28.2 C
ಬೆಂಗಳೂರು
July 11, 2026
kranthikidi.com
ತಾಜಾಸುದ್ದಿರಾಜಕೀಯರಾಜ್ಯ

ಆರ್‌ಎಸ್‌ಎಸ್‌ ವಿರುದ್ಧ ಬಿ.ಕೆ ಹರಿಪ್ರಸಾದ್ ಕಿಡಿ; ನಾವು ಯಾವತ್ತು ಒಪ್ಪಿಕೊಳ್ಳುವುದಿಲ್ಲ..!

ಹುಬ್ಬಳ್ಳಿ : ಆರ್‌ಎಸ್‌ಎಸ್‌ ನೋಂದಣಿ ವಿಚಾರದಲ್ಲಿ ಕಾಂಗ್ರೆಸ್‌ ಪಕ್ಷ ಬಹಳಷ್ಟು ಸ್ಪಷ್ಟವಾಗಿದೆ. ನಮ್ಮ ಪಕ್ಷ ಯಾವತ್ತೂ ಆರ್‌ಎಸ್‌ಎಸ್‌ ಒಪ್ಪಿಕೊಳ್ಳುವುದಿಲ್ಲ ಎಂದರು. ಫುಟ್ ಪಾತ್ ಮೇಲಿರುವ ಡಬ್ಬಿ ಅಂಗಡಿಗೂ ಅನುಮತಿ ನೋಂದಣಿ ಅಂತ ಇರುತ್ತೇ. ಆದರೆ ಆ‌ರ್.ಎಸ್.ಎಸ್ ಗೆ ಮಾತ್ರ ಏನು ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹೇಳಿದರು.

ಹುಬ್ಬಳ್ಳಿಯಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಆ‌ರ್.ಎಸ್.ಎಸ್ ತ್ರಿವರ್ಣ ಧ್ವಜವನ್ನು ವಿರೋಧಿಸುವವರು. ಆರ್.ಎಸ್.ಎಸ್ ನೋಂದಣಿ ಮಾಡಿಸಿಕೊಳ್ಳಬೇಕು. ಕೋಟ್ಯಾಂತರ ರೂಪಾಯಿ ಗುರುದಕ್ಷಿಣಿ ಹೆಸರಲ್ಲಿ ಬ್ಲಾಕ್ ಮನಿ ಬರುತ್ತಿದೆ. ಇದೆಲ್ಲವನ್ನೂ ನೋಡಿದರೆ ಆ‌ರ್.ಎಸ್‌.ಎಸ್ ಕಾರ್ಯವೈಖರಿ ಅರ್ಥವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆರ್‌ಎಸ್‌ಎಸ್‌ ತತ್ವ-ಸಿದ್ಧಾಂತವನ್ನು ಕಾಂಗ್ರೆಸ್‌ ಪಕ್ಷ ಎಂದಿಗೂ ಒಪ್ಪಿಕೊಳ್ಳುವುದಿಲ್ಲ.

ದೇಶದ ಸಂವಿಧಾನದ ಪ್ರಕಾರ, ಅದು ನೋಂದಣಿ ಆಗಲೇಬೇಕು. ಭಾರತ ಬಹುತ್ವದ ರಾಷ್ಟ್ರವಾಗಿದೆ. ಆರ್‌ಎಸ್‌ಎಸ್ ಒಂದು ರಾಷ್ಟ್ರ, ಒಂದು ಭಾಷೆ, ಒಂದು ಧರ್ಮ ಎಂಬ ಸೈದ್ಧಾಂತಿಕ ಮನೋಭಾವ ಹೊಂದಿದೆ. ಸಂವಿಧಾನ ಹಾಗೂ ತ್ರಿವರ್ಣ ಧ್ವಜವನ್ನು ವಿರೋಧಿಸುತ್ತಿದೆ. ಅದಕ್ಕೆ ಎಲ್ಲೆಲ್ಲಿಂದಲೋ ಗುರುದಕ್ಷಿಣೆ ಬರಬಹುದು. ಅದರಲ್ಲಿರುವ ಕಪ್ಪು ಹಣ ಎಲ್ಲಿದೆ, ಯಾವುದಕ್ಕೆ ಬಳಕೆಯಾಗುತ್ತದೆ ಎಂದು ತಿಳಿಸಲಿ’ ಎಂದು ಆಗ್ರಹಿಸಿದರು. ಇದನ್ನೂ ಓದಿ : ಜಿನೆವಾದಲ್ಲಿ ಅಮೆರಿಕ-ಇರಾನ್‌ ಶಾಂತಿ ಮಾತುಕತೆ; ಮುನೀರ್‌ ಹತ್ಯೆಗೆ ಇಸ್ರೇಲ್‌ ಸಂಚು..!

Related posts

ಪರಪ್ಪನ ಅಗ್ರಹಾರದಿಂದ 24 ಜೀವಾವಧಿ ಖೈದಿಗಳಿಗೆ ಅವಧಿ ಪೂರ್ವ ಬಿಡುಗಡೆ ಭಾಗ್ಯ..!

Kalpana Editor

ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು ದುರಂತ – 7 ಮಂದಿ ಬಲಿ

Kalpana Editor

ಸರ್ಕಾರದ ಎಲ್ಲಾ ಸಾಧನೆಗಳ ಶ್ರೇಯ ಪ್ರತಿಯೊಬ್ಬ ಕನ್ನಡಿಗನಿಗೆ ಅರ್ಪಣೆ – ಸಿದ್ದರಾಮಯ್ಯ

Kalpana Editor