20.8 C
ಬೆಂಗಳೂರು
September 22, 2026
kranthikidi.com
ಕ್ರೈಂತಾಜಾಸುದ್ದಿರಾಜ್ಯ

ವರ್ತೂರು ಗ್ರೌಂಡ್‌ನಲ್ಲಿ ವ್ಯಕ್ತಿಯ ರುಂಡ ಪತ್ತೆ – ಪೊಲೀಸರಿಂದ ತ್ರೀವ ತನಿಖೆ..!

ಬೆಂಗಳೂರು : ವರ್ತೂರು ಗ್ರೌಂಡ್‌ನಲ್ಲಿ ವ್ಯಕ್ತಿಯ ರುಂಡ ಪತ್ತೆಯಾಗಿದೆ. ದುಷ್ಕರ್ಮಿಗಳು ಕೊಲೆ ಮಾಡಿ ರುಂಡವನ್ನು ಇಲ್ಲಿ ಎಸೆದಿರುವ ಶಂಕೆ ವ್ಯಕ್ತವಾಗಿದೆ. ರುಂಡ ಪತ್ತೆಯಾದ ಸ್ಥಳದ ಪಕ್ಕದಲ್ಲಿ ರೈಲ್ವೇ ಹಳಿ ಇದ್ದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ರುಂಡವನ್ನು ನಾಯಿಗಳು ತಂದಿರಬಹುದು ಎಂದು ಕೆಲವರು ಶಂಕಿಸಿದ್ದಾರೆ. ರುಂಡ ಪತ್ತೆಯಾದ ವ್ಯಕ್ತಿ ಯಾರು ಎಂಬ ಗುರುತು ಪತ್ತೆಯಾಗಿಲ್ಲ.

ಅಲ್ಲದೇ ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಬಗ್ಗೆಯೂ ಸರಿಯಾಗಿ ತಿಳಿದು ಬಂದಿಲ್ಲ. ಸ್ಥಳಕ್ಕೆ ವರ್ತೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎನ್ನಲಾಗಿದೆ. ಇದನ್ನೂ ಓದಿ : ತಮಿಳುನಾಡಿಗೆ ಕಾವೇರಿ ನೀರು; ಮಂಡ್ಯದಲ್ಲಿ ಬೃಹತ್‌ ಹೋರಾಟಕ್ಕೆ ಕರೆಕೊಟ್ಟ ವಿಜಯೇಂದ್ರ

Related posts

ನಾರಾಯಣಪುರ ಡ್ಯಾಂನಿಂದ ನೀರು ಬಿಡುಗಡೆ – ಮೈದುಂಬಿ ಹರಿಯುತ್ತಿರುವ ಕೃಷ್ಣ..

Kalpana Editor

ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಆದೇಶದ ವಿರುದ್ಧ ಮೇಲ್ಮನವಿಗೆ ತೀರ್ಮಾನ; ಸಿಎಂ ಡಿಕೆ ಶಿವಕುಮಾರ್

Kalpana Editor

ಬೆಂಗಳೂರಲ್ಲಿ ಕಸದ ಗಾಡಿಗಳ ಟ್ರ್ಯಾಕ್‌ಗೆ ಹೊಸ ರೂಟ್; ಕೋರಮಂಗಲದಲ್ಲಿ ಪ್ರಾಯೋಗಿಕ ಆ್ಯಪ್‌ಗೆ ಚಾಲನೆ..!

Kalpana Editor