20.8 C
ಬೆಂಗಳೂರು
September 22, 2026
kranthikidi.com
ಕ್ರೈಂತಾಜಾಸುದ್ದಿರಾಜ್ಯ

ಗನ್‌, ಲಾಂಗ್‌ ತೋರಿಸಿ ಬೆದರಿಕೆ – ಟೋಲ್‌ನಲ್ಲಿ ಸುಂಕ ಕಟ್ಟದೆ ಕಾರು ಗುದ್ದಿಸಿಕೊಂಡು ಹೋದ ಪುಂಡರು..!

ಹಾಸನ : ಆಲೂರಿನ ಚೌಲಗೆರೆ ಟೋಲ್‌ನಲ್ಲಿ ಹಣ ಕೇಳಿದ್ದಕ್ಕೆ ಪುಂಡರ ಗ್ಯಾಂಗ್‌ ಸಿಬ್ಬಂದಿಗೆ ಗನ್, ಲಾಂಗ್ ತೋರಿಸಿ ಬೇದರಿಕೆ ಹಾಕಿದ ಘಟನೆ ನಡೆದಿದೆ. ಮಾರುತಿ 800 ಕಾರಿನಲ್ಲಿ ಐವರು ಪ್ರಯಾಣಿಸುತ್ತಿದ್ದರು. ಟೋಲ್‌ನಲ್ಲಿ ಅವರ ಬಳಿ ಸಿಬ್ಬಂದಿ ಸುಂಕ ಕೇಳಿದ್ದಾರೆ. ಈ ವೇಳೆ ಕಾರಿನಿಂದ ಇಳಿದ ಪುಂಡರು, ಸುಂಕ ಕಟ್ಟುವುದಿಲ್ಲ ಎಂದು ಗಲಾಟೆ ಮಾಡಿದ್ದಾರೆ.

ಅಲ್ಲದೇ ಬ್ಯಾರಿಯರ್‌ ತೆಗೆಯುವಂತೆ ಅವಾಚ್ಯ ಶಬ್ದಗಳಿಂದ ಟೋಲ್ ಸಿಬ್ಬಂದಿಗೆ ನಿಂದಿಸಿ, ಗನ್‌ ಹಾಗೂ ಲಾಂಗ್‌ ತೋರಿಸಿ ಬೆದರಿಸಿದ್ದಾರೆ. ಬಳಿಕ ಟೋಲ್ ಹಣ ನೀಡದೆ ಬ್ಯಾರಿಯರ್‌ಗೆ ಕಾರು ಗುದ್ದಿಕೊಂಡು ಪುಂಡರ ಗ್ಯಾಂಗ್‌ ತೆರಳಿದೆ.

ಈ ಸ್ಥಳಕ್ಕೆ ಆಲೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪುಂಡರ ಗುರುತು ಇನ್ನೂ ಪತ್ತೆಯಾಗಿಲ್ಲ. ಗನ್ ನಕಲಿಯ ಅಥವಾ ಅಸಲಿಯ ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದನ್ನೂ ಓದಿ : ಗನ್‌, ಲಾಂಗ್‌ ತೋರಿಸಿ ಬೆದರಿಕೆ – ಟೋಲ್‌ನಲ್ಲಿ ಸುಂಕ ಕಟ್ಟದೆ ಕಾರು ಗುದ್ದಿಸಿಕೊಂಡು ಹೋದ ಪುಂಡರು..!

Related posts

‘ಕುಂಕುಮ ಭಾಗ್ಯ’ ಹಿಂದಿ ನಟಿ ಸಂಚಿತಾ ಉಗಲೆ ನೇಣಿಗೆ ಶರಣು

Kalpana Editor

ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣ; ತನಿಖಾ ವರದಿ ಸಲ್ಲಿಸುವಂತೆ ಸುಪ್ರೀಂ ಆದೇಶ..!

Kalpana Editor

ಪರ್ಯಾಯ SIR​ಗೆ ಆದೇಶಿಸಿದ್ದ ಚುನಾವಣಾ ಆಯೋಗಕ್ಕೆ ಹೈಕೋರ್ಟ್​ ನೋಟಿಸ್..!

Kalpana Editor