kranthikidi.com
ತಾಜಾಸುದ್ದಿರಾಜ್ಯ

ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ಯು.ಟಿ.ಖಾದರ್ ರಾಜೀನಾಮೆ..!

ಬೆಂಗಳೂರು : ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಸರ್ಕಾರದಲ್ಲಿ ಸಚಿವರಾಗುವುದು ಪಕ್ಕಾ ಆದ ಹಿನ್ನೆಲೆ ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ಯು.ಟಿ.ಖಾದರ್ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಲೋಕಭವನದಲ್ಲೇ ಡೆಪ್ಯುಟಿ ಸ್ಪೀಕರ್​ಗೆ ಖಾದರ್​​ ರಾಜೀನಾಮೆ ಪತ್ರ ಸಲ್ಲಿಸಿದ್ದು, ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲು ಬರುವಂತೆ ನಿಯೋಜಿತ ಸಿಎಂ ಡಿ.ಕೆ. ಶಿವಕುಮಾರ್​​ ಅವರಿಂದ ಕರೆ ಬೆನ್ನಲ್ಲೇ ಈ ವಿದ್ಯಮಾನ ನಡೆದಿದೆ.

ಸ್ಪೀಕರ್ ಆಗಿ ಮೂರು ವರ್ಷಗಳ ಅವಧಿಯಲ್ಲಿ ಸಹಕಾರ ನೀಡಿದ್ದಕ್ಕೆ ರಾಜ್ಯಪಾಲ ಥಾವರ್​​ಚಂದ್​ ಗೆಹ್ಲೋಟ್​​ಗೆ ಯು.ಟಿ. ಖಾದರ್​​ ಧನ್ಯವಾದ ತಿಳಿಸಿದ್ದಾರೆ. ಲೋಕಭವನಕ್ಕೆ ತೆರಳಿ ಗವರ್ನರ್​​ ಭೇಟಿಯಾಗಿರುವ ಅವರು, ರಾಜ್ಯಪಾಲರಿಗೆ ರಾಜೀನಾಮೆ ವಿಷಯ ತಿಳಿಸಿದ್ದಾರೆ ಎನ್ನಲಾಗಿದೆ. ಇನ್ನು ಈ ಹಿಂದೆ ಆರೋಗ್ಯ ಸಚಿವರಾಗಿ ಸೇವೆ ಸಲ್ಲಿಸಿರುವ ಅನುಭವ ಹೊಂದಿರುವ ಖಾದರ್​​ಗೆ ಡಿಕೆಶಿ ಸರ್ಕಾರದಲ್ಲೂ ಅದೇ ಖಾತೆ ಸಿಗಬಹುದೆಂಬ ನಿರೀಕ್ಷೆ ಇದೆ. ಇದನ್ನೂ ಓದಿ : ಹೆಚ್‌ಡಿ ದೇವೇಗೌಡರ ಕಾಲಿಗೆ ಬಿದ್ದು, ಆಶೀರ್ವಾದ ಪಡೆದ ಡಿಕೆ ಶಿವಕುಮಾರ್‌

ಸಚಿವ ಸ್ಥಾನದ ವಿಚಾರವಾಗಿ ಪ್ರತಿಕ್ರಿಯಿಸಿರುವ ಯು.ಟಿ. ಖಾದರ್​​, ನಾನು ಯಾವುದೇ ಖಾತೆಗೆ ಬೇಡಿಕೆ ಇಟ್ಟಿಲ್ಲ. ಆದರೆ ಆರೋಗ್ಯ ಖಾತೆ ಅಥವಾ ವಸತಿ ಖಾತೆ ಸಿಕ್ಕರೆ ಒಳಿತೆಂಬ ಬಯಕೆ ಇದೆ. ನಾಯಕರು ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ. ಉಪಮುಖ್ಯಮಂತ್ರಿ ಸ್ಥಾನ ಕೊಟ್ಟರೂ ನಿಭಾಯಿಸಲು ತಾನು ಸಿದ್ಧ. ಯಾವ ಬಾಲ್ ಬಂದರೂ ಬ್ಯಾಟಿಂಗ್ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಯು.ಟಿ. ಖಾದರ್ ಸಚಿವರಾಗುವುದು ಖಚಿತವಾಗಿರುವ ಹಿನ್ನೆಲೆ ಬೆಂಬಲಿಗರಿಂದ ಸಂಭ್ರಮಾಚರಣೆ ನಡೆದಿದೆ. ಬೆಂಗಳೂರಿನ ಗಾಲ್ಫ್ ಗ್ರೌಂಡ್ ಬಳಿ ಇರುವ ಖಾದರ್​ ನಿವಾಸಕ್ಕೆ ಆಗಮಿಸಿ ಹಲವರು ಶುಭ ಕೋರುತ್ತಿದ್ದಾರೆ.

Related posts

ರಾಜ್ಯದ ನೂತನ ಡಿಸಿಎಂ ಆಗಿ ಜಿ. ಪರಮೇಶ್ವರ್‌ ಪ್ರಮಾಣವಚನ ಸ್ವೀಕಾರ..!

Kalpana Editor

ಬೆಂಗಳೂರಿನಲ್ಲಿ ಫುಟ್​ಪಾತ್ ತೆರವು ಕಾರ್ಯಾಚರಣೆ ಆರಂಭ..!

Kalpana Editor

ಐಪಿಎಲ್​ ಆಟಗಾರರಿಗೆ ಎಚ್ಚರಿಕೆ: ಸ್ಮಾರ್ಟ್​ ಗ್ಲಾಸ್ ನಿಷೇಧ..!

Kalpana Editor