22.1 C
ಬೆಂಗಳೂರು
September 21, 2026
kranthikidi.com
ತಾಜಾಸುದ್ದಿದೇಶಸಿನಿಮಾ

ರಣವೀರ್ ಸಿಂಗ್ 3 ವರ್ಷ ಬ್ಯಾನ್ ಆಗಿಲ್ಲ – ಎಫ್‌ಡಬ್ಲುಐಸಿಇ ಸ್ಪಷ್ಟನೆ..!

ಮುಂಬೈ : ರಣವೀರ್ ಸಿಂಗ್ ನಟನ ವಿರುದ್ಧ ನಿಷೇಧ ಹೇರಲಾಗಿದೆ ಎಂಬ ಸುದ್ದಿಗಳ ನಡುವೆ, ಪಶ್ಚಿಮ ಭಾರತ ಚಲನಚಿತ್ರ ನೌಕರರ ಒಕ್ಕೂಟ ಇದೀಗ ಸ್ಪಷ್ಟನೆ ನೀಡಿದೆ. ಇದು ಬ್ಯಾನ್ ಅಲ್ಲ, ನಾನ್-ಕೋಆಪರೇಷನ್ ಮಾತ್ರ ಎಂದು ಎಫ್‌ಡಬ್ಲುಐಸಿಇ ಮುಖ್ಯ ಸಲಹೆಗಾರ ಅಶೋಕ್ ಪಂಡಿತ್ ಹೇಳಿದ್ದಾರೆ.

ಡಾನ್ 3 ಸಿನಿಮಾದ ವಿವಾದದ ಬಳಿಕ ರಣವೀರ್ ಸಿಂಗ್ ವಿರುದ್ಧ ಎಫ್‌ಡಬ್ಲುಐಸಿಇ ನಾನ್-ಕೋಆಪರೇಷನ್ ಘೋಷಿಸಿತ್ತು. ಇದರ ಬೆನ್ನಲ್ಲೇ ನಟನನ್ನು ಚಿತ್ರರಂಗದಿಂದ ಬ್ಯಾನ್ ಮಾಡಲಾಗಿದೆ ಎಂಬ ಸುದ್ದಿ ಹರಿದಾಡಿತ್ತು. ಈ ಕುರಿತು ಅಶೋಕ್ ಪಂಡಿತ್ ಪ್ರತಿಕ್ರಿಯಿಸಿ, ಬ್ಯಾನ್ ಮಾಡಲು ನಾವು ಕೋರ್ಟ್ ಅಲ್ಲ. ನಮ್ಮ ಸಂಘದ 30 ವಿಭಾಗಗಳ ಸದಸ್ಯರು ರಣವೀರ್ ಜೊತೆ ಕೆಲಸ ಮಾಡಬಾರದು ಎಂದು ಮಾತ್ರ ಸೂಚನೆ ನೀಡಿದ್ದೇವೆ ಎಂದು ಹೇಳಿದ್ದಾರೆ.

ರಣವೀರ್ ಸಿಂಗ್ ಡಾನ್ 3 ಸಿನಿಮಾದಿಂದ ಹೊರಬಂದ ಬಳಿಕ ಈ ವಿವಾದ ಆರಂಭವಾಗಿದ್ದು, ನಿರ್ಮಾಪಕರಾದ ಫರ್ಹಾನ್ ಅಖ್ತರ್ ಹಾಗೂ ರಿತೇಶ್ ಸಿಧ್ವಾನಿ ಈಗಾಗಲೇ ಸಿನಿಮಾದ ಪ್ರೀ-ಪ್ರೊಡಕ್ಷನ್‌ಗಾಗಿ ಸುಮಾರು 45 ಕೋಟಿ ರೂ. ವೆಚ್ಚ ಮಾಡಿರುವುದಾಗಿ ತಿಳಿಸಿದೆ. ಈ ಹಿನ್ನೆಲೆ ಸಮಸ್ಯೆ ಬಗೆಹರಿಯುವವರೆಗೆ ರಣವೀರ್ ಜೊತೆ ಕೆಲಸ ಮಾಡದಂತೆ ಸದಸ್ಯರಿಗೆ ಸೂಚಿಸಲಾಗಿದೆ. ಈ ರೀತಿಯ ಘಟನೆಗಳು ನಿರ್ಮಾಪಕರಿಗೆ ದೊಡ್ಡ ನಷ್ಟ ಉಂಟುಮಾಡುತ್ತವೆ. ಎಲ್ಲರೂ ಕೂತು ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ರಣವೀರ್ ಸಿಂಗ್ ಆಪ್ತ, ರಣವೀರ್ ಚಿತ್ರರಂಗ ಮತ್ತು ಡಾನ್ ಫ್ರಾಂಚೈಸಿಗೆ ಗೌರವ ಕೊಡುತ್ತಾರೆ. ಈ ವಿಚಾರವನ್ನು ಸಾರ್ವಜನಿಕವಾಗಿ ದೊಡ್ಡದು ಮಾಡದೇ ಗೌರವಯುತವಾಗಿ ನಿರ್ವಹಿಸಲು ಅವರು ಮೌನವಾಗಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ. ರಣವೀರ್ ಸಿಂಗ್ ವಿರುದ್ಧ ಬ್ಯಾನ್ ಅಲ್ಲ, “ನಾನ್-ಕೋಆಪರೇಷನ್” ಘೋಷಿಸಲಾಗಿದೆ ಎಂದು ಎಫ್‌ಡಬ್ಲುಐಸಿಇ ಸ್ಪಷ್ಟಪಡಿಸಿದೆ. ಡಾನ್ 3 ಸಿನಿಮಾದಿಂದ ರಣವೀರ್ ಸಿಂಗ್ ಹೊರಬಂದಿದ್ದರಿಂದ ಈ ವಿವಾದ ಆರಂಭವಾಗಿದೆ.

