24.4 C
ಬೆಂಗಳೂರು
October 5, 2026
kranthikidi.com
ತಾಜಾಸುದ್ದಿರಾಜ್ಯ

ಎಸ್​ಐಆರ್​​ – ಮನೆ ಮನೆಗೆ ಭೇಟಿ ಕೊಡದೆ, ಫಾರಂ ಇಶ್ಯೂ; ಇದು ಸರಿಯಾದ ಪ್ರಕ್ರಿಯೆ ಅಲ್ಲ..!

ಬೆಂಗಳೂರು : ಯಶವಂತಪುರ ವಿಧಾನಸಭಾ ಕ್ಷೇತ್ರದ ತಾವರೆಕೆರೆಯಲ್ಲಿ ಈ ರೀತಿ ಎಸ್‌ಐಆರ್‌ ಮಾಡುತ್ತಿದ್ದಾರೆ. ಮನೆ ಮನೆಗೆ ಭೇಟಿ ಕೊಡದೆ, ಒಂದು ಜಾಗದಲ್ಲಿ ಕುಳಿತುಕೊಂಡು ಫಾರಂ ಅನ್ನು ಇಶ್ಯೂ ಮಾಡಿ ನಂತರ ಸರ್ವೆ ಕಂಪ್ಲೀಟ್ ಆಗಿದೆ ಎಂದು ಸ್ಟಿಕ್ಕರ್ ಸಹ ಕೊಡುತ್ತಿದ್ದಾರೆ. ಹಾಗೆ ಮತದಾರರ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಯಶವಂತಪುರ ಕ್ಷೇತ್ರದ ಶಾಸಕರ ಫೋಟೋ ಇರುವ ಬುಕ್ಕನ್ನು ಉಪಯೋಗಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಇದು ಸರಿಯಾದ ಪ್ರಕ್ರಿಯೆ ಅಲ್ಲ ದಯಮಾಡಿ ಯಶವಂತಪುರ ಜನತೆ ಹಾಗೂ ಕಾರ್ಯಕರ್ತರುಗಳು ಎಚ್ಚರದಿಂದ ಇರಬೇಕು. ಈ ರೀತಿ ಎಸ್ಐಆರ್ ಮಾಡಿದರೆ, ಅಕ್ರಮ ಮತದಾರರನ್ನು ತಡೆಗಟ್ಟಲು ಆಗುವುದಿಲ್ಲ. ದಯಮಾಡಿ ಪಕ್ಷದ ಅಧ್ಯಕ್ಷರು ಹಾಗೂ ಹೋಬಳಿಯ ಮುಖಂಡರುಗಳು, ಹೋಬಳಿ ಅಧ್ಯಕ್ಷರು, ಕಾರ್ಯಕರ್ತರು ಇದರ ಬಗ್ಗೆ ನಿಗಾವಹಿಸಬೇಕು ಹಾಗೂ ಎಚ್ಚರದಿಂದಿರಬೇಕು. ಇಂಥವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಲಾಗಿದೆ. ಇದನ್ನೂ ಓದಿ : ಮುಸ್ಲಿಂ ಧರ್ಮಗುರುಗಳಿಗೆ ಅವಮಾನ ಆರೋಪ – ಪುನೀತ್ ಕೆರೆಹಳ್ಳಿ ಅರೆಸ್ಟ್‌..!

Related posts

ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ – ಸಭೆಯಲ್ಲಿ ಸಿದ್ದರಾಮಯ್ಯ ಘೋಷಣೆ..!

Kalpana Editor

ಬೆಂಗಳೂರು ಏರ್​ಪೋರ್ಟ್​ನಲ್ಲಿ ಕೋಟಿ ರೂ. ಮೌಲ್ಯದ ಗಾಂಜಾ ಜಪ್ತಿ..!

Kalpana Editor

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಅಧಿಕಾರಿಗಳ ಪರಿಚಯಾತ್ಮಕ ಸಭೆಯಲ್ಲಿ ಕಲುಷಿತ ನೀರು ಸರಬರಾಜಾಗದಂತೆ ಕಟ್ಟೆಚ್ಚರ ವಹಿಸಿ; ಈಶ್ವರ ಖಂಡ್ರೆ

Kalpana Editor