29 C
ಬೆಂಗಳೂರು
September 20, 2026
kranthikidi.com
ತಾಜಾಸುದ್ದಿರಾಜ್ಯ

ಹಂಪಿಯ ವಿರೂಪಾಕ್ಷ ದೇಗುಲದ ‘ಲಕ್ಷ್ಮೀ’ ಕೊನೆಗೂ ಕೋಲಾರಕ್ಕೆ ಸ್ಥಳಾಂತರ..!

ಬಳ್ಳಾರಿ : ಹಂಪಿಯ ಶ್ರೀ ವಿರೂಪಾಕ್ಷ ದೇವಸ್ಥಾನದ ಆನೆ ‘ಲಕ್ಷ್ಮೀ’ಯನ್ನು ತೀವ್ರ ವಿರೋಧ ಹಾಗೂ ಆಕ್ರೋಶದ ನಡುವೆಯೂ ಕೊನೆಗೂ ಕೋಲಾರಕ್ಕೆ ಸ್ಥಳಾಂತರ ಮಾಡಲಾಗಿದೆ. ಮುಜರಾಯಿ ಇಲಾಖೆ ಹಾಗೂ ವಿಜಯನಗರ ಜಿಲ್ಲಾಡಳಿತದ ನೇತೃತ್ವದಲ್ಲಿ ತಡರಾತ್ರಿ 1 ಗಂಟೆಯ ಬಳಿಕ ಅತ್ಯಂತ ಗೌಪ್ಯವಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ.

ಲಕ್ಷ್ಮೀಯನ್ನು ಹಂಪಿಯಿಂದ ಬೇರೆಡೆಗೆ ಸ್ಥಳಾಂತರಿಸಬಾರದು ಎಂದು ಆಗ್ರಹಿಸಿ ನಿನ್ನೆಯಷ್ಟೇ ಸ್ಥಳೀಯರು ಹಾಗೂ ಭಕ್ತರು ತೀವ್ರ ಹೋರಾಟ ನಡೆಸಿದ್ದರು. ಇತ್ತ ಸಾಮಾಜಿಕ ಜಾಲತಾಣಗಳಲ್ಲೂ ಆನೆಯನ್ನು ಹಂಪಿಯಲ್ಲೇ ಉಳಿಸಿಕೊಳ್ಳಬೇಕು ಎಂದು ದೊಡ್ಡ ಮಟ್ಟದ ಆಕ್ರೋಶ ವ್ಯಕ್ತವಾಗಿತ್ತು. ಇಷ್ಟೆಲ್ಲಾ ವಿರೋಧಗಳಿದ್ದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ತಡರಾತ್ರಿಯ ಕಾರ್ಯಾಚರಣೆಯ ಹಾದಿ ಹಿಡಿಯಿತು.

ವರ್ಷಗಳಿಂದ ಆನೆಯನ್ನು ತಮ್ಮದೇ ಮಗುವಿನಂತೆ ಸಾಕಿ ಸಲಹಿದ್ದ ಮಾವುತರ ಕುಟುಂಬಕ್ಕೆ ಈ ಸ್ಥಳಾಂತರ ತೀವ್ರ ಆಘಾತ ತಂದಿದೆ. ತಡರಾತ್ರಿ ಆನೆಯನ್ನು ಲಾರಿಗೆ ಹತ್ತಿಸುವ ಸಂದರ್ಭದಲ್ಲಿ ಮಾವುತರ ಕುಟುಂಬಸ್ಥರು ಆನೆಯನ್ನು ಅಪ್ಪಿಕೊಂಡು ಬಿಕ್ಕಿ ಬಿಕ್ಕಿ ಅತ್ತ ದೃಶ್ಯ ನೆರೆದಿದ್ದವರ ಕಣ್ಣಾಲಿಗಳನ್ನು ಒದ್ದೆಯಾಗಿಸಿತ್ತು.

ಈ ಸ್ಥಳೀಯರ ಆಕ್ರೋಶ ಹಾಗೂ ಭಾವನಾತ್ಮಕ ವಿರೋಧ ಇದ್ದಾಗ್ಯೂ, ಆನೆ ಲಕ್ಷ್ಮೀಯ ಆರೋಗ್ಯದ ದೃಷ್ಟಿಯಿಂದ ಈ ನಿರ್ಧಾರ ಅನಿವಾರ್ಯವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲಕ್ಷ್ಮಿಗೆ ಸದ್ಯ ಸೂಕ್ತ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದ್ದು, ಹೆಚ್ಚಿನ ಆರೈಕೆಗಾಗಿ ಕೋಲಾರಕ್ಕೆ ಶಿಫ್ಟ್ ಮಾಡಲಾಗಿದೆ ಎಂದು ಮುಜರಾಯಿ ಇಲಾಖೆ ಮತ್ತು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

Related posts

ಇಂದು ಬಂಗಾರಪೇಟೆ ಪಟ್ಟಣ ಬಂದ್‌; ನಾರಾಯಣಸ್ವಾಮಿಗೆ ಸಚಿವ ಸ್ಥಾನ ಸಿಗದಿದ್ದಕ್ಕೆ, ಬೆಂಬಲಿಗರ ಆಕ್ರೋಶ..!

kknewskannada1987@gmail.com

We Want Sanju – ಆಟಗಾರರ ಮುಂದೆ ಆಕ್ರೋಶ ಹೊರಹಾಕಿದ ಅಭಿಮಾನಿಗಳು

Kalpana Editor

ಮತ್ತಷ್ಟು ಯಶಸ್ಸು ನಿಮ್ಮದಾಗಲಿ; ಡಿಕೆ ಶಿವಕುಮಾರ್‌ಗೆ ಸೋನಿಯಾ ಗಾಂಧಿ ಶುಭ ಹಾರೈಕೆ..!

Kalpana Editor