ರಾಜ್ಯದಾದ್ಯಂತ ಮಳೆಯ ವಾತಾವರಣ ಮುಂದುವರಿದಿದ್ದು, ಪ್ರಮುಖ ಜಲಾಶಯಗಳಿಗೆ ನೀರಿನ ಹರಿವು ಏರಿಕೆಯಾಗುತ್ತಿದೆ. ಕೃಷ್ಣಾ ನದಿ ಕೊಳ್ಳದ ಆಲಮಟ್ಟಿ ಜಲಾಶಯಕ್ಕೆ ಭಾರಿ ಪ್ರಮಾಣದ ನೀರು ಹರಿದುಬರುತ್ತಿದ್ದರೆ, ಕಾವೇರಿ ಹಾಗೂ ತುಂಗಭದ್ರಾ ಕೊಳ್ಳದ ಜಲಾಶಯಗಳಲ್ಲಿ ನೀರಿನ ಮಟ್ಟ ಕ್ರಮೇಣ ಸ್ಥಿರಗೊಳ್ಳುತ್ತಿದೆ. ಜುಲೈ 21ರ ಬೆಳಗಿನ ಅಂಕಿ-ಅಂಶಗಳ ಪ್ರಕಾರ ರಾಜ್ಯದ ಪ್ರಮುಖ 5 ಜಲಾಶಯಗಳ ನೀರಿನ ಮಟ್ಟ ಮತ್ತು ಸಂಗ್ರಹ ವಿವರ ಹೀಗಿದೆ.
ಆಲಮಟ್ಟಿ ಜಲಾಶಯ (ಲಾಲ್ ಬಹಾದ್ದೂರ್ ಶಾಸ್ತ್ರೀ ಸಾಗರ) – ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಜಲಾಶಯಕ್ಕೆ ಒಳಹರಿವು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಗರಿಷ್ಠ ಮಟ್ಟ: 519.60 ಮೀಟರ್, ಇಂದಿನ ನೀರಿನ ಮಟ್ಟ: 517.97 ಮೀಟರ್, ಒಳಹರಿವು: 46,848 ಕ್ಯೂಸೆಕ್, ಹೊರಹರಿವು: 16,351 ಕ್ಯೂಸೆಕ್..,
ಕೆ.ಆರ್.ಎಸ್. ಜಲಾಶಯ (ಕೃಷ್ಣರಾಜಸಾಗರ) – ಮಂಡ್ಯ ಜಿಲ್ಲೆಯಲ್ಲಿರುವ ಕಾವೇರಿ ನದಿಯ ಜೀವನಾಡಿ ಕೆಆರ್‌ಎಸ್ ಅಣೆಕಟ್ಟಿನಲ್ಲಿ ನೀರು ಕಾಯ್ದುಕೊಳ್ಳಲಾಗುತ್ತಿದ್ದು, ಸದ್ಯದ ಮಟ್ಟಿಗೆ ಹರಿವು ಸಾಧಾರಣವಾಗಿದೆ. ಗರಿಷ್ಠ ಮಟ್ಟ: 124.80 ಅಡಿ, ಇಂದಿನ ನೀರಿನ ಮಟ್ಟ: 92.38 ಅಡಿ, ಒಳಹರಿವು: 775 ಕ್ಯೂಸೆಕ್, ಹೊರಹರಿವು: 2,391 ಕ್ಯೂಸೆಕ್, ಒಟ್ಟು ಸಂಗ್ರಹ ಸಾಮರ್ಥ್ಯ: 49.452 ಟಿಎಂಸಿ, ಇಂದಿನ ಸಂಗ್ರಹ: 17.407 ಟಿಎಂಸಿ..,
ಕಬಿನಿ ಜಲಾಶಯ – ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ತಾಲೂಕಿನಲ್ಲಿರುವ ಕಬಿನಿ ಜಲಾಶಯದ ಕೊಳ್ಳದಲ್ಲಿ ಕಳೆದ 24 ಗಂಟೆಗಳಲ್ಲಿ 15 ಮಿ.ಮೀ. ಮಳೆ ದಾಖಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಜಲಾಶಯದಲ್ಲಿ ನೀರಿನ ಸಂಗ್ರಹ ಪ್ರಮಾಣ ಕೊಂಚ ಕಡಿಮೆಯಿದೆ. ಇಂದಿನ ನೀರಿನ ಮಟ್ಟ: 72.23 ಅಡಿ (ಕಳೆದ ವರ್ಷ: 83.68 ಅಡಿ), ಇಂದಿನ ಸಂಗ್ರಹ: 12.80 ಟಿಎಂಸಿ (ಕಳೆದ ವರ್ಷ: 19.30 ಟಿಎಂಸಿ), ಒಳಹರಿವು: 3,330 ಕ್ಯೂಸೆಕ್ (ಕಳೆದ ವರ್ಷ: 12,796 ಕ್ಯೂಸೆಕ್), ನದಿಗೆ ಹೊರಹರಿವು: 500 ಕ್ಯೂಸೆಕ್ (ಕಳೆದ ವರ್ಷ: 10,042 ಕ್ಯೂಸೆಕ್)..,
