ಇಂಡಿಯನ್ ಪ್ರೀಮಿಯರ್ ಲೀಗ್ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಧರ್ಮಶಾಲಾದ ಹೆಚ್ಪಿಸಿಎ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ತಂಡವು 20 ಓವರ್‌ಗಳಲ್ಲಿ 254 ರನ್ ಕಲೆಹಾಕಿದ್ದರು.
ಅದರಂತೆ 255 ರನ್‌ಗಳ ಗುರಿ ಬೆನ್ನತ್ತಲು ಬಂದ ಗುಜರಾತ್ ಟೈಟಾನ್ಸ್ ಬ್ಯಾಟರ್ಗಳನ್ನು ನೋಡಿ ವಿರಾಟ್ ಕೊಹ್ಲಿ ಚೆಂಡನ್ನು ಕೈಗೆತ್ತಿ ಕೊಂಡಿದ್ದಾರೆ. ಅಷ್ಟೇ ಅಲ್ಲದೆ ಅಂಪೈರ್ಗೆ ಕ್ಯಾಪ್ ನೀಡಿ ಮೊದಲ ಓವರ್ ನಾನೇ ಎಸೆಯುತ್ತಿದ್ದೇನೆ ಎಂದು ಹೆಜ್ಜೆಗಳನ್ನು ಅಳೆಯುತ್ತಾ ಸಾಗಿದರು. ಇದನ್ನು ನೋಡಿದ ತಕ್ಷಣ ಇಡೀ ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳಿಗೆ ಮತ್ತು ಕಾಮೆಂಟೇಟರ್‌ಗಳಿಗೆ ಶಾಕ್. ಏಕೆಂದರೆ ವಿರಾಟ್ ಕೊಹ್ಲಿ ಈ ಹಿಂದೆ ಓವರ್ ಎಸೆದಾಗ ಏನಾಗಿತ್ತು ಎಂಬುದು ಎಲ್ಲರಿಗೂ ಚೆನ್ನಾಗಿ ನೆನಪಿದೆ.
2012 ರ ಐಪಿಎಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 205 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಗುರಿ ಬೆನ್ನಟ್ಟಿದ ಸಿಎಸ್‌ಕೆಗೆ ಕೊನೆಯ 2 ಓವರ್‌ಗಳಲ್ಲಿ ಗೆಲ್ಲಲು 43 ರನ್‌ಗಳ ಅಗತ್ಯವಿತ್ತು. ಈ ವೇಳೆ ದಾಳಿಗಿಳಿದ ವಿರಾಟ್ ಕೊಹ್ಲಿ ಒಂದೇ ಓವರ್‌ನಲ್ಲಿ ಬರೋಬ್ಬರಿ 28 ರನ್ ನೀಡಿದ್ದರು. ಅಂದು ಸಿಎಸ್ಕೆ ತಂಡದ ಆಟಗಾರ ಅಲ್ಬಿ ಮೊರ್ಕೆಲ್, ಕೊಹ್ಲಿ ಎಸೆದ ಆ 19ನೇ ಓವರ್‌ನಲ್ಲಿ 3 ಭರ್ಜರಿ ಸಿಕ್ಸರ್ ಹಾಗೂ 2 ಫೋರ್ಗಳನ್ನು ಚಚ್ಚಿದ್ದರು. ಪರಿಣಾಮ ಆ ಮ್ಯಾಚ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲನುಭವಿಸಿತ್ತು,
ಇದಾದ ಬಳಿಕ ಬೌಲಿಂಗ್ನಿಂದ ದೂರವೇ ಉಳಿದಿದ್ದ ವಿರಾಟ್ ಕೊಹ್ಲಿ ಇದಕ್ಕಿದ್ದಂತೆ ಚೆಂಡೆದು ಹಿಡಿದು ಎಲ್ಲರಿಗೂ ಶಾಕ್ ನೀಡಿದರು. ಆದರೆ ಕೆಲವೇ ಕ್ಷಣಗಳಲ್ಲಿ ಜೇಕಬ್ ಡಫಿಗೆ ಚೆಂಡನ್ನು ಹಸ್ತಾಂತರಿಸಿ ಎಲ್ಲರ ಗೊಂದಲ್ಕೆ ತೆರೆ ಎಳೆದರು. ಇದೀಗ ವಿರಾಟ್ ಕೊಹ್ಲಿ ಈ ಕೀಟಲೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್‌ಗಳಲ್ಲಿ 254 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡ 19.3 ಓವರ್‌ಗಳಲ್ಲಿ 162 ರನ್ಗಳಿಗೆ ಆಲೌಟ್ ಆಗಿದ್ದಾರೆ. ಈ ಮೂಲಕ ಆರ್‌ಸಿಬಿ ತಂಡ 92 ರನ್‌ಗಳ ಭರ್ಜರಿ ಜಯ ಸಾಧಿಸಿದೆ.
