28.4 C
ಬೆಂಗಳೂರು
October 5, 2026
kranthikidi.com
ತಾಜಾಸುದ್ದಿರಾಜ್ಯ

ಕೆಆರ್‌ಎಸ್‌ ಖಾಲಿ ಖಾಲಿ; ಇನ್ನಿರೋದು ಕೇವಲ 11 ಟಿಎಂಸಿ ನೀರು..!

ಮಂಡ್ಯ : ಕಾವೇರಿ ಜಲಾನಯನ ಪ್ರದೇಶದಲ್ಲಿ ಆರಂಭದಲ್ಲೇ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದೆ. ಇದರ ಬೆನ್ನಲ್ಲೇ ಬರದ ಆತಂಕದಲ್ಲಿರೋ ಮಂಡ್ಯ ಜಿಲ್ಲೆಯ ರೈತರಿಗೆ ಜಿಲ್ಲಾಡಳಿತ ಮತ್ತೊಂದು ಬಿಗ್ ಶಾಕ್ ನೀಡಿದೆ.

ಕೃಷ್ಣರಾಜಸಾಗರ ಜಲಾಶಯ ನಾಡಿಗೆ ನೀರುಣಿಸುವ ಡ್ಯಾಂ. ಮಂಡ್ಯ, ಮೈಸೂರು ಕೊಡಗು ಭಾಗದ ರೈತರನ್ನು ಕಾಪಾಡುವ ಜೀವನದಿ. ಬೆಂಗಳೂರಿಗರು ಕುಡಿಯುವ ಹನಿ ಹನಿ ನೀರು ಕೂಡ ಇದೇ ಡ್ಯಾಂನಿಂದ ಬರೋದು. ಜೀವನದಿ ಎಂಬ ಕಾವೇರಿ ಈಗ ಜೀವಕಳೆ ಕಳೆದುಕೊಂಡಿದ್ದಾಳೆ. ಮುಂಗಾರು ಮಳೆ ಆರಂಭದಲ್ಲಿಯೇ ನಿರಾಸೆ ಉಂಟುಮಾಡಿದೆ.

ಇದರ ಮಧ್ಯೆಯೇ ಬರದ ಆತಂಕದಲ್ಲಿರುವ ಮಂಡ್ಯ, ಮೈಸೂರು ಜಿಲ್ಲೆ ರೈತರಿಗೆ ಈಗ ಜಿಲ್ಲಾಡಳಿತ ನಿರ್ಧಾರದಿಂದ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ. ಕೆಆರ್‌ಎಸ್ ಅಣೆಕಟ್ಟಿನಲ್ಲಿ ಈಗ ಉಳಿದಿರೋದು ಕೇವಲ 11 ಟಿಎಂಸಿ ನೀರು. ಅದರಲ್ಲಿ 5 ಟಿಎಂಸಿ ಡೆಡ್ ಸ್ಟೋರೆಜ್. ಬಳಕೆಗೆ ಸಿಗೋದು ಕೇವಲ 6 ಟಿಎಂಸಿ ನೀರು. ಹೀಗಾಗಿ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಿರುವ ಜಿಲ್ಲಾಡಳಿತ ಮುಂದಿನ 3 ತಿಂಗಳು ಕುಡಿಯುವ ನೀರಿನ ನಿರ್ವಹಣೆಗಾಗಿ ನಿರ್ಧಾರಕ್ಕೆ ಬಂದಿದೆ. ಇದನ್ನೂ ಓದಿ : ‘ಬಾಸ್’ ಸಿನಿಮಾಗೆ ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ದರ್ಶನ್, ವಿಜಯಲಕ್ಷ್ಮಿ

Related posts

ಮೀಟರ್​​​ ರೀಡಿಂಗ್​​ ಇಲ್ಲ – ಜುಲೈ ತಿಂಗಳ ಕರೆಂಟ್​ ಬಿಲ್​​ ಬರಲ್ಲ..!

Kalpana Editor

ಇಂದು ಬೆಳ್ಳಂಬೆಳಗ್ಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ದಾಳಿ; ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ..!

Kalpana Editor

ಏರ್‌ಪೋರ್ಟ್‌ನಲ್ಲಿ ಬಾಂಬ್ ಬೆದರಿಕೆ; ಇಂಡಿಗೋ ವಿಮಾನದಲ್ಲಿ ಚೀಟಿ ಪತ್ತೆ..!

Kalpana Editor