ತುಂಗಭದ್ರಾ ಜಲಾಶಯ – ವಿಜಯನಗರ (ಹೊಸಪೇಟೆ) ವ್ಯಾಪ್ತಿಯ ತುಂಗಭದ್ರಾ ಜಲಾಶಯದಲ್ಲೂ ಒಳಹರಿವು ಮುಂದುವರಿದಿದೆ. ಕಳೆದ 10 ವರ್ಷಗಳ ಸರಾಸರಿಗೆ ಹೋಲಿಸಿದರೆ ಪ್ರಸ್ತುತ ಸಂಗ್ರಹ ಸಾಧಾರಣ ಮಟ್ಟದಲ್ಲಿದೆ. ಗರಿಷ್ಠ ಮಟ್ಟ: 1633.00 ಅಡಿ, ಇಂದಿನ ನೀರಿನ ಮಟ್ಟ: 1603.10 ಅಡಿ (ಕಳೆದ ವರ್ಷ: 1625.96 ಅಡಿ), ಒಟ್ಟು ಸಂಗ್ರಹ ಸಾಮರ್ಥ್ಯ: 105.788 ಟಿಎಂಸಿ, ಇಂದಿನ ಸಂಗ್ರಹ: 25.796 ಟಿಎಂಸಿ (ಕಳೆದ ವರ್ಷ: 79.665 ಟಿಎಂಸಿ), ಸರಾಸರಿ ಒಳಹರಿವು (24 ಗಂಟೆ): 3,667 ಕ್ಯೂಸೆಕ್, ಒಳಹರಿವು: 4,100 ಕ್ಯೂಸೆಕ್, ಹೊರಹರಿವು : 3,254 ಕ್ಯೂಸೆಕ್..,
ಹೇಮಾವತಿ ಜಲಾಶಯ (ಗೊರೂರು) – ಹಾಸನ ಜಿಲ್ಲೆಯ ಗೊರೂರಿನಲ್ಲಿರುವ ಹೇಮಾವತಿ ಜಲಾಶಯದಲ್ಲಿ ನೀರಿನ ಸಂಗ್ರಹ ಉತ್ತಮವಾಗಿದ್ದು, ಕಳೆದ ವರ್ಷದ ಹೋಲಿಕೆಯಲ್ಲಿ ಸಮತೋಲನ ಕಾಯ್ದುಕೊಂಡಿದೆ. ಗರಿಷ್ಠ ಮಟ್ಟ: 2922.00 ಅಡಿ, ಇಂದಿನ ನೀರಿನ ಮಟ್ಟ: 2904.45 ಅಡಿ (ಕಳೆದ ವರ್ಷ: 2921.00 ಅಡಿ), ಒಟ್ಟು ಸಾಮರ್ಥ್ಯ: 37.103 ಟಿಎಂಸಿ
ಇಂದಿನ ಸಂಗ್ರಹ: 22.685 ಟಿಎಂಸಿ (ಕಳೆದ ವರ್ಷ: 36.137 ಟಿಎಂಸಿ), ಒಳಹರಿವು: 1,399 ಕ್ಯೂಸೆಕ್ (ಕಳೆದ ವರ್ಷ: 6,828 ಕ್ಯೂಸೆಕ್), ಒಟ್ಟು ಹೊರಹರಿವು: 300 ಕ್ಯೂಸೆಕ್ (ಕಳೆದ ವರ್ಷ: 6,765 ಕ್ಯೂಸೆಕ್)..,
ಕೃಷ್ಣಾ ನದಿ ಕೊಳ್ಳದ ಉತ್ತರ ಕರ್ನಾಟಕ ಭಾಗದಲ್ಲಿ ಆಲಮಟ್ಟಿಗೆ ಭಾರಿ ಒಳಹರಿವು ದಾಖಲಾಗಿರುವುದು ರೈತರಲ್ಲಿ ಮತ್ತು ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ. ಇತ್ತ ದಕ್ಷಿಣ ಒಳನಾಡಿನ ಕಾವೇರಿ ಕೊಳ್ಳದ ಜಲಾಶಯಗಳಾದ ಕೆಆರ್‌ಎಸ್, ಕಬಿನಿ ಹಾಗೂ ಹೇಮಾವತಿಯಲ್ಲಿ ಮಲೆನಾಡು ಭಾಗದ ಮಳೆಯನ್ನು ಆಧರಿಸಿ ಮುಂಬರುವ ದಿನಗಳಲ್ಲಿ ಒಳಹರಿವು ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ. ಇದನ್ನೂ ಓದಿ : ಮದ್ಯದಂಗಡಿಗೆ ನುಗ್ಗಿದ ಚಿರತೆ, ಮೂವರ ಮೇಲೆ ಭೀಕರ ದಾಳಿ..!
