29.2 C
ಬೆಂಗಳೂರು
June 10, 2026
kranthikidi.com
ತಾಜಾಸುದ್ದಿದೇಶ

ಹಠಾತ್ ಬಿರುಗಾಳಿ ಸಹಿತ ಮಳೆ; ಏರ್‌ಪೋರ್ಟ್‌ನಲ್ಲಿ ಏರ್‌ಇಂಡಿಯಾ ವಿಮಾನಗಳು ಜಖಂ

ನವದೆಹಲಿ : ಹಠಾತ್ ಬಿರುಗಾಳಿ ಸಹಿತ ಭಾರೀ ಮಳೆಗೆ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 3 ಏರ್ ಇಂಡಿಯಾ ವಿಮಾನಗಳು ಜಖಂಗೊಂಡಿವೆ. ಬಿರುಗಾಳಿಗೆ ಸಿಕ್ಕಿ ರನ್‌ವೇನಲ್ಲಿದ್ದ ಏಣಿಗಳು ಮತ್ತು ಇತರ ತಾಂತ್ರಿಕ ಉಪಕರಣಗಳು ವಿಮಾನಗಳಿಗೆ ಡಿಕ್ಕಿಯಾದ ಪರಿಣಾಮ ಏರ್ ಇಂಡಿಯಾ ಸಂಸ್ಥೆಯ ಮೂರು ವಿಮಾನಗಳು ಜಖಂಗೊಂಡಿವೆ.

ನೆನ್ನೆ (ಭಾನುವಾರ) ಸಂಜೆ 4:40ರ ಸುಮಾರಿಗೆ ವಿಮಾನ ನಿಲ್ದಾಣದ ಟರ್ಮಿನಲ್ 2ರ ಬಳಿ ಘಟನೆ ನಡೆದಿದ್ದು, ಏಕಾಏಕಿ ಬೀಸಿದ ಬಿರುಗಾಳಿಯ ರಭಸಕ್ಕೆ ರನ್‌ವೇನಲ್ಲಿದ್ದ ಏಣಿಗಳು ಮತ್ತು ಇತರ ತಾಂತ್ರಿಕ ಉಪಕರಣಗಳು ವಿಮಾನಗಳಿಗೆ ಡಿಕ್ಕಿ ಹೊಡೆದಿವೆ ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆಯ ಬಳಿಕ ಜಖಂಗೊಂಡಿರುವ ಮೂರೂ J320 (ವಿಮಾನ ಸಂಖ್ಯೆ) ಮಾದರಿಯ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸದ್ಯ ಅವುಗಳ ರಿಪೇರಿ ಕೆಲಸ ನಡೆಯುತ್ತಿದೆ. ಇವುಗಳಲ್ಲಿ ಎರಡು ವಿಮಾನಗಳು ಕೆಲವೇ ದಿನಗಳಲ್ಲಿ ಪುನಃ ಹಾರಾಟಕ್ಕೆ ಸಿದ್ಧವಾಗಲಿವೆ. ಆದರೆ ಮತ್ತೊಂದು ವಿಮಾನ ತೀವ್ರ ಹಾನಿಗೊಳಗಾಗಿರುವುದರಿಂದ ಅದರ ರಿಪೇರಿಗೆ ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ : ಮಾಜಿ ಪ್ರಧಾನಿಯನ್ನ ರಾಜ್ಯ ಸಭೆಗೆ ಕಳುಹಿಸೋಕೆ ಬಿಜೆಪಿಯವರು ಒಪ್ಪಿಲ್ಲ; ರಣದೀಪ್ ಸಿಂಗ್ ಸುರ್ಜೇವಾಲ

ಏರ್ ಟ್ರಾಫಿಕ್ ಕಂಟ್ರೋಲ್‌ನಿಂದ ಹವಾಮಾನ ವೈಪರೀತ್ಯದ ಬಗ್ಗೆ ಯಾವುದೇ ಮುನ್ಸೂಚನೆ ಸಿಗದೇ ಇದ್ದುದರಿಂದ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಆದ್ದರಿಂದ ಘಟನೆ ಸಂಭವಿಸಿದೆ ಎಂದು ವಿಮಾನ ನಿಲ್ದಾಣದ ಆಡಳಿತ ಮಂಡಳಿ ತಿಳಿಸಿದೆ. ಬಿರುಗಾಳಿಯ ರಭಸಕ್ಕೆ ಏರ್ ಇಂಡಿಯಾ ಮಾತ್ರವಲ್ಲದೆ ಇತರ ಕೆಲವು ವಿಮಾನಯಾನ ಸಂಸ್ಥೆಗಳ ವಿಮಾನಗಳಿಗೂ ಸಣ್ಣಪುಟ್ಟ ಹಾನಿಯಾಗಿದೆ ಎಂದು ಮೂಲಗಳು ತಿಳಿಸಿವೆ ಎನ್ನಲಾಗಿದೆ.

Related posts

ಸಿದ್ದರಾಮಯ್ಯ ಪದತ್ಯಾಗದ ಬೆನ್ನಲ್ಲೇ, ಒಬಿಸಿಗೆ ಕಾಂಗ್ರೆಸ್​​ ಬಂಪರ್..!

Kalpana Editor

ರಾಜೀನಾಮೆ ಬೆನ್ನಲ್ಲೇ ದೆಹಲಿಗೆ ಸಿದ್ದರಾಮಯ್ಯ – ಹೈಕಮಾಂಡ್ ನಾಯಕರ ಭೇಟಿ ಹಿಂದಿನ ಗುಟ್ಟೇನು..?

Kalpana Editor

ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ‘ಕಾಕ್ರೋಚ್ ಜನತಾ ಪಕ್ಷ’ದ ಶಾಂತಿಯುತ ಹೆಜ್ಜೆ

Kalpana Editor