kranthikidi.com
ಆರೋಗ್ಯ

ಔಷಧಿ ತೆಗೆದುಕೊಳ್ಳುವಾಗ ಈ ತಪ್ಪುಗಳು ಆರೋಗ್ಯಕ್ಕೆ ಅಪಾಯಕಾರಿ…

ಅನಾರೋಗ್ಯ ಬಂದಾಗ ಔಷಧಿ ನಮ್ಮ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಔಷಧಿ ಸೇವಿಸುವ ವಿಧಾನದಲ್ಲಿ ಮಾಡುವ ಕೆಲವು ಸಾಮಾನ್ಯ ತಪ್ಪುಗಳು ಆರೋಗ್ಯಕ್ಕೆ ಹಾನಿ ಉಂಟುಮಾಡಬಹುದು. ವಿಶೇಷವಾಗಿ ಸ್ವಯಂ ಔಷಧಿ ಸೇವನೆ, ಡೋಸ್ ಮಧ್ಯದಲ್ಲಿ ನಿಲ್ಲಿಸುವುದು ಮತ್ತು ವೈದ್ಯರ ಸಲಹೆ ಇಲ್ಲದೆ ಔಷಧಿ ಬದಲಾಯಿಸುವುದು ದೊಡ್ಡ ಅಪಾಯಕ್ಕೆ ಕಾರಣವಾಗಬಹುದು.

ಇದನ್ನು ನಾವು ಸಾಮಾನ್ಯ ಎಂದು ನಿರ್ಲಕ್ಷ್ಯ ಮಾಡುತ್ತೇವೆ. ಇದು ನಮ್ಮ ಆರೋಗ್ಯಕ್ಕೆ ಅಪಾಯಕಾರಿಯಾಗಬಹುದು. ಮೂಲಗಳ ಪ್ರಕಾರ, ಆಂಟಿಬಯೋಟಿಕ್ ಔಷಧಿಗಳನ್ನು ಸರಿಯಾಗಿ ಬಳಸದಿರುವುದರಿಂದ ಮುಂದಿನ ದಿನಗಳಲ್ಲಿ ಅವು ಪರಿಣಾಮಕಾರಿಯಾಗದೇ ಹೋಗುವ ಸಾಧ್ಯತೆಯಿದೆ. ಇದನ್ನೇ “ಸೂಪರ್‌ಬಗ್” ಪರಿಸ್ಥಿತಿ ಎಂದು ಕರೆಯಲಾಗುತ್ತದೆ. ಹಾಗಾದರೆ ಔಷಧಿ ಸೇವನೆ ಮಾಡುವಾಗ ಯಾವ ತಪ್ಪುಗಳನ್ನು ಮಾಡಬಾರದು.

ವೈದ್ಯರ ಸಲಹೆ ಇಲ್ಲದೆ ಔಷಧಿ ಸೇವನೆ – ಜ್ವರ, ಶೀತ ಅಥವಾ ಕೆಮ್ಮು ಬಂದಾಗ ಹಲವರು ತಮ್ಮ ಇಷ್ಟಕ್ಕೆ ತಾವೇ ಔಷಧಿ ತೆಗೆದುಕೊಳ್ಳುತ್ತಾರೆ. ವಿಶೇಷವಾಗಿ ಮಕ್ಕಳಲ್ಲಿ ಈ ತಪ್ಪು ಹೆಚ್ಚಾಗಿ ಕಂಡುಬರುತ್ತದೆ. ಇದು ದೇಹದ ಮೇಲೆ ದುಷ್ಪರಿಣಾಮ ಉಂಟುಮಾಡಬಹುದು.

