26.4 C
ಬೆಂಗಳೂರು
September 20, 2026
kranthikidi.com
ತಾಜಾಸುದ್ದಿವಿದೇಶ

ಬೈಜುಸ್ ಸಂಸ್ಥಾಪಕ ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ..!

ಸಿಂಗಾಪುರ : ಬೈಜುಸ್ ಕಂಪನಿಯ ಸಂಸ್ಥಾಪಕ ಬೈಜು ರವೀಂದ್ರನ್ ಅವರಿಗೆ ಸಿಂಗಾಪುರ ನ್ಯಾಯಾಲಯವು 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಕತಾರ್ ಇನ್ವೆಸ್ಟ್‌ಮೆಂಟ್ ಅಥಾರಿಟಿಯ ಅಂಗಸಂಸ್ಥೆಯಾದ ಕತಾರ್ ಹೋಲ್ಡಿಂಗ್‌ ಒಪ್ಪಂದ ಉಲ್ಲಂಘನೆ ಮತ್ತು ವಂಚನೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಆದೇಶ ಪ್ರಕಟವಾಗಿದೆ. ಆಸ್ತಿ ವಿವರಗಳಿಗೆ ಸಂಬಂಧಿಸಿದಂತೆ ಏಪ್ರಿಲ್ 2024 ರಿಂದ ನ್ಯಾಯಾಲಯ ನೀಡಿದ್ದ ಹಲವು ಆದೇಶಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಇವರಿಗೆ ಶಿಕ್ಷೆ ವಿಧಿಸಲಾಗಿದೆ.

ರವೀಂದ್ರನ್ ಅವರು ಯಾವುದೇ ನೆಪ ಹೇಳದೆ ತಕ್ಷಣವೇ ಸಿಂಗಾಪುರದ ಸಂಬಂಧಿತ ಅಧಿಕಾರಿಗಳ ಮುಂದೆ ಶರಣಾಗಬೇಕು ಎಂದು ಕೋರ್ಟ್ ಖಡಕ್‌ ಆಗಿ ಸೂಚಿಸಿದೆ. ಕಾನೂನು ವೆಚ್ಚಗಳಿಗಾಗಿ ಸುಮಾರು 90 ಸಾವಿರ ಸಿಂಗಾಪುರ ಡಾಲರ್‌(67.47 ಲಕ್ಷರೂ.) ಪಾವತಿಸುವಂತೆ ಆದೇಶಿಸಲಾಗಿದೆ. ಹೂಡಿಕೆದಾರರ ಹಣವನ್ನು ದುರುಪಯೋಗ ಪಡಿಸಿಕೊಂಡು, ಆಸ್ತಿ ವಿವರಗಳನ್ನು ಅಂತರರಾಷ್ಟ್ರೀಯ ನ್ಯಾಯಾಲಯಗಳಿಂದ ಮುಚ್ಚಿಡಲು ಪ್ರಯತ್ನಿಸಿದ್ದಕ್ಕೆ ಬೈಜು ರವೀಂದ್ರನ್ ಅವರಿಗೆ ಈ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗಿದೆ.

ಬೈಜು ರವೀಂದ್ರನ್ ಅವರು ತಮ್ಮ ವೈಯಕ್ತಿಕ ಮತ್ತು ಕಂಪನಿಯ ಆಸ್ತಿ ವಿವರಗಳನ್ನು ಬಹಿರಂಗಪಡಿಸುವಂತೆ ನ್ಯಾಯಾಲಯ ನೀಡಿದ್ದ ಸರಣಿ ಆದೇಶಗಳನ್ನು ಏಪ್ರಿಲ್ 2024 ರಿಂದಲೇ ನಿರಂತರವಾಗಿ ನಿರ್ಲಕ್ಷಿಸುತ್ತಾ ಬಂದಿದ್ದರು. ಕಾನೂನು ಪ್ರಕ್ರಿಯೆಗಳಿಂದ ತಪ್ಪಿಸಿಕೊಳ್ಳಲು ಮತ್ತು ಮಾಹಿತಿ ಮುಚ್ಚಿಡಲು ರವೀಂದ್ರನ್ ಅವರು ಉದ್ದೇಶಪೂರ್ವಕವಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ನ್ಯಾಯಾಲಯ ಕಟು ಪದಗಳಿಂದ ಸಿಟ್ಟು ಹೊರಹಾಕಿದೆ.

ವಿದೇಶಿ ಹೂಡಿಕೆದಾರರು ಮತ್ತು ಸಾಲದಾತರು ತಮ್ಮ ನಷ್ಟವನ್ನು ವಸೂಲಿ ಮಾಡಲು ಜಾಗತಿಕವಾಗಿ ಇವರ ವಿರುದ್ಧ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಈ ಹಿಂದೆ ಅಮೆರಿಕದ ನ್ಯಾಯಾಲಯ ಕೂಡ ನ್ಯಾಯಾಲಯದ ಆದೇಶಗಳನ್ನು ನಿರ್ಲಕ್ಷಿಸಿದ್ದಕ್ಕಾಗಿ ಬೈಜು ರವೀಂದ್ರನ್ ಅವರಿಗೆ ಭಾರಿ ಮೊತ್ತದ ದಂಡವನ್ನು ವಿಧಿಸಿತ್ತು.

ಭಾರತದ ಜಾರಿ ನಿರ್ದೇಶನಾಲಯ, ಬೈಜುಸ್ ಸಂಸ್ಥೆಯು ವಿದೇಶಿ ಹೂಡಿಕೆ ಪಡೆಯುವಾಗ ಮತ್ತು ವಿದೇಶಕ್ಕೆ ಹಣ ಕಳುಹಿಸುವಾಗ ಸುಮಾರು 9,000 ಕೋಟಿ ರೂ.ಗೂ ಅಧಿಕ ಮೊತ್ತದ ಫೆಮಾ ನಿಯಮಗಳನ್ನು ಉಲ್ಲಂಘಿಸಿದೆ ಎಂದು ತನಿಖೆ ನಡೆಸುತ್ತಿದೆ. ಹೂಡಿಕೆದಾರರನ್ನು ಆಕರ್ಷಿಸಲು ಕಂಪನಿಯ ಆದಾಯದ ಬಗ್ಗೆ ಸುಳ್ಳು ಲೆಕ್ಕಪತ್ರಗಳನ್ನುಸೃಷ್ಟಿಸಿದ ಆರೋಪವೂ ಸೇರಿದೆ.

Related posts

ಗದಗದಲ್ಲಿ ಪರೀಕ್ಷಾ ಗೋಲ್‌ಮಾಲ್; ಬಾಗಿಲು ಬಂದ್ ಮಾಡಿ ಒಳಗೆ ಎಕ್ಸಾಮ್ ನಡೆಸಿದ ಸಿಬ್ಬಂದಿ

Kalpana Editor

‘ಕೆಜಿಎಫ್ 3’ ಮಾಡದೆ ಹೊಸ ರಿಸ್ಕ್ ತಗೊಂಡಿದ್ದೇಕೆ..?; ಮೌನ ಮುರಿದ ನಟ ಯಶ್

kknewskannada1987@gmail.com

2ನೇ ಬಾರಿಗೆ ದರ ಏರಿಕೆ ಬಿಸಿ – ಸಿಎನ್‌ಜಿ ಬೆಲೆ ಮತ್ತೆ 2 ರೂ. ಹೆಚ್ಚಳ..!

Kalpana Editor