kranthikidi.com
ತಾಜಾಸುದ್ದಿಸಿನಿಮಾ

ತಮ್ಮ ಅಭಿಮಾನಿಗಳಿಗೆ ಜಬರ್ದಸ್ತ್ ಗುಡ್‌ನ್ಯೂಸ್ ಕೊಟ್ಟ ಕಿಚ್ಚ ಸುದೀಪ್

ಸ್ಯಾಂಡಲ್‌ವುಡ್‌ನಲ್ಲಿ `ನೆಪೋಟಿಸಂ’ ಬಿರುಸಿನ ಚರ್ಚೆಯ ಬಳಿಕ ಇಂದು (ಬುಧವಾರ) ಬೆಳಗ್ಗೆ ಕಿಚ್ಚ ಸುದೀಪ್ ತಮ್ಮ ಅಭಿಮಾನಿಗಳಿಗೆ ಜಬರ್ದಸ್ತ್ ನ್ಯೂಸ್ ಕೊಟ್ಟಿದ್ದಾರೆ. ನಾಲ್ಕು ಚಿತ್ರಗಳನ್ನು ತಾವು ಈಗಾಗ್ಲೇ ಲಾಕ್ ಮಾಡ್ಕೊಂಡಿರೋ ವಿಚಾರ ಅಧಿಕೃತವಾಗಿ ಘೋಷಿಸಿದ್ದಾರೆ. ಜೊತೆಗೆ ಅವರ ಬಿಆರ್‌ಬಿ (ಬಿಲ್ಲಾ ರಂಗ ಭಾಷ) ಚಿತ್ರ ಇದೇ ವರ್ಷದಲ್ಲೇ ರಿಲೀಸ್ ಆಗುವ ಅತಿ ರೋಚಕ ಸುದ್ದಿಯನ್ನ ತಮ್ಮ ಎಕ್ಸ್ ಖಾತೆಯಲ್ಲಿ ಘೋಷಣೆ ಮಾಡಿದ್ದಾರೆ.

ಅಭಿಮಾನಿಗಳನ್ನು ಉದ್ದೇಶಿಸಿ ಮಾಹಿತಿ ಹಂಚಿಕೊಂಡ ಕಿಚ್ಚ ಸುದೀಪ್‌ ‘ಸಿನಿಮಾ ಮಾಡೋದು ಬಿಟ್ಟು ಬೇರೇನೂ ಬೇಕಾಗಿಲ್ಲ. ನೀವು ಕೊಡುವ ಪ್ರೀತಿ ಕಾಳಜಿ ನನ್ನನ್ನು ಸಿನಿಮಾ ಮಾಡುವ ಉತ್ಸಾಹಕ್ಕೆ ಸದಾ ಪ್ರೇರೇಪಿಸುತ್ತಲೇ ಇರುತ್ತೆ. ನೀವು ಕೊಡುವ ಉತ್ತೇಜನವನ್ನ ನಾನು ಲಘುವಾಗಿ ತೆಗೆದುಕೊಂಡಿಲ್ಲ. ಬೇರೆ ವಿಚಾರಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. 2026ಕ್ಕೆ ಬಿಆರ್‌ಬಿ ಚಿತ್ರದ ಜೊತೆ ನಿಮ್ಮ ಮುಂದೆ ಬರುತ್ತೇನೆ. ಜೊತೆಗೆ 4 ಸ್ಕ್ರಿಪ್ಟ್‌ಗಳನ್ನು ಲಾಕ್ ಮಾಡಿದ್ದು, ಶೀಘ್ರದಲ್ಲೇ ಅದರ ಬಗ್ಗೆ ಮಹಿತಿ ಕೊಡಲಿದ್ದೇನೆ’ ಎಂದಿದ್ದಾರೆ.

ಒಟ್ಟೊಟ್ಟಿಗೆ ನಾಲ್ಕು ಸಿನಿಮಾಗಳನ್ನು ಕೈಗೆತ್ತಿಕೊಂಡಿರುವ ಕಿಚ್ಚ ಸುದೀಪ್‌ ಈ ಕುರಿತು ಶೀಘ್ರದಲ್ಲೇ ಮಾಹಿತಿ ನೀಡಲಿದ್ದಾರೆ. ಮುಖ್ಯವಾಗಿ ಇಲ್ಲಿ ಸುದೀಪ್ ನಿರ್ದೇಶನ ಮಾಡ್ತಾರೆ ಅನ್ನೋದೇ ವಿಶೇಷ. ಮಾಣಿಕ್ಯ ಚಿತ್ರದ ಬಳಿಕ ಕಿಚ್ಚ ನಟನೆ ಜೊತೆಗೆ ನಿರ್ದೇಶನ ಮಾಡ್ತಿರೋದು ಫ್ಯಾನ್ಸ್‌ಗೆ ಎಕ್ಸೈಟಿಂಗ್ ನ್ಯೂಸ್ ಆಗಿತ್ತು. ಈ ವದಂತಿ ಸುದ್ದಿಯನ್ನ ಇದೀಗ ಖಚಿತಪಡಿಸಿದ್ದಾರೆ. ಜೊತೆಗೆ ಬಿಆರ್‌ಬಿ ಚಿತ್ರ ಯಾವಾಗ ಎಂದು ಕಾಯುತ್ತಿದ್ದ ಫ್ಯಾನ್ಸ್‌ಗೆ ಖುಷಿ ಕೊಟ್ಟಿದ್ದಾರೆ. ಇದನ್ನೂ ಓದಿ : ಜೂನ್ 13 ರಿಂದ ಪ್ರಧಾನಿ ನರೇಂದ್ರ ಮೋದಿ ಯುರೋಪ್ ಪ್ರವಾಸ..!

Related posts

ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಪಟುಗಳಿಗೆ ಲಕ್ಷ ಲಕ್ಷ ಪ್ರೋತ್ಸಾಹಧನ..!

Kalpana Editor

ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಬಹಳ ಗಂಭೀರ ವಿಷಯ; ಕರ್ನಾಟಕ ಹೈಕೋರ್ಟ್​​

Kalpana Editor

ಎಸ್‌ಡಿಆರ್‌ಎಫ್‌ ಸಿಪಿಐ ನೇಣು ಬಿಗಿದುಕೊಂಡು ಆತ್ಮಹತ್ಯೆ..!

Kalpana Editor