August 1, 2026
kranthikidi.com
ತಾಜಾಸುದ್ದಿರಾಜ್ಯ

ಧರ್ಮಸ್ಥಳ ಕೇಸಲ್ಲಿ ಪ್ರಕಾಶ್‌ ರಾಜ್‌ ಹೆಸರು; ಹೆಸರು ಪ್ರಸ್ತಾಪ ಆದ ಕೂಡಲೇ ಕ್ರಿಮಿನಲ್ ಅಲ್ಲ – ಪ್ರಿಯಾಂಕ್‌ ಖರ್ಗೆ

ಬೆಂಗಳೂರು : ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ನಟ ಪ್ರಕಾಶ್‌ ರಾಜ್‌ ಹೆಸರು ತಳುಕು ಹಾಕಿಕೊಂಡಿರುವ ಬಗ್ಗೆ ಗೃಹಸಚಿವ ಪ್ರಿಯಾಂಕ್‌ ಖರ್ಗೆ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೆಸರು ಪ್ರಸ್ತಾಪ ಆದ ಕೂಡಲೇ ಎಲ್ಲರೂ ಕ್ರಿಮಿನಲ್ ಅಲ್ಲ. ಕೋರ್ಟ್ ಎಸ್‌ಐಟಿ ಚೀಫ್‌ಗೆ ಕೇಳಿದೆ, ಅವರು ಉತ್ತರ ಕೊಡಲಿ. ಮಾಧ್ಯಮಗಳಲ್ಲಿ ಚರ್ಚೆ ಮಾಡೋಕೆ ಆಗಲ್ಲ ಎಂದಿದ್ದಾರೆ.

ಮೈಕ್ರೋ ಫೈನಾನ್ಸ್ ಕಾಯ್ದೆ ಧರ್ಮಸ್ಥಳ ಸಂಘ ಪಾಲನೆ ಮಾಡ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಕಾಯ್ದೆ ಇಡೀ ರಾಜ್ಯಕ್ಕೆ ತಂದುರೋದು. ಹೊಸ ಕಾಯ್ದೆ ಬಂದ ಮೇಲೆ ಯಾರು ಉಲ್ಲಂಘನೆ ಮಾಡಿದ್ದಾರೆ ನನಗೆ ಗೊತ್ತಿಲ್ಲ. ಒಂದು ವಾರ, 10 ದಿನಗಳಲ್ಲಿ ಮೀಟಿಂಗ್ ಮಾಡಿ ತಿಳಿಸ್ತೀನಿ. ಧರ್ಮಸ್ಥಳ ಸಂಘಕ್ಕೆ ಮಾತ್ರವಲ್ಲ ಆ ಕಾಯ್ದೆ ಅಲ್ಲ. ಎಲ್ಲರಿಗೂ ಅನ್ವಯ ಆಗುತ್ತದೆ. ಪಾಲನೆ ಮಾಡಬೇಕು. ದೂರು ಏನಿದೆ ಗೊತ್ತಿಲ್ಲ. ತನಿಖೆ ಆಗಬೇಕು. ಅದರ ಬಗ್ಗೆ ಪರಿಶೀಲನೆ ಮಾಡೋಣ ಎಂದಿದ್ದಾರೆ.

ಬೆಂಗಳೂರಿನ ಕಾಡುಗೋಡಿ ಮಗು ಹತ್ಯೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿ, ಕಾಡುಗೋಡಿ ಕೇಸ್ ಬಗ್ಗೆ ನಮ್ಮ ಸಿಬ್ಬಂದಿ ಜೊತೆ ಚರ್ಚೆ ಮಾಡಿದ್ದೇನೆ. ಲೋಪಗಳು ಅಧಿಕಾರಿಗಳಿಂದ ಆಗಿದೆ. ಎಪ್ರಿಲ್ 4 ರಂದು ಮರಣೋತ್ತರ ಪರೀಕ್ಷಾ ವರದಿ ಬಂದ ಕೂಡಲೇ ಅನುಮಾನ ಸಾವು ಅಂತ ತನಿಖೆ ಮಾಡಬೇಕಾಗಿತ್ತು. ಆದರೆ UDR ಮಾಡಿಕೊಂಡು ಎಸ್‌ಐ ಹಂತದಲ್ಲಿ ಇಟ್ಟುಕೊಂಡಿದ್ದರು. ಅದು ತಪ್ಪು ಕಾನೂನು ವಿರುದ್ದ ಇದೆ. ಹೀಗಾಗಿ ಇನ್ಸ್ ಪೆಕ್ಟರ್, ಎಸ್‌ಐ, ರೈಟರ್ ಅನ್ನು ಇಂದು ಬೆಳಗ್ಗೆ ಅಮಾನತು ಮಾಡಲಾಗಿದೆ. ತನಿಖೆಯಲ್ಲಿ ಲೋಪ ಆಗಿದೆ. ಹೀಗಾಗಿ ಅಮಾನತು ಮಾಡಿದ್ದೇವೆ. ಎ1, ಎ2 ಅವರನ್ನು ಬಂಧನ ಮಾಡಲಾಗಿದೆ. ಮುಂದೆ ತನಿಖೆ ಮಾಡಿದ ಬಳಿಕ ಮಾಹಿತಿ ಕೊಡಲಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ : ರಾಜಕೀಯ ಪ್ರವೇಶ, ನಿರ್ಧಾರ ಅಭಿಮಾನಿಗಳ ಕೈಯಲ್ಲಿದೆ; ರಾಘವ್ ಲಾರೆನ್ಸ್

ಬಿಟ್ ಕಾಯಿನ್ ಹಗರಣ ಕೇಸ್‌ಗೆ ಸಂಬಂಧಿಸಿದಂತೆ ಮಾತನಾಡಿ, ಅದು ಜಾರಿ ನಿರ್ದೇಶನಾಲಯದ ವ್ಯಾಪ್ತಿಯಲ್ಲಿದೆ. ಅವರು ಜಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಅದು ನಮ್ಮ ವ್ಯಾಪ್ತಿಗೆ ಬರಲ್ಲ. ನಾವು ಈಗಾಗಲೇ ಕ್ಯಾಬಿನೆಟ್ ಸಬ್ ಕಮಿಟಿ ರಚನೆ ಮಾಡಿದ್ದೇವೆ. ಡಿಕೆಶಿ ಅವರೇ ಅಧ್ಯಕ್ಷ ಇದ್ದರು. ಸಮಿತಿ ಪುನರ್ ರಚನೆ ಮಾಡಬೇಕಾ? ಕ್ರಮ ತೆಗೆದುಕೊಳ್ಳಬೇಕಾ? ಅನ್ನೋದ್ರ ಬಗ್ಗೆ ಸಿಎಂ ತೀರ್ಮಾನ ಮಾಡ್ತಾರೆ ಎಂದು ಹೇಳಿದ್ದಾರೆ.

Related posts

ಸಿಎಂ ಕುರ್ಚಿ ಬಿಡಲು ಸಿದ್ದರಾಮಯ್ಯ ಕೊನೆಗೂ ಒಪ್ಪಿದ್ಯಾಕೆ..?!

Kalpana Editor

ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಬಿಂಬಳಕಾಯಿಯೇ ಸಾಕು..!

Kalpana Editor

ನಾಗಸಂದ್ರ ಮೆಟ್ರೋ ಸ್ಟೇಷನ್‌ನಲ್ಲಿ ಅಗ್ನಿ ಅವಘಡ; ಪ್ರಯಾಣಿಕರು ಸುರಕ್ಷಿತ..!

Kalpana Editor