26.4 C
ಬೆಂಗಳೂರು
September 20, 2026
kranthikidi.com
ತಾಜಾಸುದ್ದಿರಾಜ್ಯಸಿನಿಮಾ

ವಿಚ್ಛೇದನ ಅರ್ಜಿ ವಿಚಾರಣೆ ಹಂತದಲ್ಲೇ ‘ಶುಭ’ ಸುದ್ದಿ ಕೇಳಿಬಂತು..!

ನಟಿ ಶುಭಾ ಪೂಂಜಾ ಹಾಗೂ ಪತಿ ಸುಮಂತ್ ಬಿಲ್ಲವ ಅವರ ವೈವಾಹಿಕ ಜೀವನದಲ್ಲಿ ಬಿರುಕು ಉಂಟಾಗಿದ್ದು, ಪರಸ್ಪರ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆಯೂ ನಿಗದಿಯಾಗಿತ್ತು. ಆದರೆ ದಂಪತಿ ವಿಚಾರಣೆಗೆ ಗೈರಾಗಿದ್ದರು.

ಶುಭಾ ಮತ್ತು ಸುಮಂತ್ 2022ರ ಜನವರಿ ತಿಂಗಳಲ್ಲಿ ಮದುವೆಯಾಗಿದ್ದರು. ಮೇಲ್ನೋಟಕ್ಕೆ ಇಬ್ಬರ ನಡುವಿನ ಸಂಬಂಧ ಉತ್ತಮವಾಗಿಯೇ ಇತ್ತು. ಆದರೆ ಕಳೆದ ಗುರುವಾರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಗಲೇ ಅವರ ನಡುವಿನ ಬಿರುಕು ಬಹಿರಂಗವಾಗಿತ್ತು. ಪರಸ್ಪರ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದ, ದಂಪತಿ ವಿಚಾರಣೆಗೆ ಗೈರಾಗಿರುವುದು ಹಾಗೂ ಆಪ್ತರ ಅಭಿಪ್ರಾಯಗಳ ಆಧಾರದ ಮೇಲೆ, ಇದೀಗ ಇಬ್ಬರೂ ದೂರಾಗುವ ಮನಸ್ಸು ಬದಲಿಸಿಕೊಂಡಿದ್ದಾರಾ ಎಂಬ ಅನುಮಾನ ಮೂಡಿದೆ. ಇದನ್ನೂ ಓದಿ : ಐರ್ಲೆಂಡ್, ಇಂಗ್ಲೆಂಡ್ ಟಿ20 ಸರಣಿ; ಸಿರಾಜ್ ಬದಲಿಗೆ ಕನ್ನಡಿಗ ಪ್ರಸಿದ್ಧ್ ಕೃಷ್ಣ ಆಯ್ಕೆ..!

ನಾಲ್ಕು ವರ್ಷಗಳ ಕಾಲ ಅನ್ಯೋನ್ಯವಾಗಿದ್ದ, ಶುಭಾ-ಸುಮಂತ್ ದಂಪತಿ ಏಕಾಏಕಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಆಪ್ತರಿಗೂ ಅಚ್ಚರಿ ಮೂಡಿಸಿತ್ತು. ಆದರೆ ಇದೀಗ ಇಬ್ಬರೂ ತಮ್ಮ ನಡುವಿನ ಮನಸ್ತಾಪವನ್ನು ಬಗೆಹರಿಸಿಕೊಂಡು ಮತ್ತೆ ಒಂದಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಶೀಘ್ರದಲ್ಲೇ ಇಬ್ಬರೂ ಮತ್ತೆ ಒಂದಾಗಿ ‘ಶುಭ’ ಸಂದೇಶ ನೀಡುವ ಸಾಧ್ಯತೆಯಿದೆ.

Related posts

ಮಾರುವೇಷ ಧರಿಸಿ, ಬಸ್‌ಗಳಲ್ಲಿ ಸಚಿವ ಬೈರತಿ ಸುರೇಶ್‌ ಚೆಕ್ಕಿಂಗ್‌..!

Kalpana Editor

ಬೀದರ್ ಪೊಲೀಸರಿಂದ ಕೋಟಿ ಮೌಲ್ಯದ ಮಾದಕ ವಸ್ತು ನಾಶ..!

Kalpana Editor

ಸಂಡೂರು ರಾಜವಂಶಸ್ಥ ಕಾರ್ತಿಕೇಯ ಘೋರ್ಪಡೆ ನಿಧನ..!

Kalpana Editor