August 1, 2026
kranthikidi.com
ತಾಜಾಸುದ್ದಿದೇಶರಾಜಕೀಯರಾಜ್ಯ

ವಿದ್ಯಾರ್ಥಿಗಳ ನೀಟ್ ಪ್ರತಿಭಟನೆ; ತಡವಾಗಿ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ – ಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು : “ತಿಂಗಳಾದ ಬಳಿಕ ಎಚ್ಚೆತ್ತುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಹಾಗೂ ಕೇಂದ್ರ ಸರ್ಕಾರ ಶಿಕ್ಷಣ ವ್ಯವಸ್ಥೆ ಬಗ್ಗೆ ಚರ್ಚೆ ನಡೆಸಲು ಮುಂದಾಗಿರುವುದು ಆಶಾದಾಯಕ ನಡೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು. ಬೆಂಗಳೂರು ಟೆಕ್ ಸಮ್ಮಿಟ್ ಸಿಇಒಗಳ ಉಪಹಾರ ಸಭೆ ಬಳಿಕ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯಿಸಿದರು.

ಕೇಂದ್ರ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಹಾಗೂ ಶಿಕ್ಷಣದ ವಿಚಾರದ ಚರ್ಚೆಯ ಕುರಿತು ಕೇಳಿದಾಗ, “ಈಗ ಇಡೀ ದೇಶವೇ ಎಚ್ಚೆತ್ತುಕೊಂಡಿದೆ. ನಾವೆಲ್ಲರೂ ಈ ದೇಶದ ವಿದ್ಯಾರ್ಥಿ, ಯುವ ಜನರ ಭವಿಷ್ಯಕ್ಕಾಗಿ ಕೆಲಸ ಮಾಡುತ್ತಿದ್ದೇವೆ” ಎಂದರು.

ಎಲ್ಲರೊಂದಿಗೆ ಮಾತನಾಡಲು ಸಿದ್ಧ – ತಮಿಳುನಾಡು ಸಿಎಂ ಪತ್ರ ಬರೆದಿರುವ ಬಗ್ಗೆ ಕೇಳಿದಾಗ, “ನಾನು ಈಗ ಅದನ್ನು ಬಹಿರಂಗಪಡಿಸಲು ಬಯಸುವುದಿಲ್ಲ. ಈ ವಾರ ಸಚಿವ ಸಂಪುಟ ವಿಸ್ತರಣೆ ಮತ್ತು ಇತರೇ ವಿಷಯಗಳ ಕಾರ್ಯನಿರತವಾಗಿದ್ದೇವೆ. ಕೆಲವು ವಿಚಾರಗಳಲ್ಲಿ ನಾವು ಎಲ್ಲರೊಂದಿಗೆ ಮಾತನಾಡಲು, ಎಲ್ಲರೊಂದಿಗೆ ಹಂಚಿಕೊಳ್ಳಲು, ಎಲ್ಲರೊಂದಿಗೆ ಕೆಲಸ ಮಾಡಲು ಸಿದ್ಧರಿದ್ದೇವೆ” ಎಂದರು. ಇದನ್ನೂ ಓದಿ : ಪ್ರಜ್ವಲ್‌ ರೇವಣ್ಣಗೆ ಪೆರೋಲ್ ನೀಡಲು ಆಗಲ್ಲ – ಕಾರಾಗೃಹ ಇಲಾಖೆ..!

Related posts

ದುಡ್ಡು ಕೊಟ್ರೆ ಸಿಗುತ್ತೆ SSLC, PUC, ಡಿಗ್ರಿ ನಕಲಿ ಅಂಕ ಪಟ್ಟಿ..!

Kalpana Editor

ಬ್ರಾಹ್ಮಿ ಮುಹೂರ್ತದಲ್ಲಿ ʻರಾಮಾಯಣʼ ಟ್ರೈಲರ್ ರಿಲೀಸ್‌ – ರಾವಣನಾಗಿ ಅಬ್ಬರಿಸಿದ ನಟ ಯಶ್‌

Kalpana Editor

ಸೂರ್ಯ, ಚಂದ್ರ ಇರೋವರೆಗೂ ಜಾನಕಿ ಅಮ್ಮ ಶಾಶ್ವತ; ವಿಜಯ ಪ್ರಕಾಶ್‌ ಭಾವುಕ..!

Kalpana Editor