ ಕಾರಣವಾಗಿದೆ. ಈ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೂ ಮೊದಲು ಕೂಡ ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಕಂಗನಾ ಹಲವು ಬಾರಿ ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದರು. ಇದೀಗ ಅವರ ಹೊಸ ಹೇಳಿಕೆ ಮತ್ತೆ ರಾಜಕೀಯ ಮತ್ತು ಸಿನಿಮಾ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ : ದಾಖಲೆಯ ಮೊತ್ತಕ್ಕೆ ಮಾರಾಟ ಆಗಲಿದೆ ‘ರಾಮಾಯಣ’ ಆಡಿಯೋ ಹಕ್ಕು..!
