23.6 C
ಬೆಂಗಳೂರು
September 21, 2026
kranthikidi.com
ತಾಜಾಸುದ್ದಿದೇಶ

ರಾಜ್ಯಸಭಾ ಸ್ಥಾನಕ್ಕೆ ಟಿಎಂಸಿ ಸಂಸದೆ ಕೋಯಲ್‌ ಮಲಿಕ್‌ ರಾಜೀನಾಮೆ..!

ಕೋಲ್ಕತ್ತಾ : ನಟಿಯೂ ಆಗಿರುವ ಟಿಎಂಸಿ ಸಂಸದೆ ಕೋಯಲ್‌ ಮಲಿಕ್‌ ಅವರು ಇಂದು (ಜು.16) ತಮ್ಮ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಉಪರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಇದು ಬಂಡಾಯದ ಬಿಸಿ ಎದುರಿಸುತ್ತಿರುವ ಮಮತಾ ಬ್ಯಾನರ್ಜಿ ಪಕ್ಷಕ್ಕೆ ಮತ್ತೊಂದು ಹೊಡೆತ ಬಿದ್ದಂತಾಗಿದೆ.

ರಾಜ್ಯಪಾಲರಿಗೆ ಸಲ್ಲಿಸಿದ ಪತ್ರದಲ್ಲಿ ಕೋಯಲ್‌ ಮಲಿಕ್‌, ʻನಾನು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಇದನ್ನು ದಯವಿಟ್ಟು ತಕ್ಷಣ ಜಾರಿಗೆ ತರಬೇಕು. ರಾಜ್ಯಸಭಾ ಸದಸ್ಯಳಾಗಿ ನನ್ನ ಅಧಿಕಾರಾವಧಿಯಲ್ಲಿ ಎಲ್ಲಾ ಸಹಾಯ ಮತ್ತು ಸಹಕಾರ ನೀಡಿದ್ದಕ್ಕಾಗಿ ನಾನು ನಿಮ್ಮ ಘನತೆವೆತ್ತ, ಗೌರವಾನ್ವಿತ ಉಪರಾಷ್ಟ್ರಪತಿ ಹಾಗೂ ರಾಜ್ಯಸಭಾ ಕಾರ್ಯದರ್ಶಿಯ ಎಲ್ಲಾ ಕಾರ್ಯಕಾರಿಣಿಗಳಿಗೆ ನನ್ನ ಕೃತಜ್ಞತೆ ಅರ್ಪಿಸುತ್ತೇನೆʼ ಎಂದು ಬರೆದಿದ್ದಾರೆ.

ಕೋಯಲ್ ಮಲ್ಲಿಕ್, ರಾಜ್ಯಸಭಾ ಸದಸ್ಯರಾಗಿ ರಾಜೀನಾಮೆ ನೀಡಿದ 4ನೇ ಟಿಎಂಸಿ ಸಂಸದೆ ಆಗಿದ್ದಾರೆ. ಇದಕ್ಕೂ ಮುನ್ನ ಟಿಎಂಸಿ ಸಂಸದರಾದ ಸುಶ್ಮಿತಾ ದೇವ್, ಸುಖೇಂದು ಶೇಖರ್ ರೇ ಮತ್ತು ಪ್ರಕಾಶ್ ಚಿಕ್ ಬರೈಕ್ ಕೂಡ ಮೇಲ್ಮನೆಯಿಂದ ಕೆಳಗಿಳಿದಿದ್ದರು. ಮಲ್ಲಿಕ್ ಅವರ ರಾಜೀನಾಮೆಯೊಂದಿಗೆ, ರಾಜ್ಯಸಭೆಯಲ್ಲಿ ಟಿಎಂಸಿಯ ಬಲ 9 ಕ್ಕೆ ಇಳಿದಿದೆ.

ಏಪ್ರಿಲ್ 6 ರಂದು ದೆಹಲಿಯಲ್ಲಿ ಅವರು ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆದ್ರೆ ಕೋಯಲ್ ಮಲ್ಲಿಕ್ ತಮ್ಮ ಅಧಿಕಾರವಧಿಯಲ್ಲಿ ಒಂದು ಬಾರಿಯೂ ರಾಜ್ಯಸಭೆಯ ಸಭೆಗೆ ಹಾಜರಾಗಿಲ್ಲ ಎಂದು ಮೂಲಗಳು ಹೇಳಿಕೊಂಡಿವೆ. ಕೋಯಲ್ ಮಲ್ಲಿಕ್ ತಮ್ಮ ರಾಜೀನಾಮೆ ಸಲ್ಲಿಸಿದ ಸ್ವಲ್ಪ ಸಮಯದಲ್ಲೇ ಕೇಂದ್ರ ಬಿಜೆಪಿ ಸಚಿವ ಭೂಪೇಂದರ್ ಯಾದವ್ ಅವರನ್ನ ಭೇಟಿಯಾಗಿದ್ದಾರೆ. ಇದರಿಂದ ಅವರು ಬಿಜೆಪಿ ಸೇರ್ಪಡೆಯಾಗುತ್ತಾರೆ ಅನ್ನೋ ವದಂತಿಯೂ ಹಬ್ಬಿದೆ. ಇದನ್ನೂ ಓದಿ : ಪತಿ ಕಿರುಕುಳಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆಗೆ ಯತ್ನ – ಪಿಎಸ್ಐ ಅರೆಸ್ಟ್‌..!

Related posts

ಬಿಡದಿ ಟೌನ್ ಶಿಪ್: ಬಲವಂತವಾಗಿ ಒಬ್ಬೇ ಒಬ್ಬರ ಜಮೀನನ್ನೂ ಪಡೆದುಕೊಳ್ಳುವುದಿಲ್ಲ; ಸಿಎಂ ಡಿ.ಕೆ.ಶಿವಕುಮಾರ್ ಖಚಿತ ನುಡಿ

Kalpana Editor

ಫಿಫಾ ವಿಶ್ವಕಪ್‌ನಲ್ಲಿ ಮೊರಾಕ್ಕೊ ಸೋತಿದ್ದಕ್ಕೆ ಕಣ್ಣೀರಿಟ್ಟ ನಟಿ ನೋರಾ ಫತೇಹಿ

Kalpana Editor

ತಾರಕಕ್ಕೇರಿದ ಬಿಡದಿ ಭೂಯುದ್ಧ – ಬಿಜೆಪಿ ಬಿಟ್ಟು ಜೆಡಿಎಸ್ ಪ್ರತ್ಯೇಕ ಪಾದಯಾತ್ರೆ..!

Kalpana Editor