22 C
ಬೆಂಗಳೂರು
October 8, 2026
kranthikidi.com
ತಾಜಾಸುದ್ದಿರಾಜ್ಯ

ಉತ್ತರ ಕರ್ನಾಟಕದ ಜೀವನಾಡಿ ಆಲಮಟ್ಟಿ ಜಲಾಶಯ ಸಂಪೂರ್ಣ ಭರ್ತಿ

ವಿಜಯಪುರ : ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಉತ್ತಮ ಮಳೆಯಾದ ಹಿನ್ನೆಲೆ ಉತ್ತರ ಕರ್ನಾಟಕದ ಜೀವನದಿ ಕೃಷ್ಣೆಯ ಒಡಲು ತುಂಬಿದ್ದು, ಆಲಮಟ್ಟಿ ಜಲಾಶಯ ಸಂಪೂರ್ಣ ಭರ್ತಿಯಾಗಿದೆ.

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿರುವ ಲಾಲ್‌ಬಹದ್ದೂರ್‌ ಶಾಸ್ತ್ರೀ ಜಲಾಶಯ ಒಟ್ಟು 519.60 ಮೀಟರ್ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದ್ದು, 519.46 ಮೀ. ನೀರು ಭರ್ತಿಯಾಗಿದೆ. ಕಂಗಾಲಾಗಿದ್ದ ರೈತರ ಮೊಗದಲ್ಲಿ ಇದೀಗ ಮಂದಹಾಸ ಮೂಡಿದೆ. ವಿಜಯಪುರ ಜಿಲ್ಲೆಯಲ್ಲಿ ವರುಣ ಮುನಿಸಿಕೊಂಡಿದ್ದು, ಬರಗಾಲ ಆವಾರಿಸಿದೆ.

ಇಂತಹ ಸಮಯದಲ್ಲಿ ನೀರಿಗಾಗಿ ಹಾಹಾಕಾರ ಎದ್ದಿತ್ತು. ಜೊತೆಗೆ ಜೂನ್ ತಿಂಗಳಲ್ಲಿ ಜಲಾಶಯದಲ್ಲಿ ಕೇವಲ 2 ಟಿಎಂಸಿ ಮಾತ್ರ ನೀರು ಉಳಿದಿತ್ತು. ಇದೇ ಸಮಯದಲ್ಲಿ ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಉತ್ತಮ ಮಳೆಯಾದ ಕಾರಣ ಅಪಾರ ಪ್ರಮಾಣದ ನೀರು ಜಾಲಶಯಕ್ಕೆ ಹರಿದು ಬಂದಿದೆ. ಇದರಿಂದ ಆಲಮಟ್ಟಿ ಜಲಾಶಯ ಇದೀಗ ಸಂಪೂರ್ಣ ಭರ್ತಿಯಾಗಿದೆ. ಇದನ್ನೂ ಓದಿ : ಇಂದಿರಾ ಕ್ಯಾಂಟೀನ್​​ಗಳ ಅಡುಗೆ ಮನೆಯಲ್ಲಿ ಇಲಿ, ಹೆಗ್ಗಣ; ಹೌಹಾರಿದ ಅಧಿಕಾರಿಗಳು

Related posts

ಚಿನ್ನ-ಬೆಳ್ಳಿ, ಗೋಡೆಯಲ್ಲಿ ಬಚ್ಚಿಟ್ಟಿದ್ದ ಕೋಟಿ ಹಣ ಜಪ್ತಿ – ನಿವೃತ್ತ ARTO ಆಸ್ತಿ ಕಂಡು ಅಧಿಕಾರಿಗಳೇ ದಂಗು..!

Kalpana Editor

ʻಕಾವೇರಿ ಕಿಚ್ಚುʼ – ತಮಿಳುನಾಡು ಸಿಎಂ ವಿಜಯ್‌ ಭೇಟಿ ಮುಂದೂಡಿಕೆಗೆ ಸಿಎಂ ಡಿಕೆಶಿ ಮನವಿ

Kalpana Editor

ಡಿವೋರ್ಸ್‌ ಬಳಿಕ ಖಿನ್ನತೆ; 5ನೇ ಮಹಡಿಯಿಂದ ಹಾರಿ ಮನೋವೈದ್ಯೆ ಆತ್ಮಹತ್ಯೆ..!

kknewskannada1987@gmail.com