ನಿರ್ಮಾಪಕರು ಸಿನಿಮಾದ ಪ್ರೀ-ಪ್ರೊಡಕ್ಷನ್ ಕೆಲಸಗಳಿಗೆ ಈಗಾಗಲೇ ಸುಮಾರು 45 ಕೋಟಿ ರೂ. ಖರ್ಚು ಮಾಡಿದ್ದರು. ಆದರೆ ರಣವೀರ್ ಸಿಂಗ್ ಈ ವಿಚಾರಕ್ಕೆ ಸಂಬಂಧಿಸಿ ಎಫ್‌ಡಬ್ಲುಐಸಿಇ ಮುಂದೆ ಹಾಜರಾಗಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಇದರಿಂದ ಅಸಮಾಧಾನಗೊಂಡ ಎಫ್‌ಡಬ್ಲುಐಸಿಇ, ಸಮಸ್ಯೆ ಬಗೆಹರಿಯುವವರೆಗೆ ತಮ್ಮ ಸದಸ್ಯರು ರಣವೀರ್ ಜೊತೆ ಕೆಲಸ ಮಾಡಬಾರದು ಎಂದು ಸೂಚನೆ ನೀಡಿದೆ.

ಪಶ್ಚಿಮ ಭಾರತ ಚಲನಚಿತ್ರ ನೌಕರರ ಒಕ್ಕೂಟ (ಎಫ್‌ಡಬ್ಲುಐಸಿಇ) ಎಂದರೆ ಭಾರತೀಯ ಚಿತ್ರರಂಗದಲ್ಲಿ ಕೆಲಸ ಮಾಡುವ ಕಾರ್ಮಿಕರು ಮತ್ತು ತಾಂತ್ರಿಕ ಸಿಬ್ಬಂದಿಯ ಸಂಘಟನೆ. ಇದರಲ್ಲಿ ಲೈಟ್‌ಮ್ಯಾನ್, ಮೇಕಪ್ ಆರ್ಟಿಸ್ಟ್, ಡ್ಯಾನ್ಸರ್, ಎಡಿಟರ್, ಕ್ಯಾಮೆರಾ ಸಿಬ್ಬಂದಿ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ವಿಭಾಗಗಳ ಸಿಬ್ಬಂದಿ ಸದಸ್ಯರಾಗಿರುತ್ತಾರೆ. ಸಿನಿಮಾ ಹಾಗೂ ಟಿವಿ ಕ್ಷೇತ್ರದ ಕಾರ್ಮಿಕರ ಹಕ್ಕುಗಳ ರಕ್ಷಣೆ, ವೇತನ, ಕೆಲಸದ ನಿಯಮಗಳು ಮತ್ತು ವಿವಾದಗಳ ಬಗ್ಗೆ ಈ ಸಂಘಟನೆ ಕೆಲಸ ಮಾಡುತ್ತದೆ.

Related posts

ವರ್ತೂರು ಗ್ರೌಂಡ್‌ನಲ್ಲಿ ವ್ಯಕ್ತಿಯ ರುಂಡ ಪತ್ತೆ – ಪೊಲೀಸರಿಂದ ತ್ರೀವ ತನಿಖೆ..!

Kalpana Editor

ನಾಪತ್ತೆಯಾಗಿದ್ದ ಬಾಲಕಿ ಶವ ಪತ್ತೆ; ಆರೋಪಿಯನ್ನು ಹೊಡೆದು ಕೊಂದ ಸ್ಥಳೀಯರು..!

Kalpana Editor

ಪಾನ್ ಮಸಾಲಾ ಜಾಹೀರಾತು; ಶಾರುಖ್, ದೇವಗನ್, ಶ್ರಾಫ್‌ಗೆ ಎಫ್‌ಡಿಎ ನೋಟಿಸ್..!

kknewskannada1987@gmail.com