ಔಷಧಿ ಕೋರ್ಸ್ ಪೂರ್ಣಗೊಳಿಸದೇ ನಿಲ್ಲಿಸುವುದು – ಸ್ವಲ್ಪ ಆರೋಗ್ಯ ಸುಧಾರಿಸಿದ ತಕ್ಷಣ ಕೆಲವರು ಆಂಟಿಬಯೋಟಿಕ್ ಸೇವನೆ ನಿಲ್ಲಿಸುತ್ತಾರೆ. ಇದರಿಂದ ಸೋಂಕು ಸಂಪೂರ್ಣವಾಗಿ ಹೋಗದೆ ಮತ್ತೆ ತೀವ್ರವಾಗುವ ಸಾಧ್ಯತೆ ಹೆಚ್ಚುತ್ತದೆ.

ಸಮಯಕ್ಕೆ ಸರಿಯಾಗಿ ಔಷಧಿ ಸೇವಿಸದಿರುವುದು – ಕೆಲವರು ಖಾಲಿ ಹೊಟ್ಟೆಯಲ್ಲಿ ಔಷಧಿ ತೆಗೆದುಕೊಳ್ಳುತ್ತಾರೆ ಅಥವಾ ಸಮಯ ತಪ್ಪಿಸುತ್ತಾರೆ. ಜೊತೆಗೆ ಎಕ್ಸ್‌ಪೈರಿ ಡೇಟ್ ಪರಿಶೀಲಿಸದೇ ಔಷಧಿ ಸೇವಿಸುವುದು ಕೂಡ ಅಪಾಯಕಾರಿಯಾಗಿದೆ.

ಪೇನ್‌ಕಿಲ್ಲರ್‌ಗಳ ಅತಿಯಾದ ಬಳಕೆ ಕೂಡ ಅಪಾಯಕಾರಿ – ನೋವು ನಿವಾರಕ ಔಷಧಿಗಳನ್ನು ಹೆಚ್ಚು ಸೇವಿಸುವುದರಿಂದ ಕಿಡ್ನಿ ಮತ್ತು ಲಿವರ್ ಮೇಲೆ ಹಾನಿ ಉಂಟಾಗಬಹುದು. ಇದರಿಂದ ಸಣ್ಣ ವಯಸ್ಸಿನಲ್ಲೇ ಕಿಡ್ನಿ ಹಾಗೂ ಲಿವರ್ ಸಮಸ್ಯೆಗಳು ಕಾಣಿಸಿಕೊಳ್ಳುವ ಅಪಾಯ ಇದೆ.

ಜನರಿಕ್ ಮತ್ತು ಬ್ರಾಂಡೆಡ್ ಔಷಧಿಗಿರುವ ವ್ಯತ್ಯಾಸ ಏನು? – ಜನರಿಕ್ ಮತ್ತು ಬ್ರಾಂಡೆಡ್ ಔಷಧಿಗಳಲ್ಲಿರುವ ‘ಸಾಲ್ಟ್’ ಒಂದೇ ಆಗಿರುತ್ತದೆ. ವ್ಯತ್ಯಾಸ ಕಂಪನಿ ಮತ್ತು ಬೆಲೆಯಲ್ಲಿ ಮಾತ್ರ. ವೈದ್ಯರ ಸಲಹೆಯೊಂದಿಗೆ ಸರಿಯಾದ ಔಷಧಿ ಬಳಸಿದರೆ ಜನರಿಕ್ ಮೆಡಿಸಿನ್ ಕೂಡ ಪರಿಣಾಮಕಾರಿಯಾಗಬಹುದು.

Related posts

ಕ್ಯಾಲ್ಸಿಯಂ ಕೊರತೆಯಿಂದ ಯಾವ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು..!

Kalpana Editor

ಫ್ಯಾಟಿ ಲಿವರ್ ಅನ್ನು ಮತ್ತೆ ಸಾಮಾನ್ಯ ಸ್ಥಿತಿಗೆ ತರಬಹುದೇ..?

Kalpana Editor

ಪಿತ್ತಕೋಶದಲ್ಲಿ ಕಲ್ಲು ಕಂಡುಬರುವುದಕ್ಕೆ ಕಾರಣವೇನು ಗೊತ್ತಾ..!?

Kalpana Editor