August 1, 2026
kranthikidi.com
ತಾಜಾಸುದ್ದಿರಾಜ್ಯಸಿನಿಮಾ

ನಾನು ರಾಜಕಾರಣಕ್ಕೆ ಮರಳಲು ಕಾಲ ಕೂಡಿಬರಬೇಕು – ನಟಿ ರಮ್ಯಾ

ಬೆಂಗಳೂರು : ನಾನು ರಾಜಕಾರಣಕ್ಕೆ ಮರಳಲು ಕಾಲ ಕೂಡಿಬರಬೇಕು ಎಂದು ನಟಿ ರಮ್ಯಾ ತಿಳಿಸಿದ್ದಾರೆ. ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಅವರು ಇಂದು ಗದ್ದುಗೆಗೇರಲಿದ್ದಾರೆ.

ಅವರ ಜೊತೆಗೆ ಒಟ್ಟು 13 ಮಂದಿ ಶಾಸಕರು ಸಚಿವರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ. ಈ ಸಮಾರಂಭಕ್ಕೆ ಗಣ್ಯರು, ಸೆಲಬ್ರಿಟಿಗಳ ದಂಡೇ ಆಗಮಿಸಿದೆ. ನಟಿ ರಮ್ಯಾ ಕೂಡ ಡಿಕೆ ಶಿವಕುಮಾರ್‌ ಅವರ ಪ್ರಮಾಣ ಸ್ವೀಕಾರ ಸಮಾರಂಭಕ್ಕೆ ಆಗಮಿಸಿದ್ದಾರೆ. ಈ ವೇಳೆ ತಮ್ಮ ಮುಂದಿನ ರಾಜಕೀಯ ನಡೆ ಕುರಿತು ಮಾತನಾಡಿದ್ದಾರೆ. ಇದನ್ನೂ ಓದಿ : ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ಯು.ಟಿ.ಖಾದರ್ ರಾಜೀನಾಮೆ..!

ನಾನೀಗ ಬಂದಿರೋದು ಡಿಕೆ ಶಿವಕುಮಾರ್‌ ಅವರ ಫ್ಯಾಮಿಲಿಗೋಸ್ಕರ. ಇಷ್ಟು ವರ್ಷ ಕಷ್ಟಪಟ್ಟಿರುವುದರ ಫಲ ಅವರಿಗೆ ಸಿಕ್ಕಿದೆ. ಅದನ್ನ ನೋಡಿ ಸೆಲಬ್ರೇಟ್‌ ಮಾಡೋಕೆ ಬಂದಿದ್ದೇನೆ. ನಾನು ರಾಜಕಾರಣಕ್ಕೆ ಮರಳಲು ಕಾಲ ಕೂಡಿಬರಬೇಕು. ಎಲ್ಲದಕ್ಕೂ ಸಮಯ ಬೇಕಲ್ಲ ಅಂದಿದ್ದಾರೆ.

ಡಿಕೆಶಿ ಪದಗ್ರಹಣ ವಿಚಾರ ಕುರಿತು ಮಾತನಾಡಿ, ಡಿಕೆ ಶಿವಕುಮಾರ್‌ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕಾರ ಮಾಡ್ತಿರೋದು ಖುಷಿ ಆಗ್ತಿದೆ. ಬಹಳ ವರ್ಷದಿಂದ ಅವರು ಪಟ್ಟ ಕಷ್ಟಕ್ಕೆ ಫಲ ಸಿಕ್ಕಿದೆ ಎಂದು ಶ್ಲಾಘಿಸಿದ್ದಾರೆ.

Related posts

ಜಿನೆವಾದಲ್ಲಿ ಅಮೆರಿಕ-ಇರಾನ್‌ ಶಾಂತಿ ಮಾತುಕತೆ; ಮುನೀರ್‌ ಹತ್ಯೆಗೆ ಇಸ್ರೇಲ್‌ ಸಂಚು..!

Kalpana Editor

ಪ್ರಶ್ನೆಪತ್ರಿಕೆ ಸೋರಿಕೆಗೆ ಕಠಿಣ ಕಾಯ್ದೆ; 10 ವರ್ಷ ಜೈಲು, 1 ಕೋಟಿ ದಂಡಕ್ಕೆ ಕೇಂದ್ರ ಸಿದ್ಧತೆ..!

Kalpana Editor

ಪಿಡಿಓ, ಕಾರ್ಯದರ್ಶಿ, ಲೆಕ್ಕ ಸಹಾಯಕರ ಕೌನ್ಸೆಲಿಂಗ್‌ಗೆ ಈಶ್ವರ ಖಂಡ್ರೆ ಚಾಲನೆ..!

Kalpana Editor