August 25, 2026
kranthikidi.com
ತಾಜಾಸುದ್ದಿಸಿನಿಮಾ

ಸರ್ಜರಿ ಮಾಡಿಸಿಕೊಳ್ಳುವಾಗ ಹಾಡು ಹಾಡಿದ ಗಾಯಕ ಸೋನು ನಿಗಮ್

ಪ್ರಸಿದ್ಧ ಗಾಯಕ ಸೋನು ನಿಗಮ್ ತಮ್ಮ ಮಧುರ ಕಂಠದಿಂದ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದವರು. ಆದರೆ ಇತ್ತೀಚೆಗೆ ಅವರು ಹಂಚಿಕೊಂಡ ವೀಡಿಯೊವೊಂದು ಅಭಿಮಾನಿಗಳಲ್ಲಿ ಅಚ್ಚರಿ ಮತ್ತು ಆತಂಕವನ್ನು ಒಟ್ಟಿಗೆ ಮೂಡಿಸಿದೆ. ಸ್ವತಃ ಸೋನು ನಿಗಮ್ ಅವರೇ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವಾಗ ಆಪರೇಷನ್ ಟೇಬಲ್ ಮೇಲೆ ಮಲಗಿಕೊಂಡೇ ಹಾಡು ಹಾಡುತ್ತಿರುವ ವೀಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸೋನು ನಿಗಮ್ ಅವರು ದಿವಂಗತ ಹಿರಿಯ ಗಾಯಕ ಮೊಹಮ್ಮದ್ ರಫಿ ಅವರ ‘ದುಲಾರಿ’ (1949) ಸಿನಿಮಾದ ‘ಸುಹಾನಿ ರಾತ್ ಧಲ್ ಚುಕಿ’ ಹಾಡನ್ನು ಅತ್ಯಂತ ಸುಶ್ರಾವ್ಯವಾಗಿ ಹಾಡಿದ್ದಾರೆ. ಈ ವೀಡಿಯೊ ವೈರಲ್ ಆಗುತ್ತಿದ್ದಂತೆ, ಅವರಿಗೆ ಏನಾಯಿತು ಎಂದು ಅಭಿಮಾನಿಗಳು ಕಳವಳ ವ್ಯಕ್ತಪಡಿಸಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಸೋನು ನಿಗಮ್, ತಮ್ಮ ಎಡಗೈ ಉಂಗುರದ ಬೆರಳಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ.

ಶಸ್ತ್ರಚಿಕಿತ್ಸೆ ಮಾಡುವಾಗ ಹಾಡು ಹಾಡಿದ್ದೇಕೆ ಎಂಬುದನ್ನು ವಿವರಿಸಿದ ಅವರು, ‘ಇದು ತಾನಾಗಿಯೇ ನಡೆಯಿತು. ನನಗೆ ಶಸ್ತ್ರಚಿಕಿತ್ಸೆ ಮಾಡುತ್ತಿದ್ದ ಡಾ. ನೀಲೇಶ್ ಸತ್ಭಾಯಿ ಅವರು ನನ್ನ ಅಭಿಮಾನಿಯಾಗಿದ್ದು, ಆಪರೇಷನ್ ವೇಳೆ ನನ್ನ ಹಾಡುಗಳನ್ನೇ ಪ್ಲೇ ಮಾಡುತ್ತಿದ್ದರು. ಈ ವೇಳೆ ಮೊಹಮ್ಮದ್ ರಫಿ ಅವರ ಹಾಡುಗಳ ಮ್ಯೂಸಿಕ್ ಮಾತ್ರ ಬಂದು, ಗಾಯನವಿಲ್ಲದ ಟ್ರ್ಯಾಕ್ ಪ್ಲೇ ಆಯಿತು. ಅದನ್ನು ಕೇಳಿ ನಾನೇ ಸ್ವತಃ ಹಾಡಲು ಪ್ರಾರಂಭಿಸಿದೆ’ ಎಂದಿದ್ದಾರೆ.

ರೋಗಿಯೊಬ್ಬರು ಸರ್ಜರಿ ವೇಳೆಯಲ್ಲೇ ಹೀಗೆ ಹಾಡುತ್ತಿರುವುದನ್ನು ಕಂಡು ವೈದ್ಯರ ತಂಡ ಕೂಡ ಸಂತಸ ವ್ಯಕ್ತಪಡಿಸಿತಂತೆ. ವೈದ್ಯರಿಗಾಗಿ ಸುಮಾರು 2-3 ಹಾಡುಗಳನ್ನು ಹಾಡಿದ ಸೋನು ನಿಗಮ್, ಈ ಅಪರೂಪದ ಕ್ಷಣವನ್ನು ನೆನಪಿಗಾಗಿ ರೆಕಾರ್ಡ್ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದರು. ವೈದ್ಯರು ರೆಕಾರ್ಡ್ ಮಾಡಿ ಕಳುಹಿಸಿದ ನಂತರವೇ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವುದಾಗಿ ಹೇಳಿದ್ದಾರೆ.

ಇದೇ ಸಮಸ್ಯೆಗೆ ನಾಲ್ಕು ತಿಂಗಳ ಹಿಂದೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರೂ, ಮತ್ತೆ ಇದು ಮರುಕಳಿಸಿದೆ ಎಂದು ಸೋನು ನಿಗಮ್ ಹೇಳಿದ್ದಾರೆ. ‘ಇದು ಬಹುಶಃ ನನ್ನ ಮೂಳೆಗಳಲ್ಲಿರುವ ಸಂಧಿವಾತ ಸಮಸ್ಯೆಗೆ ಸಂಬಂಧಿಸಿದ್ದಿರಬಹುದು. ಪ್ರಸ್ತುತ ಚಿಕಿತ್ಸೆ ಮುಗಿದಿದ್ದು, ಮುಂದಿನ ಹಂತದ ಬಗ್ಗೆ ಕಾದು ನೋಡಬೇಕಿದೆ’ ಎಂದು ತಮ್ಮ ಆರೋಗ್ಯದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ : ಉತ್ತರ ಕರ್ನಾಟಕದ ಜೀವನಾಡಿ ಆಲಮಟ್ಟಿ ಜಲಾಶಯ ಸಂಪೂರ್ಣ ಭರ್ತಿ

Related posts

ಬೈಕ್ ತಡೆದಿದ್ದಕ್ಕೆ ಪೊಲೀಸ್ ಕಾನ್‌ಸ್ಟೆಬಲ್ ತಲೆಗೆ ಹೊಡೆದು ಪರಾರಿ..!

Kalpana Editor

ತಪ್ಪು ತಿಳುವಳಿಕೆಯಿಂದ ವಿಡಿಯೋ ಮಾಡಿದ್ದೇವೆ; ಕ್ಷಮೆ ಕೇಳಿದ ನಿವೇದಿತಾ ಗೌಡ

Kalpana Editor

ಧ್ವಜಾರೋಹಣಕ್ಕೆ ವಿನಾಯಿತಿ ಕೋರಿ ಸಿಎಂಗೆ ಸಚಿವ ಜಮೀರ್ ಪತ್ರ

kknewskannada1987@gmail.com