29 C
ಬೆಂಗಳೂರು
September 20, 2026
kranthikidi.com
ತಾಜಾಸುದ್ದಿರಾಜ್ಯ

ನಾರಾಯಣಪುರ ಡ್ಯಾಮ್‌ನಿಂದ ನೀರು ಬಿಡುಗಡೆ; ಗಡ್ಡೆಗೂಳಿ ಬಸವೇಶ್ವರ ದೇವಾಲಯ ಮುಳುಗಡೆ..!

ರಾಯಚೂರು : ನಾರಾಯಣಪುರ ಜಲಾಶಯದಿಂದ 1.40 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಇದರಿಂದ ಕೃಷ್ಣಾ ನದಿ ಮೈದುಂಬಿ ಹರಿಯುತ್ತಿದ್ದು, ದೇವದುರ್ಗದ ಹೂವಿನಹಡಗಲಿ ಗಡ್ಡೆಗೂಳಿ ಬಸವೇಶ್ವರ ದೇವಾಲಯ ಮುಳುಗಡೆಯಾಗಿದೆ.

ಮಹಾರಾಷ್ಟ್ರದಲ್ಲಿ ಭಾರೀ ಮಳೆಯ ಪರಿಣಾಮ ಕೊಯ್ನಾ ಜಲಾಶಯಕ್ಕೆ ಅಪಾರ ಪ್ರಮಾಣದ ಒಳಹರಿವು ಬರುತ್ತಿದೆ. ಇದರಿಂದಾಗಿ ಭಾರೀ ಪ್ರಮಾಣದ ನೀರನ್ನು ನದಿಗೆ ಬಿಡುಗಡೆ ಮಾಡಲಾಗಿದ್ದು, ನಾರಾಯಣಪುರ ಜಲಾಶಯದ ಒಳಹರಿವು ಹೆಚ್ಚಳವಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಜಲಾಶಯದಿಂದ 1.40 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.

ಡ್ಯಾಮ್‌ನಿಂದ ನೀರು ಬಿಡುಗಡೆ ಮಾಡಿ ಲಿಂಗಸುಗೂರಿನ ಶೀಲಹಳ್ಳಿ ಸೇತುವೆ, ದೇವದುರ್ಗದ ಹೂವಿನಹಡಗಲಿ ಸೇತುವೆಗಳು ಮುಳುಗಡೆ ಹಂತದಲ್ಲಿವೆ. ಈಗಾಗಲೇ ಕಾಡ್ಲೂರಿನ ಉಪೇಂದ್ರ ಕರಾರ್ಚಿತ ಪ್ರಾಣದೇವರ ದೇವಾಲಯ ಸಂಪೂರ್ಣ ಜಲಾವೃತವಾಗಿದೆ. ಇದನ್ನೂ ಓದಿ : ಹೃದಯ ಆರೋಗ್ಯವಾಗಿರಲು ಪ್ರತಿದಿನ ಪಾಲಿಸಬೇಕಾದ ಅಭ್ಯಾಸಗಳು..!

Related posts

ಸರ್ಜರಿ ಮಾಡಿಸಿಕೊಳ್ಳುವಾಗ ಹಾಡು ಹಾಡಿದ ಗಾಯಕ ಸೋನು ನಿಗಮ್

kknewskannada1987@gmail.com

ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ರಾ ಜಮೀರ್ – ಆಡಿಯೋ ಸಂಚಲನ..!

Kalpana Editor

‘ಟಾಕ್ಸಿಕ್’ ಸಿನಿಮಾದ ಟ್ರೇಲರ್ ಲಾಂಚ್​ಗೆ ಬಂದ್ರು ಲೇಡೀಸ್  ಆ್ಯಂಡ್ ಲೇಡೀಸ್

kknewskannada1987@gmail.com